ಟಾಟಾ ಕಂಪನಿ ವಿದ್ಯಾರ್ಥಿವೇತನ 2024, ಅರ್ಜಿ ಸಲ್ಲಿಸಿ | Tata Capital Scholarship 2024 Apply Online @buddy4study.com

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಟಾಟಾ ಕ್ಯಾಪಿಟಲ್‌ ವಿದ್ಯಾರ್ಥಿವೇತನ ಪಡೆಯಬೇಕೆ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್‌ ನ್ಯೂಸ್. Tata Capital Scholarship 2024 ಗೆ ಯಾರು ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಶೈಕ್ಷಣಿಕ ಅರ್ಹತೆ ಮುಂತಾದ ಮಾಹಿತಿಯನ್ನು ನೀಡಲಾಗಿದೆ.

ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ನೀಡಲು ಟಾಟಾ ಕ್ಯಾಪಿಟಲ್‌ ವಿದ್ಯಾರ್ಥಿವೇತವನ್ನು ನೀಡಲಾಗುತ್ತದೆ‌. ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ‌ಮೂಲಕ ಅರ್ಜಿ ಸಲ್ಲಿಸಬಹುದು.

Tata Capital Scholarship 2024:

ಮೆಟ್ರಿಕ್ ನಂತರದ ಕೋರ್ಸ್’ಗಳಾದ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ಪದವಿ, ಡಿಪ್ಲೊಮಾ/ ಪಾಲಿಟೆಕ್ನಿಕ್ ಕೋರ್ಸ್’ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದ (Tuition Fees) 80% ಅಥವಾ 12,000 ವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಅರ್ಹತೆಗಳು:

  • ಭಾರತದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ಪದವಿ, ಡಿಪ್ಲೊಮಾ/ ಪಾಲಿಟೆಕ್ನಿಕ್ ಕೋರ್ಸ್’ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಅಭ್ಯರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
  • Tata Capital & Buddy4Study ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.

ಸ್ಕಾಲರ್ಶಿಪ್’ನ ಪ್ರಯೋಗಗಳು:

  • ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 10,000 ರೂ.
  • ಬಿ.ಕಾಂ, ಬಿ.ಎಸ್ಸಿ. ಬಿ.ಎ, ಡಿಪ್ಲೊಮಾ/ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ: 12,000 ರೂ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಆದಾಯ ಪುರಾವೆ (ಆದಾಯ ಪ್ರಮಾಣ ಪತ್ರ)
  • ಪ್ರವೇಶದ ಪುರಾವೆ (ಕಾಲೇಜು/ಸಂಸ್ಥೆಯ ID ಕಾರ್ಡ್ ಇತ್ಯಾದಿ)
  • ಪ್ರಸಕ್ತ ಶೈಕ್ಷಣಿಕ ವರ್ಷದ ಶುಲ್ಕ ರಶೀದಿ
  • ವಿದ್ಯಾರ್ಥಿವೇತನ ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು (ರದ್ದಾದ ಚೆಕ್/ಪಾಸ್‌ಬುಕ್ ಪ್ರತಿ)
  • ಹಿಂದಿನ ತರಗತಿಯ ಮಾರ್ಕ್‌ಶೀಟ್‌ಗಳು ಅಥವಾ ಗ್ರೇಡ್ ಕಾರ್ಡ್‌ಗಳು
  • ಅಂಗವಿಕಲತೆ ಮತ್ತು ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 10-03-2024

ಪ್ರಮುಖ ಲಿಂಕ್‌ಗಳು:
Tata Capital Scholarship 2024 Apply Online ಲಿಂಕ್:‌ Apply ಮಾಡಿ

ಇತರೆ ಮಾಹಿತಿಗಳನ್ನು ಓದಿ:

ಸರ್ಕಾರದಿಂದ SSP ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

Telegram Group Join Now
WhatsApp Group Join Now

Leave a Comment