ಏರ್‌ ಪೋರ್ಟ್‌ ಆಥೋರಿಟಿ ಆಫ್‌ ಇಂಡಿಯಾ ನೇಮಕಾತಿ 2022 | AAI Notification 2022

Telegram Group Join Now
WhatsApp Group Join Now

ಏರ್‌ ಪೋರ್ಟ್‌ ಆಥೋರಿಟಿ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು (AAI Notification 2022 ) ಹೊರಡಿಸಲಾಗಿದೆ. ಜೂನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 30 ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಯ ವಿವರ:
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) -132
ಕಿರಿಯ ಸಹಾಯಕ (ಕಚೇರಿ) -10
ಹಿರಿಯ ಸಹಾಯಕ (ಅಕೌಂಟ್‌) – 13
ಹಿರಿಯ ಸಹಾಯಕ (ಅಧಿಕೃತ ಭಾಷೆ)–1

ವೇತನ ಶ್ರೇಣಿ:
ಕಿರಿಯ ಸಹಾಯಕ (ಅಗ್ನಿಶಾಮಕ) –ರೂ. 31000-92000/-
ಕಿರಿಯ ಸಹಾಯಕ (ಕಚೇರಿ) –ರೂ. 31000-92000/-
ಹಿರಿಯ ಸಹಾಯಕ (ಅಕೌಂಟ್ಸ್‌) –ರೂ.36000-110000/-
ಹಿರಿಯ ಸಹಾಯಕ (ಅಧಿಕೃತ ಭಾಷೆ)–ರೂ.36000-110000/-

ಶೈಕ್ಷಣಿಕ ಅರ್ಹತೆ :
ಕಿರಿಯ ಸಹಾಯಕ ಅಗ್ನಿಶಾಮಕ ಸೇವೆ):
ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10 + 3 ವರ್ಷಗಳ ಡಿಪ್ಲೊಮಾ ಇನ್ ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಚಾಲನಾ ಪರವಾನಿಗೆ ಕಡ್ಡಾಯವಾಗಿ ಹೊಂದಿರಬೇಕು.

ಕಿರಿಯ ಸಹಾಯಕ (ಕಚೇರಿ):
ಟೈಪಿಂಗ್‌ನೊಂದಿಗೆ ಪದವಿ ಪಡೆದಿರಬೇಕು. ಇಂಗ್ಲಿಷ್‌ನಲ್ಲಿ 30 wpm ಅಥವಾ ಹಿಂದಿಯಲ್ಲಿ 25 wpm ಟೈಪಿಂಗ್ ಸ್ಪೀಡ್‌ ಇರಬೇಕು.

ಹಿರಿಯ ಸಹಾಯಕ (ಅಕೌಂಟ್‌):
03 ರಿಂದ 06 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್‌ನೊಂದಿಗೆ ಬಿಕಾಂ ಪದವಿ ಪಡೆದಿರಬೇಕು.

ಹಿರಿಯ ಸಹಾಯಕ (ಅಧಿಕೃತ ಭಾಷೆ):
ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ / ಐಚ್ಛಿಕ ವಿಷಯಗಳಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹಿಂದಿ/ಇಂಗ್ಲಿಷ್ ಮಾಸ್ಟರ್ಸ್‌ ಪಡೆದಿರಬೇಕು.

ವಯೋಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 30 ವರ್ಷಗಳು.
25/08/2022 ರಂತೆ OBC (ನಾನ್-ಕ್ರೀಮಿ ಲೇಯರ್) ಗೆ 3 ವರ್ಷಗಳು ಮತ್ತು 5/08/2022 ರಂತೆ SC/ST ಗೆ 5 ವರ್ಷಗಳು ವಯಸ್ಸಿನ ಸಡಿಲಿಕೆ ಇರುವುದು

ಅರ್ಜಿ ಶುಲ್ಕ:
ಸಾಮಾನ್ಯ / ಒಬಿಸಿ/ ಇಡಬ್ಲ್ಯುಎಸ್‌ : 1000/-
ಎಸ್‌/ಎಸ್‌ಟಿ/ಪಿಹೆಚ್‌/ ಎಲ್ಲಾ ವರ್ಗದ ಮಹಿಳೆಯರಿಗೆ : 0/-
ಆದರೂ, ಯಾವುದೇ ವರ್ಗವನ್ನು ಲೆಕ್ಕಿಸದೆ ಎಲ್ಲಾ ಅಭ್ಯರ್ಥಿಗಳು ಕೋವಿಡ್ 19 ಗಾಗಿ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ ರೂ.90/- ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ & ಹೆಚ್ಚಿನ ವಿವರ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು AAI ವೆಬ್‌ಸೈಟ್‌ https://www.aai.aero/en/recruitment/release/284246 ಭೇಟಿ ಕೊಡಿ.

Telegram Group Join Now
WhatsApp Group Join Now

Leave a Comment