ಜಿಲ್ಲಾ ಪಂಚಾಯತ ಹೊಸ ನೇಮಕಾತಿ, ಅರ್ಜಿ ಸಲ್ಲಿಸಿ | Vijayanagara Zilla Panchayat Recruitment 2023

Telegram Group Join Now
WhatsApp Group Join Now

ಸ್ನೇಹಿತರೆ.. ನಮಸ್ಕಾರ.. ಇಂದು ಮತ್ತೊಂದು ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ವಿಜಯನಗರ ಜಿಲ್ಲಾ ಪಂಚಾಯತನಲ್ಲಿ ಖಾಲಿ‌ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Vijayanagara Zilla Panchayat Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಬ್ಯಾಂಕ್ ಆಫ್ ಬರೋಡಾ ಹೊಸ ನೇಮಕಾತಿ 2023

ಕೃಷಿ ಇಲಾಖೆ ನೇಮಕಾತಿ 2023

ಪೊಲೀಸ್ ಇಲಾಖೆ ನೇಮಕಾತಿ 2023

MSTC ನೇಮಕಾತಿ ಅಧಿಸೂಚನೆ, 1,20,000 ರೂ ವರೆಗೂ ಸಂಬಳ

Vijayanagara Zilla Panchayat Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ವಿಜಯನಗರ ಜಿಲ್ಲಾ ಪಂಚಾಯತ್
ವೇತನ ಶ್ರೇಣಿ: 10,300 ರಿಂದ 40,000 ರೂ.
ಉದ್ಯೋಗ ಸ್ಥಳ: ವಿಜಯನಗರ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 01-03-2023

ವೇತನ: ಶ್ರೇಣಿ:
ಆಯುಷ್ ತಜ್ಞ ವೈದ್ಯರು – 35000 ರೂ.
ಆಯುಷ್ ಔಷಧಿ ವಿತರಕರು – 15821 ರೂ.
ಮಲ್ಟಿ ಪರ್ಪಸ್ – 10300 ರೂ.
ಮಸಾಜಿಸ್ಟ್-I (ಪುರುಷ) – 11356 ರೂ.
ಸ್ತ್ರೀರೋಗ ಅಟೆಂಡರ್ – 10,300 ರೂ.
ಕ್ಷಾರಸೂತ್ರ ಅಟೆಂಡೆಂಟ್ – 11,356 ರೂ.
ಸಮುದಾಯ ಆರೋಗ್ಯ ಅಧಿಕಾರಿ (CHO) – 40000 ರೂ.

ವಿದ್ಯಾರ್ಹತೆ:
ಆಯುಷ್ ತಜ್ಞ ವೈದ್ಯರು
– ಬಿ.ಎ.ಎಂ.ಎಸ್. ಹಾಗೂ ಎಂ.ಎಸ್. (ಶಲ್ಯ ತಂತ್ರ) , ಎಂ.ಡಿ. (ಪಂಚಕರ್ಮ/ ಕಾಯ ಚಿಕಿತ್ಸಾ).
ಆಯುಷ್ ಔಷಧಿ ವಿತರಕರು – ಎಸ್.ಎಸ್.ಎಲ್.ಸಿ. ಮತ್ತು ಔಷಧಿ ವಿಜ್ಞಾನದಲ್ಲಿ ಡಿಪ್ಲೋಮ, ಕಂಪ್ಯೂಟರ್ ಜ್ಞಾನ ಕಡ್ಡಾಯ.
ಮಲ್ಟಿ ಪರ್ಪಸ್ – ಎಸ್.ಎಸ್.ಎಲ್.ಸಿ, ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.
ಮಸಾಜಿಸ್ಟ್-I (ಪುರುಷ) – ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹಾಗೂ ಸರ್ಕಾರದಿಂದ ಆಯೋಜಿಸಿದ ಮಸಾಜಿಸ್ಟ್ ತರಬೇತಿ ಪ್ರಮಾಣ ಪತ್ರ ಹೊಂದಿರತಕ್ಕದ್ದು, ಹಾಗೂ ಆಯುಷ್‌ ಆಸತ್ರೆ/ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು.
ಸ್ತ್ರೀರೋಗ ಅಟೆಂಡರ್ – ಕನಿಷ್ಟ 10ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ ಚಿಕಿತ್ಸಾಲಯಗಳಲ್ಲಿ ಸ್ತ್ರೀರೋಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು
ಕ್ಷಾರಸೂತ್ರ ಅಟೆಂಡೆಂಟ್ – ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್‌ ಆಸ್ಪತ್ರೆ ಚಿಕಿತ್ಸಾಲಯಗಳಲ್ಲಿ ಕ್ಷಾರಸೂತ್ರ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರತಕ್ಕದ್ದು.
ಸಮುದಾಯ ಆರೋಗ್ಯ ಅಧಿಕಾರಿ (CHO) – ಜಿ.ಎ.ಎಂ.ಎಸ್, ಬಿ.ಯು.ಎಂ.ಎಸ್. ಬಿ.ಹೆಚ್.ಎಂ.ಎಸ್. ಪದವಿ ಮುಗಿಸಿರಬೇಕು.

ವಯೋಮಿತಿ:
ವಿಜಯನಗರ ಜಿಲ್ಲಾ ಪಂಚಾಯತ್ ಅಧಿಸೂಚನೆಯ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಆರಂಭ ದಿನಾಂಕ: 15-02-2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 01-03-2023

Vijayanagara Zilla Panchayat Recruitment 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: 
Download
ಅಧಿಕೃತ ವೆಬ್‌ಸೈಟ್:‌
vijayanagara.nic.in

Vijayanagara Zilla Panchayat Recruitment 2023 ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆಯುಷ್ ಕಛೇರಿ, ಕೊಠಡಿ ಸಂಖ್ಯೆ. 6, ಹಳೆಯ ಜಿಲ್ಲಾಧಿಕಾರಿಗಳ ಕಛೇರಿ, ಅಮರಾವತಿ ಪ್ರವಾಸಿ ಮಂದಿರ (IB), ವಿಜಯನಗರ ಕಾಲೇಜು ರಸ್ತೆ, ವಿಜಯನಗರ ಇವರಿಗೆ ಮಾರ್ಚ್ 01, 2023 ರ ಒಳಗಾಗಿ ತಲುಪಿಸಬೇಕಾಗಿರುತ್ತದೆ.

Telegram Group Join Now
WhatsApp Group Join Now