ಬೋಧಕೇತರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | RCU Notification 2023 For Non Teaching Posts

Telegram Group Join Now
WhatsApp Group Join Now

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (RCU Notification 2023) ಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

RCU Notification 2023 ಸಂಕ್ಷಿಪ್ತ ಮಾಹಿತಿ

ನೇಮಕಾತಿ ಸಂಸ್ಥೆ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ವೇತನ ಶ್ರೇಣಿ: 67,550 ರಿಂದ 1,04,600 ರೂ
ಉದ್ಯೋಗ ಸ್ಥಳ: ಬೆಳಗಾವಿ
ಅರ್ಜಿ ಸಲ್ಲಿಕೆ ಆರಂಭ: 09-02-2023

SDA ನೇಮಕಾತಿಗೆ ಅಧಿಸೂಚನೆ 2023

ಬೆಳಗಾವಿ ಜಿಲ್ಲಾ ನ್ಯಾಯಾಂಗ ನೇಮಕಾತಿ ಅಧಿಸೂಚನೆ 2023

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ

RCU Notification 2023 ಶೈಕ್ಷಣಿಕ ಅರ್ಹತೆ:

ಉಪಕುಲಸಚಿವರು:

1. ಅಂಗೀಕೃತ ಭಾರತೀಯ ಯಾವುದೇ ವಿಶ್ವವಿದ್ಯಾಲಯಗಳಿಂದ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ. 55% (ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗೆ 5% ರಿಯಾಯತಿ) ದೊಂದಿಗೆ ಸ್ನಾತಕೋತ್ತರ ಪದವಿಯನ್ನು ಉತ್ತೀರ್ಣರಾಗಿರತಕ್ಕದ್ದು ಮತ್ತು ಸರ್ಕಾರಿ ಕಛೇರಿ/ಶಿಕ್ಷಣ ಸಂಸ್ಥೆಯಲ್ಲಿ ಕಡಿಮೆ ಇಲ್ಲದ ಕನಿಷ್ಠ 10 ವರ್ಷಗಳ ಆಡಳಿತಾತ್ಮಕ ಅನುಭವವನ್ನು ಪಡೆದಿರಬೇಕು.
ಅಥವಾ
ಅಂಗೀಕೃತ ಭಾರತೀಯ ಯಾವುದೇ ವಿಶ್ವವಿದ್ಯಾಲಯಗಳಿಂದ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ. 55% (ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗೆ 5% ರಿಯಾಯತಿ) ದೊಂದಿಗೆ ಸ್ನಾತಕೋತ್ತರ ಪದವಿಯನ್ನು ಉತ್ತೀರ್ಣರಾಗಿರತಕ್ಕದ್ದು ಮತ್ತು ಭಾರತೀಯ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ/ಘಟಕ ಮಹಾವಿದ್ಯಾಲಯ/ ಅನುದಾನಿತ ಮಹಾವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಡಿಮೆ ಇಲ್ಲದ ಕನಿಷ್ಠ 10 ವರ್ಷಗಳ ಸೇವೆಯನ್ನು ಸಲ್ಲಿಸಿದವರಾಗಿರಬೇಕು.

  1. ವಿಶ್ವವಿದ್ಯಾಲಯದ ಪರಿನಿಯಮಗಳು ಮತ್ತು ಕರ್ನಾಟಕ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಇತರೆ ನಿಯಮಗಳು ಅನ್ವಯವಾಗುತ್ತವೆ.

ಸಹಾಯಕ ಕುಲಸಚಿವರು:

1. ಅಂಗೀಕೃತ ಭಾರತೀಯ ಯಾವುದೇ ವಿಶ್ವವಿದ್ಯಾಲಯಗಳಿಂದ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ. 55% (ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗೆ 5% ರಿಯಾಯತಿ)ದೊಂದಿಗೆ ಸ್ನಾತಕೋತ್ತರ ಪದವಿಯನ್ನು ಉತ್ತೀರ್ಣರಾಗಿರತಕ್ಕದ್ದು ಮತ್ತು ಸರ್ಕಾರಿ ಕಛೇರಿ ಶಿಕ್ಷಣ ಸಂಸ್ಥೆಯಲ್ಲಿ ಬೋಧನೆ ಮಾಡಿದ ಕಡಿಮೆ ಇಲ್ಲದ ಕನಿಷ್ಠ 05 ವರ್ಷಗಳ ಆಡಳಿತಾತ್ಮಕ ಅನುಭವವನ್ನು ಪಡೆದಿರಬೇಕು.

  1. ಸಾಮಾನ್ಯ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. (ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕನಿಷ್ಠ 03 ತಿಂಗಳು ತರಬೇತಿ ಪಡೆದ ಪ್ರಮಾಣಪತ್ರ ಅವಶ್ಯಕ).
  2. ವಿಶ್ವವಿದ್ಯಾಲಯದ ಪರಿನಿಯಮಗಳು ಮತ್ತು ಕರ್ನಾಟಕ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಇತರೆ ನಿಯಮಗಳು ಅನ್ವಯವಾಗುತ್ತವೆ.

ಕಛೇರಿ ಅಧೀಕ್ಷಕರು:

  1. ಅಂಗೀಕೃತ ಭಾರತೀಯ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿಯಲ್ಲಿ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ. 55% (ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗೆ 5% ರಿಯಾಯತಿ) ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
  2. ಸರ್ಕಾರಿ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಕನಿಷ್ಠ 03 ವರ್ಷ ಕಡಿಮೆ ಇಲ್ಲದಂತೆ ಕಛೇರಿ ಮೇಲ್ವಿಚಾರಣಾ ಸೇವಾ ಅನುಭವವನ್ನು ಹೊಂದಿರಬೇಕು.
  3. ವಿಶ್ವವಿದ್ಯಾಲಯದ ಪರಿನಿಯಮಗಳು ಮತ್ತು ಕರ್ನಾಟಕ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಇತರೆ ನಿಯಮಗಳು ಅನ್ವಯವಾಗುತ್ತವೆ.

RCU Notification 2023 ವೇತನ ಶ್ರೇಣಿ:

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ Rani Channamma University – (Belagavi) ದ ಅಧಿಸೂಚನೆಯ ಪ್ರಕಾರ ವೇತನ ಶ್ರೇಣಿಯು ಈ ಕೆಳಗಿನಂತೆದೆ

ಉಪಕುಲಸಚಿವರು: 67,550 ರಿಂದ 1,04,600 ರೂ
ಸಹಾಯಕ ಕುಲಸಚಿವರು: 52,650 ರಿಂದ 97,100 ರೂ
ಕಛೇರಿ ಅಧೀಕ್ಷಕರು: 43,100 ರಿಂದ 83,900 ರೂ

ವಯೋಮಿತಿ:

SC/ST/ ಪ್ರವರ್ಗ-I ರಲ್ಲಿ ಬರುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ಪ್ರವರ್ಗ-II(a), II(b), III(a), III(b) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 38 ವರ್ಷ ಮೀರಿರಬಾರದು.
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 1000 ರೂ
  • SC/ST/ ಪ್ರವರ್ಗ-I ಅಭ್ಯರ್ಥಿಗಳಿಗೆ 500 ರೂ
  • ಅಂಗವಿಕಲ ಮತ್ತು ದೃಷ್ಟಿಮಾಂದ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯತಿ ಇರುತ್ತದೆ. (ಅಧಿಕೃತ ಪ್ರಮಾಣಪತ್ರದ ಪ್ರತಿಗಳನ್ನು ಪೂರೈಸಬೇಕು)
  • ವಿವರವಾದ ಅಧಿಸೂಚನೆ ವಿವರಗಳನ್ನು ಹಾಗೂ ನಿಗದಿತ ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ www.rcub.ac.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನಿಗದಿತ ಅರ್ಜಿ ಶುಲ್ಕವನ್ನು ರಾಷ್ಟ್ರೀಕೃತ ಬ್ಯಾಂಕಿನ ಡಿ.ಡಿ. ಮೂಲಕ ಹಣಕಾಸು ಅಧಿಕಾರಿಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾಸಂಗಮ, ಬೆಳಗಾವಿ-591156 ಇವರ ಹೆಸರಿಗೆ ಪಾವತಿಸಿ, ಡಿ.ಡಿ. ಯನ್ನು ಅರ್ಜಿಯ ಜೊತೆಗೆ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅರ್ಜಿಗಳನ್ನು ಕಳುಹಿಸಿ ಕೊಡುವುದು.

RCU Notification 2023 ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಕೆಯ ಆರಂಭ ದಿನಾಂಕ: 09-02-2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 02-03-2023

ಅರ್ಜಿ ಸಲ್ಲಿಸುವ ವಿಧಾನ:
ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಕುಲಸಚಿವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾಸಂಗಮ ಬೆಳಗಾವಿ-591156, ಕರ್ನಾಟಕ ಇವರಿಗೆ ದಿನಾಂಕ: 02-03-2023 ರ ಸಂಜೆ 5.00 ಗಂಟೆಯ ಒಳಗಾಗಿ ನೊಂದಾಯಿತ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ. ನಂತರ ಬಂದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

RCU Recruitment 2023 ಪ್ರಮುಖ ಲಿಂಕ್‌ಗಳು

Telegram Group Join Now
WhatsApp Group Join Now
error: Content is protected !!