ದ್ವಿತೀಯ ದರ್ಜೆ ಸಹಾಯಕರ ಅರ್ಹತಾ ಪಟ್ಟಿ ಪ್ರಕಟ | KPSC SDA Selection List 2022

ಕರ್ನಾಟಕ ಲೋಕಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆ ಅರ್ಹತಾ ಪಟ್ಟಿ (KPSC SDA Eligible Selection List 2022) ಯನ್ನು ಆಗಸ್ಟ್ 26 ಬಿಡುಗಡೆ ಮಾಡಿದೆ.

ಕೆಪಿಎಸ್‌ಸಿಯು 2019-20ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದು ಒಟ್ಟು 1323 ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ 2021 ರ ಸೆಪ್ಟೆಂಬರ್ 18 ಹಾಗೂ 19 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.

2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ (ಉಳಿಕ ಮೂಲ ವೃಂದ ಮತ್ತು ಹೈ.ಕ.) ಹುದ್ದೆಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

Leave a Comment