"ಗಂಧದ ಗುಡಿ" ಟ್ರೈಲರ್ ಬಿಡುಗಡೆ

ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ "ಗಂಧದ ಗುಡಿ  ಟ್ರೈಲರ್ ಬಿಡುಗಡೆಯಾಗಿದೆ.

ಅಪ್ಪು ಅವರ ಮಹತ್ವಾಕಾಂಕ್ಷೆಯ ಪಿಆರ್‌ಕೆ ಸಂಸ್ಥೆ ಮತ್ತು Mudskipper ಜಂಟಿಯಲ್ಲಿ ಈ ಚಿತ್ರವನ್ನು ನಿರ್ಮಾಣ  ಮಾಡಲಾಗಿದೆ

ಇಂದು ಬೆಳಗ್ಗೆ ಅಭಿಮಾನಿ ದೇವರುಗಳ ಸಮ್ಮುಖದಲ್ಲಿ ಅಣ್ಣವರ ಕುಟುಂಬದವರು "ಗಂಧದ ಗುಡಿ" ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

'ಇಲ್ಲಿ ಏನಾದರೂ ಬೇರೆ ತರ ಪಕ್ಷಿ ತೋರ್ಸೋಕೆ ಕರ್ಕೊಂಡು ಬಂದಿದ್ದೀರಾ ಸಮುದ್ರದ ಹತ್ರ' ಎಂದು

ಜೀಪ್‌ನಲ್ಲಿ ಅಪ್ಪು ಕುಳಿತುಕೊಂಡು ಮಾತನಾಡುತ್ತಿರುವ ಸೀನ್ ಮೂಲಕ ಟ್ರೈಲರ್ ಆರಂಭವಾಗುತ್ತದೆ.

'ಇಲ್ಲ ಇಲ್ಲೊಂದು ಸ್ಪೆಷಲ್ ಐಲ್ಯಾಂಡ್‌ ಇದೆ' ಎಂದು ಅಮೋಘ್ ಹೇಳಿದಾಗ ಅಪ್ಪು ತುಂಬಾನೇ ಖುಷಿಯಿಂದ 'ಓ ಜುರಾಸಿಕ್‌ ಪಾರ್ಕ್' ಎಂದು ಹೇಳುತ್ತಾರೆ.

ಡಾ. ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ "ಗಂಧದ ಗುಡಿ" ಟ್ರೈಲರ್ ಯುಟ್ಯೂಬ್‌ ನಲ್ಲಿ ಕೂಡ ಬಿಡುಗಡೆ ಮಾಡಲಾಗಿದೆ.