ಜಿಲ್ಲಾಧಿಕಾರಿ ಕಛೇರಿ ಅಧಿಸೂಚನೆ 2023, ಅರ್ಹರು ಅರ್ಜಿ ಸಲ್ಲಿಸಿ | Belagavi DC Office Recruitment 2023

ಸ್ನೇಹಿತರೆ.. ನಮಸ್ಕಾರ.. ಇಂದು ಮತ್ತೊಂದು ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಈ ಒಂದು ಲೇಖನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Belagavi DC Office Recruitment 2023) ಯನ್ನು ಪ್ರಕಟಿಸಿರುವ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಪೊಲೀಸ್ ಇಲಾಖೆ ನೇಮಕಾತಿ 2023

ಜಿಲ್ಲಾ ಪಂಚಾಯತ ಹೊಸ ನೇಮಕಾತಿ, ಅರ್ಜಿ ಸಲ್ಲಿಸಿ

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ

ಬೆಳಗಾವಿ ಜಿಲ್ಲಾ ನ್ಯಾಯಾಂಗ ನೇಮಕಾತಿ ಅಧಿಸೂಚನೆ 2023

Belagavi DC Office Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಜಿಲ್ಲಾಧಿಕಾರಿ ಕಛೇರಿ, ಬೆಳಗಾವಿ
ವೇತನ ಶ್ರೇಣಿ: 17000-28950 ರೂ.
ಉದ್ಯೋಗ ಸ್ಥಳ: ಬೆಳಗಾವಿ ಜಿಲ್ಲೆ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-03-2023

ವೇತನ ಶ್ರೇಣಿ:
ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಅಧಿಸೂಚನೆಯ ಪ್ರಕಾರ 17000-28950 ರೂ. ಇರುತ್ತದೆ

ವಯೋಮಿತಿ:
ಕನಿಷ್ಠ 18 ಮತ್ತು ದಿನಾಂಕ: 23-11-2022 ಕೈ ಗರಿಷ್ಠ 55 ವರ್ಷ ಮೀರಿರಬಾರದು.

Belagavi DC Office Recruitment 2023 ಹುದ್ದೆಗಳ ವಿವರ

ಪುರಸಭೆ ಮತ್ತು ಪಟ್ಟಣ ಪಂಚಾಯತ್ ಹೆಸರುಹುದ್ದೆಗಳ ಹೆಸರು ಮತ್ತು ಸಂಖ್ಯೆ
ಅಥಣಿ ಪುರಸಭೆಪೌರಕಾರ್ಮಿಕ – 32
ಸಂಕೇಶ್ವರ ಪುರಸಭೆಪೌರಕಾರ್ಮಿಕ – 6
ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯಿತಿಪೌರಕಾರ್ಮಿಕ – 6
ಐನಾಪುರ ಪಟ್ಟಣ ಪಂಚಾಯಿತಿಪೌರಕಾರ್ಮಿಕ – 17
ಪೀರನವಾಡಿ ಪಟ್ಟಣ ಪಂಚಾಯಿತಿಪೌರಕಾರ್ಮಿಕ – 29
ಅರಭಾವಿ ಪಟ್ಟಣ ಪಂಚಾಯಿತಿಪೌರಕಾರ್ಮಿಕ – 15

ಪ್ರಮುಖ ದಿನಾಂಕಗಳು:

  • ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 13-02-2023
  • ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-ಮಾರ್ಚ್-2023

Belagavi DC Office Recruitment 2023 ಪ್ರಮುಖ ಲಿಂಕ್‌ಗಳು

ಅಥಣಿ ಪುರಸಭೆ ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಸಂಕೇಶ್ವರ ಪುರಸಭೆ ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯಿತಿ ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಐನಾಪುರ ಪಟ್ಟಣ ಪಂಚಾಯಿತಿ ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಪೀರನವಾಡಿ ಪಟ್ಟಣ ಪಂಚಾಯಿತಿ ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಅರಭಾವಿ ಪಟ್ಟಣ ಪಂಚಾಯಿತಿ ಅಧಿಕೃತ ಅಧಿಸೂಚನೆ: ಡೌನ್‌ಲೋಡ್

ಅಧಿಕೃತ ವೆಬ್‌ಸೈಟ್: belagavi.nic.in

Belagavi DC Office Recruitment 2023 ಷರತ್ತುಗಳು

  • ಕನಿಷ್ಠ ವಿದ್ಯಾರ್ಹತೆ: ಕನ್ನಡ ಭಾಷೆ ಮಾತನಾಡಲು ಗೊತ್ತಿರಬೇಕು.
  • ವಯೋಮಿತಿ: ಕನಿಷ್ಠ 18 ಮತ್ತು ದಿನಾಂಕ: 23-11-2022 ಕೈ ಗರಿಷ್ಠ 55 ವರ್ಷ ಮೀರಿರಬಾರದು
  • ಮೇಲೆ ಸೂಚಿಸಿರುವ ಪುರಸಭೆ ಮತ್ತು ಪಟ್ಟಣ ಪಂಚಾಯತ್ ನೇರಪಾವತಿ, ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ ಅಥವಾ ಗುತ್ತಿಗೆ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ಅಥವಾ ಹೊರಗುತ್ತಿಗೆ ಮೇರೆಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕನಿಷ್ಠ 02 ವರ್ಷಗಳಿಗಿಂತ ಕಡಿಮೆಯಲ್ಲದೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಮತ್ತು ಈ ನಿಯಮದ ಪ್ರಾರಂಭದ ದಿನಾಂಕದಿಂದಲೂ ಕಾರ್ಯನಿರ್ವಹಿಸುತ್ತಿರುವ, ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಸದರಿ ಹುದ್ದೆಯಲ್ಲಿ ಹಾಲಿ ಮುಂದುವರೆದಿರುವ ಪೌರಕಾರ್ಮಿಕರು / ಲೋಡರ್ / ಕ್ಲೀನರ್ ಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
  • ಹೊರಗುತ್ತಿಗೆ ನೌಕರರಿಗೆ ಹೊರಗುತ್ತಿಗೆ ಏಜೆನ್ಸಿಯಿಂದ ಪಾವತಿಸುವ ವೇತನ, ಪಿಎಫ್ ಮತ್ತು ಇ.ಎಸ್.ಐ ದಾಖಲಾತಿಗಳನ್ನು ಹಾಗೂ ಇತರೆ ಆಧಾರದ ನೌಕರರಿಗೆ ವೇತನದ ದಾಖಲಾತಿಗಳನ್ನು ನೇಮಕಾತಿಯಲ್ಲಿ ಪರಿಗಣಿಸಲಾಗುವುದು.
  • ಹೆಚ್ಚಿನ ಮಾಹಿತಿಗಾಗಿ – ಅಥಣಿ ಪುರಸಭೆ, ಸಂಕೇಶ್ವರ ಪುರಸಭೆ, ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯಿತಿ, ಐನಾಪುರ ಪಟ್ಟಣ ಪಂಚಾಯಿತಿ, ಪೀರನವಾಡಿ ಪಟ್ಟಣ ಪಂಚಾಯಿತಿ, ಅರಭಾವಿ ಪಟ್ಟಣ ಪಂಚಾಯಿತಿ ಕಚೇರಿ ಅಥವಾ ಜಿಲ್ಲಾ ನಗರಾಭಿವೃದ್ಧಿ ಕೋಶ ಬೆಳಗಾವಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ನಮೂನೆಯನ್ನು ಹಾಗೂ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು ಮತ್ತು ಸೂಚನೆಗಳ ವಿವರಗಳನ್ನು, ಅಥಣಿ ಪುರಸಭೆ, ಸಂಕೇಶ್ವರ ಪುರಸಭೆ, ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯಿತಿ, ಐನಾಪುರ ಪಟ್ಟಣ ಪಂಚಾಯಿತಿ, ಪೀರನವಾಡಿ ಪಟ್ಟಣ ಪಂಚಾಯಿತಿ, ಅರಭಾವಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಥವಾ ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಳಗಾವಿ ಕಛೇರಿಯಿಂದ ಪಡೆಯುವುದು, ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ 15-ಮಾರ್ಚ್-2023 ರೊಳಗೆ ಮುಖ್ಯಾಧಿಕಾರಿಗಳು, ಪಟ್ಟಣ
ಪಂಚಾಯತಿ/ಪುರಸಭೆ ಇವರ ಕಛೇರಿಗೆ ಸಲ್ಲಿಸಿ ಸ್ವೀಕೃತಿ ಪಡೆದಿಟ್ಟುಕೊಳ್ಳುವುದು.

13 thoughts on “ಜಿಲ್ಲಾಧಿಕಾರಿ ಕಛೇರಿ ಅಧಿಸೂಚನೆ 2023, ಅರ್ಹರು ಅರ್ಜಿ ಸಲ್ಲಿಸಿ | Belagavi DC Office Recruitment 2023”

Leave a Comment