ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ 2022 PC Notification 2022 Karnataka Apply Online @ksp-recruitment.in

ಹಲವು ದಿನಗಳಿಂದ ಕರ್ನಾಟಕ ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ (KSP Recruitment 2022) ಅಧಿಸೂಚನೆಗಾಗಿ ಕಾಯುತ್ತಿದ್ದ ಪೊಲೀಸ್‌ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ (KSP)ಯು ಸಿಹಿ ಸುದ್ದಿ ನೀಡಿದೆ.

ಪೊಲೀಸ್‌ ಇಲಾಖೆಯು ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿಗೆ ಅಧಿಸೂಚನೆಯನ್ನು (PC Notification 2022 Karnataka) ಬಿಡುಗಡೆ ಮಾಡಿ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಬಯಸುವ ಅಭ್ಯರ್ಥಿಗಳಿಗೆ ಒಂದು ಸುವರ್ಣವಕಾಶವನ್ನು ನೀಡಿದೆ.

KSP ಇಲಾಖೆಯು ಒಟ್ಟು 3,484 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಇಂದು ಅಧಿಸೂಚನೆಯನ್ನು ಪ್ರಟಿಸಿದ್ದು, ಸಪ್ಟೆಂಬರ್‌ 19 ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮುಂಚೆ ಅಧಿಕೃತ ಅಧಿಸೂಚನೆಯನ್ನು ಓದಿ ಆನಂತರ ಆನ್‌ಲೈನ್‌ ಅರ್ಜಿ ಭರ್ತಿ ಮಾಡಿ.

PC Notification 2022 Karnataka

ಇಲಾಖೆಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ
ಹುದ್ದೆಯ ಹೆಸರುಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (CAR/DAR)
ಒಟ್ಟು ಹುದ್ದೆಗಳು3,484
ವೇತನ ಶ್ರೇಣಿ₹23500-47650/-
ಉದ್ಯೋಗ ಕೆಟಗರಿKarnataka Govt Jobs 2022

ಹುದ್ದೆಗಳ ಮಾಹಿತಿ:

  • ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಖಾಲಿ ಹುದ್ದೆಗಳ ವಿವರ (Non HK)
  • ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಾಮಾನ್ಯ ಪುರುಷ)- 2996
  • ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ ತೃತೀಯ ಲಿಂಗ) – 68
    ಒಟ್ಟು-3064
  • ಕಲ್ಯಾಣ ಕರ್ನಾಟಕ ವೃಂದದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಖಾಲಿ ಹುದ್ದೆಗಳ ವಿವರ
PC Notification 2022 Karnataka
ಕಲ್ಯಾಣ ಕರ್ನಾಟಕ ವೃಂದದ DAR/CAR ಖಾಲಿ ಹುದ್ದೆಗಳು

ವಯೋಮಿತಿ:

  • ಕನಿಷ್ಟ 18 ವರ್ಷ
  • ಗರಿಷ್ಠ 25 ವರ್ಷಗಳು
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ OBC ಅಭ್ಯರ್ಥಿಗಳಿಗೆ: 27 ವರ್ಷಗಳು
  • ಬುಡಕಟ್ಟು ಅಭ್ಯರ್ಥಿಗಳಿಗೆ: 30 ವರ್ಷಗಳು

ವಿದ್ಯಾರ್ಹತೆ:
ಅಭ್ಯರ್ಥಿಗಳು ಎಸ್ಎಸ್ಎಲ್ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವೇತನ ಶ್ರೇಣಿ: ₹23500-47650/-

ಅರ್ಜಿ ಶುಲ್ಕ:

  • ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ : ₹400/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ: ₹200/-

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಯ (ET-PST)
  • ವೈದ್ಯಕೀಯ ಪರೀಕ್ಷೆ

PC Notification 2022 Karnataka ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19.09.2022, ಬೆಳಿಗ್ಗೆ 10.00 ಗಂಟೆಯಿಂದ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.10.2022, ಸಂಜೆ 06.00 ಗಂಟೆಯವರೆಗೆ

ಆನ್ ಲೈನ್‌ನಲ್ಲಿ / ಅಧಿಕೃತ ಬ್ಯಾಂಕ್ ಶಾಖೆಗಳ / ಸ್ಥಳೀಯ ಅಂಚೆ ಕಚೇರಿಗಳ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 03.11.2022.

KSP Recruitment 2022 ಪ್ರಮುಖ ಲಿಂಕ್‌ ಗಳು

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿ

ಅಧಿಸೂಚನೆ (Non HK)Download
ಅಧಿಸೂಚನೆ (HK)Download
ಅಧಿಕೃತ ವೆಬ್‌ ಸೈಟ್ksp-recruitment.in

ಸಿವಿಲ್ ಪೊಲೀಸ್‌ ಪೇದೆ ನೇಮಕಾತಿ 2022

Leave a Comment