ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ (2nd PUC Supplementary Result 2023) ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಪೂರಕ ಪರೀಕ್ಷೆಯ ಫಲಿತಾಂಶವನ್ನು ಇವತ್ತು ಬೆಳಗ್ಗೆ 11 ಗಂಟೆಯ ನಂತರ ಪ್ರಕಟಿಸಲಿದ್ದಾರೆ.
ಈ ಕುರಿತು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ. ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 23ರಿಂದ 3 ಜೂನ್ ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇತ್ತಿಚೆಗೆ ಅಧಿಕೃತ ಕೀ ಉತ್ತರಗಳನ್ನು ಕೂಡ ಪ್ರಕಟಿಸಲಾಗಿತ್ತು. ಅದಕ್ಕೆ ಅಕ್ಷೇಪಣೆ ಸಲ್ಲಿಸಲು ಸಹ ಅವಕಾಶ ಕಲ್ಪಿಸಿ ನೀಡಿದ್ದರು.
ಪರೀಕ್ಷೆ ಬರೆದವರು ಫಲಿತಾಂಶ ನೋಡಲು ಇಲಾಖೆಯ ಅಧಿಕೃತ ವೆಬ್’ಸೈಟ್ karresults.nic.in ನಲ್ಲಿ ಬೆಳಗ್ಗೆ 11 ಗಂಟೆಯ ನಂತರ ಲಾಗ್ ಇನ್ ಮಾಡಿ ಫಲಿತಾಂಶವನ್ನು ನೋಡಬಹುದು.
2nd PUC Supplementary Result 2023 ನೋಡುವುದು ಹೇಗೆ?
- ಮೊದಲಿಗೆ ಇಲಾಖೆಯ ಅಧಿಕೃತ ವೆಬ್’ಸೈಟ್ karresults.nic.in ಭೇಟಿ ನೀಡಿ.
- ನಂತರ ಅಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಎಂದಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- ತದನಂತರ ‘Enter Reg No.’ ಎಂಬಲ್ಲಿ ನಿಮ್ಮ ನೋಂದಣಿ ಸಂಖ್ಯೆ ಎಂಟರ್ ಮಾಡಿ, ಅದರ ಕೇಳಗೆ ‘Select Subject’ ಎಂಬ ಆಯ್ಕೆ ಇರುತ್ತದೆ. ನಿಮ್ಮ ಸಬ್ಜೆಕ್ಟ್ ಆಯ್ಕೆ ಮಾಡಿ.
- ಕೊನೆಯದಾಗಿ ಅಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ನೋಡಿ.
ಸರ್ಕಾರ ಇತರೆ ಯೋಜನೆಗಳು