ಬೆಳೆ ಪರಿಹಾರ ಘೋಷಣೆ; 1 ನೇ ಕಂತಿನ ನೆರವು ಸದ್ಯದಲ್ಲೇ ಬಿಡುಗಡೆ | Bele Parihara Karnataka 2023 @fruitspmk.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಈ ವರ್ಷ ಬರಗಾಲದ ಕಾರಣದಿಂದಾಗಿ ರೈತರು ಹೈರಾಣಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ (Bele Parihara Karnataka 2023) ಘೋಷಣೆ ಮಾಡಿದೆ. ಮೊದಲ ಕಂತಿನ ಹಣ ಬಿಡುಗಡೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾಹಿತಿ ನೀಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ರಾಜ್ಯ ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ. ಮೊದಲ ಕಂತಿನಲ್ಲಿ ಅರ್ಹ ಫಲಾನುಭವಿ ರೈತರಿಗೆ 2 ಸಾವಿರ ರೂ.ವರೆಗೆ ಬೆಳೆ ಪರಿಹಾರ ನೀಡಲು ಮುಂದಾಗಿದ್ದೇವೆ ಎಂದರು.

Bele Parihara Karnataka 2023

ಕೇಂದ್ರ ಸರ್ಕಾರದ ದುಡ್ಡು ಬರುವವರೆಗೆ ಕಾಯಲು ಆಗುವುದಿಲ್ಲ ಆದ್ದರಿಂದ ರಾಜ್ಯ ಸರ್ಕಾರದಿಂದ 1 ನೇ ಕಂತಿನ ಹಣ ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಮೂರು ಹಂತಗಳಲ್ಲಿ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. 48.19 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆಗಿದ್ದು, 18171.44 ಕೋಟಿ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದರು.

ಬಿತ್ತನೆ ವೈಫಲ್ಯ ಹಾಗೂ ಮಧ್ಯಂತರ ವಿಮೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರದಿಂದ ಈಗಾಗಲೇ 6.5 ಲಕ್ಷ ರೈತರಿಗೆ 460 ಕೋಟಿ ರೂ. ನಮ್ಮ ಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಲಿಸಿದ್ದಾರೆ.

2 ಸಾವಿರ ರೂ.ವರೆಗೆ ಬೆಳೆ ಪರಿಹಾರ ನೀಡಲಾಗುತ್ತಿರುವ ಹಣವನ್ನು ನಾಲ್ಕೈದು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಈ ಮಾಹಿತಿಗಳನ್ನು ಓದಿ:

ಬೆಳೆ ಪರಿಹಾರ ಹಣ ಜಮಾ, ನಿಮ್ಮ ಖಾತೆಗೆ ಬಂತಾ ನೋಡಿ

ಬೆಳೆ ವಿಮೆ ಅರ್ಜಿ Status Check ಮಾಡಿ

ಹೊಸ ರೇಷನ್‌ ಕಾರ್ಡ್‌ ಅರ್ಜಿ ಆಹ್ವಾನ

ಗೃಹಲಕ್ಷ್ಮೀ ಯೋಜನೆ DBT Status Check ಮಾಡುವ ಸರಳ ವಿಧಾನ

Telegram Group Join Now
WhatsApp Group Join Now

1 thought on “ಬೆಳೆ ಪರಿಹಾರ ಘೋಷಣೆ; 1 ನೇ ಕಂತಿನ ನೆರವು ಸದ್ಯದಲ್ಲೇ ಬಿಡುಗಡೆ | Bele Parihara Karnataka 2023 @fruitspmk.karnataka.gov.in”

Leave a Comment