ಕರ್ನಾಟಕ ಸರ್ಕಾರ ಖಾತರಿ ಯೋಜನೆಗಳು ಮತ್ತು ಅರ್ಜಿ ಸಲ್ಲಿಕೆ ಮಾಹಿತಿ | Guarantee schemes Karnataka 2023 Apply Online @sevasindhugs.karnataka.gov.in

Telegram Group Join Now
WhatsApp Group Join Now

ಕರ್ನಾಟಕ ರಾಜ್ಯದ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಮೊದಲು ಕ್ಯಾಬಿನೆಟ್ ಮಿಟಿಂಗ್’ನಲ್ಲಿ ಜಾರಿ ಮಾಡುವುದಾಗಿ ಹೇಳಿದ್ದರು. ಅದರಂತೆ ಕರ್ನಾಟಕ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ಹೇಳಿದಂತೆ ಐದು ಗ್ಯಾರಂಟಿ ಯೋಜನೆ (Guarantee schemes Karnataka) ಗಳನ್ನು ಜಾರಿ ಮಾಡಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮೊದಲನೇದಾಗಿ ಮಹಿಳೆಯರಿಗೆ ಉಚಿತ ಬಸ್ “ಶಕ್ತಿ ಯೋಜನೆ” ಅನುಷ್ಠಾನಕ್ಕೆ ತರಲಾಯಿತು. ಎರಡನೇಯದಾಗಿ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳ ಬಗ್ಗೆ ಎಲ್ಲೆಡೆ ಪರ ವಿರೋಧ ಚರ್ಚೆಗಳು ವಾಗ್ವಾದಗಳು ನಡೆಯುತ್ತಿವೆ. ಪ್ರತಿ ಪಕ್ಷಗಳ ಟೀಕೆಗಳ ನಡುವೆಯೇ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಜಾರಿ ಮಾಡಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಗಳ ಉಪಯೋಗ ಪಡೆದು ಕೋಳ್ಳಬಹುದು.

Guarantee schemes Karnataka

ಐದು ಖಾತರಿ ಯೋಜನೆಗಳು (Guarantee schemes Karnataka)

1) ಶಕ್ತಿ ಯೋಜನೆ (Shakti Yojane Smart Card): ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆ (Guarantee schemes Karnataka) ಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜೂನ್, 11 ರಂದು ಸಿಎಂ ಸಿದ್ದರಾಮಯ್ಯಯನವರು ಜಾರಿ ಮಾಡಿದರು. ರಾಜ್ಯ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಯಾವುದೇ ಷರತ್ತು ಹಾಕದೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಕರ್ನಾಟಕದಲ್ಲಿ ಎಲ್ಲಿ ಬೇಕಾದರು ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಈ ಯೋಜನೆಯ ಸವಲತ್ತು ಪಡೆಯಲು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ (Shakti Smart Card) ಪಡೆಯಬೇಕಾಗುತ್ತದೆ. ಇಗಾಗಲೇ ಆಧಾರ ಕಾರ್ಡ್ ಅಥವಾ ವೋಟರ್ ಕಾರ್ಡ್ ಕಂಡಕ್ಟರ್ ಅವರಿಗೆ ತೊರಿಸಿ ಪ್ರಯಾಣ ಮಾಡಲು ಸರಕಾರ ಅವಕಾಶ ನೀಡಿದೆ. ಆದರೆ “ಶಕ್ತಿ ಸ್ಮಾರ್ಟ್ ಕಾರ್ಡ್”ನ್ನು ಸೇವಾ ಸಿಂಧು ಪೋರ್ಟಲ್ (Seva Sindhu Shakti Smart Card) ನಲ್ಲಿ ಆನ್’ಲೈನ್ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಕೆ ಪ್ರಕ್ರೀಯೆಯನ್ನು ಶೀಘ್ರದಲ್ಲೆ ಪ್ರಾರಂಭ ಮಾಡಲಿದ್ದಾರೆ.

ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಮಾದರಿ

2) ಗೃಹ ಜ್ಯೋತಿ ಯೋಜನೆ (Gruha Jyoti Scheme): “ಗೃಹ ಜ್ಯೋತಿ” ಯೋಜನೆಯನ್ನು ಜೂನ್ 18 ರಿಂದ ಚಾಲನೆ ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ʼಗಳವರೆಗಿನ ಗೃಹ ಬಳಕೆಯ ವಿದ್ಯುತ್‌ ಉಚಿತ ನೀಡಲಾಗುತ್ತದೆ. ಪ್ರತಿ ಗ್ರಾಹಕರ ಮಾಸಿಕ ಸರಾಸಿ ಬಳಕೆಯ (ಆರ್ಥಿಕ ವರ್ಷ 2022-23 ರ ಬಳಕೆಯ ಆಧಾರದನ್ವಯ) ಯೂನಿಟ್ ಗಳ ಮೇಲೆ ಶೇಕಡ 10 ರಷ್ಟು ಹೆಚ್ಚುವರಿ ಬಳಕೆಯ ವಿದುತ್‌ನ್ನು ಉಚಿತ ನೀಡಲು “ಗೃಹ ಜ್ಯೋತಿ” ಯೋಜನೆಯನ್ನು ಜಾರಿ ಮಾಡಲಾಗಿದೆ.

“ಗೃಹ ಜ್ಯೋತಿ ಯೋಜನೆ”ಯ ಫಲಾನುಭವಿಗಳಾಗಲು ಇಚ್ಛೆ ಇರುವವರಿಂದ ಸರ್ಕಾರ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ (Gruha Jyothi Scheme Application Online) ಗಳನ್ನು ಆಹ್ವಾನಿಸಲಾಗಿದೆ. ಜೂನ್ 18 ರಿಂದ ಉಚಿತ ವಿದ್ಯುತ್ ಯೋಜನೆಯ ಅರ್ಜಿ ಆರಂಭವಾಗಿದೆ. ಗೃಹ ಜ್ಯೋತಿ ಯೋಜನೆಯ ಆನ್’ಲೈನ್ ಅರ್ಜಿ (Sevasindhugs.karnataka.gov.in/GruhaJyothi) ಸಲ್ಲಿಕೆ ಮತ್ತು ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಕ್ಲಿಕ್ ಮಾಡಿ.

3) “ಗೃಹ ಲಕ್ಷ್ಮಿ ಯೋಜನೆ” (Gruha Lakshmi Scheme): ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವ ದೃಷ್ಠಿಯಿಂದ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಬಹು ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ” ಯನ್ನು ಜಾರಿಗೆ ತರಲಾಗಿದೆ.

“ಗೃಹಲಕ್ಷ್ಮಿ ಯೋಜನೆ”ಯ ಆನ್’ಲೈನ್ ಅರ್ಜಿಯನ್ನು ಶೀಘ್ರದಲ್ಲೆ ಕರೆಯಲಾಗುದು ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಇತ್ತಿಚೆಗೆ ಮಾಹಿತಿ ನೀಡಿದ್ದಾರೆ. ಜುಲೈ 16 ರಿಂದ ಆನ್’ಲೈನ್ ಅರ್ಜಿ ಆರಂಭವಾಗಬೇಕಿತ್ತು ಆದರೆ ಕೆಲವು ತಾಂತ್ರಿಕ ಕಾರಣದಿಂದಾಗಿ ವಿಳಂಭವಾಗಿದೆ ಎಂದು ತಿಳಿಸಿದ್ದಾರೆ. ಆನ್’ಲೈನ್ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್’ನಲ್ಲಿ ಅಥವಾ ಆನ್’ಲೈನ್ ಆ್ಯಪ್ ಮೂಲಕ ಭರ್ತಿ (Gruha Lakshmi Scheme Registration) ಮಾಡಲು ಅವಕಾಶ ಕಲ್ಪಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

4) “ಯುವ ನಿಧಿ ಯೋಜನೆ” (Yuva Nidhi Scheme): ರಾಜ್ಯದಲ್ಲಿ 2022-23 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆ ನೀಡುವ “ಯುವ ನಿಧಿ ಯೋಜನೆ” ಯನ್ನು ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ.

ಶೀಘ್ರದಲ್ಲಿ ಯುವ ನಿಧಿ ಯೋಜನೆಯ ಆನ್’ಲೈನ್ ಅರ್ಜಿಗಳನ್ನು ಆಹ್ವಾನಿಸಲಿದ್ದಾರೆ. ಈ ಯೋಜನೆಯ ತಾಂತ್ರಿಕ ಕಾರ್ಯಗಳ ನಡೆಯುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

5) “ಅನ್ನ ಭಾಗ್ಯ ಯೋಜನೆ” (Anna Bhagya Scheme): ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಂತ್ಯೊದಯ ಹಾಗೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬ ಪ್ರತಿಯೊಬ್ಬ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ವಿಧಾನ ಸಭಾ ಚುನಾವಣೆ ವೇಳೆ (Guarantee schemes Karnataka) ಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಜುಲೈ 1 ರಿಂದ ಈ ಯೋಜನೆಯನ್ನು ಜಾರಿ ಮಾಡಿ ಕುಟುಂಬ ಪ್ರತಿಯೊಬ್ಬ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಅಂತ್ಯೊದಯ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಈ ಯೋಜನೆಯನ್ನು  ಸದುಉಪಯೋಗ ಪಡಿಸಿಕೊಳ್ಳಬಹುದು.

ಕೊನೆಯ ಮಾತುಗಳು: ಸ್ನೇಹಿತರೇ ಈ ಲೇಖನದಲ್ಲಿ ಕರ್ನಾಟಕ ಸರ್ಕಾರ ಐದು ಖಾತರಿ ಯೋಜನೆಗಳು (Guarantee Schemes Karnataka Gov in) ಮತ್ತು ಅದರ ಇತರೆ ಮಾಹಿತಿಗಳನ್ನು ಓದಿದ್ದಿರಿ. ಈ ಮಾಹಿತಿಗಳ ನಿಮಗೆ ಉಪಯುಕ್ತವಾಗಿವೆ ಎಂದು ಭಾವಿಸುತ್ತೆವೆ. ಇದೆ ರೀತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸ್ ಆಪ್ ಗ್ರುಪ್’ಗೆ ಜಾಯಿನ್ ಆಗಿರಿ ಮತ್ತು ಕಮೆಂಟ್ ಬಾಕ್ಸ್’ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.

Guarantee Scheme Karnataka Apply Online 2023

Guarantee Scheme Karnataka Apply Online 2023 ಸೇವಾ ಸಿಂಧು ಪೋರ್ಟಲ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

ಗೃಹ ಜ್ಯೋತಿ ಆನ್’ಲೈನ್ ಅರ್ಜಿ ಸಲ್ಲಿಕೆ ಲಿಂಕ್, ಕೊನೆಯ ದಿನಾಂಕ

“ಗೃಹ ಜ್ಯೋತಿ” ಸೇವಾ ಸಿಂಧು ಆನ್‌ಲೈನ್‌ ಅರ್ಜಿ

ಗೃಹ ಲಕ್ಷ್ಮೀ” ಸೇವಾ ಸಿಂಧು ಆನ್‌ಲೈನ್‌ ಅರ್ಜಿ

Telegram Group Join Now
WhatsApp Group Join Now

Leave a Comment

error: Content is protected !!