ಸರ್ಕಾರದಿಂದ “ಕಾಶಿ-ಗಯಾ ದರ್ಶನ” ಯಾತ್ರಾ ಸಹಾಯಧನ | Karnataka Bharat Gaurav Kashi Darshan 2023 Ticket Book @irctctourism.com

Telegram Group Join Now
WhatsApp Group Join Now

ಕರ್ನಾಟಕ ಸರ್ಕಾರದ ವತಿಯಿಂದ ಕಾಶಿ, ಗಯಾ, ಅಯೋಧ್ಯ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ Karnataka Bharat Gaurav Kashi Darshan 2023 ಯಾತ್ರಾ ಪ್ಯಾಕೇಜ್ ಸಹಾಯಧನ ನೀಡುತ್ತಿದ್ದು, ಧಾರ್ಮಿಕ ಯಾತ್ರೆಗೆ ಹೋಗಬಯಸುವ ಜನರಿಗೆ ಟಿಕೇಟ್‌ ನೋಂದಣಿಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು “ಕಾಶಿ-ಗಯಾ ದರ್ಶನ” ಎಂಬ ಹೆಸರಿನ ಧಾರ್ಮಿಕ ಯಾತ್ರೆ ಯೋಜನೆಗೆ ಸಬ್ಸಿಡಿ ನೀಡುತ್ತಿದ್ದು, ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

Karnataka Bharat Gaurav Kashi Darshan 2023

ಕರ್ನಾಟಕ ಸರ್ಕಾರದ ವತಿಯಿಂದ 9 ದಿನಗಳ ಯಾತ್ರಾ ಪ್ಯಾಕೇಜ್ ಇದಾಗಿದ್ದು, ಕಾಶಿ, ಗಯಾ, ಅಯೋಧ್ಯ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳನ್ನು ಒಳಗೊಂಡಿದೆ. ಈ ವಿಶೇಷ ರೈಲಿನ ಯಾತ್ರೆಯನ್ನು ಗಯಾ ಕ್ಷೇತ್ರದವರೆಗೆ ವಿಸ್ತರಿಸಿ ಪ್ರತಿ ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನವನ್ನು 5 ಸಾವಿರ ದಿಂದ ರೂ. 7500 ಗಳಿಗೆ ಹೆಚ್ಚಿಸಲಾಗಿದೆ.

ಕರ್ನಾಟಕ ಭಾರತ ಗೌರವ ಕಾಶಿ-ಗಯಾ ದರ್ಶನ ಪ್ಯಾಕೇಜ್ ಗೆ ಒಟ್ಟು 22,500 ರೂಪಾಯಿಗಳು ತಗಲಲಿದ್ದು, ಅದರಲ್ಲಿ ರೂ. 7,500 ಗಳ ಸಹಾಯಧನವನ್ನು ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವುದರಿಂದ ಯಾತ್ರಾರ್ಥಿಗಳು ಬುಕಿಂಗ್ ಮೊತ್ತ 15,000 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಈ ಪ್ಯಾಕೇಜ್ ನಲ್ಲಿ 3 ಟೈರ್ ಎ.ಸಿ ರೈಲು ಪ್ರಯಾಣಿಸಲಿದ್ದು, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ.

  • ಯಾತ್ರಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ
  • ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.

ಯೋಜನೆಯಡಿ ನಿಗದಿಪಡಿಸಲಾಗಿರುವ ದಿನಾಂಕಗಳು:

  1. ನಿರ್ಗಮನ ದಿನಾಂಕ 31-10-2023 – ಆಗಮನ ದಿನಾಂಕ 08-11-2023
  2. ನಿರ್ಗಮನ ದಿನಾಂಕ 18-11-2023 – ಆಗಮನ ದಿನಾಂಕ 26.11.2023

Karnataka Bharat Gaurav Kashi Darshan ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು

  1. ಯಶವಂತಪುರ
  2. ತುಮಕೂರು
  3. ಬೀರೂರು
  4. ದಾವಣಗೆರೆ
  5. ಹಾವೇರಿ
  6. ಹುಬ್ಬಳ್ಳಿ
  7. ಗದಗ್
  8. ಹೊಸಪೇಟೆ
  9. ಬಳ್ಳಾರಿ
  10. ರಾಯಚೂರು

Karnataka Bharat Gaurav Kashi Darshan 2023 Ticket Booking Online:
9 ದಿನಗಳ ಯಾತ್ರಾ ಪ್ಯಾಕೇಜ್ ಲಿಂಕ್:‌ Tickets Book Online
IRTC Tickets online: https://www.irctctourism.com
Contact: +91 8595931291, 8595931292, 8595931294

ಜನರ ಧಾರ್ಮಿಕತೆಯನ್ನು ಗೌರವಿಸಲು ನೂತನ ಸರ್ಕಾರದ ಜನಪರ ನಿರ್ಧಾರಗಳು

  • ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ಯಾತ್ರೆಗೆ ಸಹಾಯಧನವನ್ನು ರೂ.5,000 ಗಳಿಂದ ರೂ.7.500 ಕ್ಕೆ ಹೆಚ್ಚಿಸಲಾಗಿದೆ.
  • ದೇವಾಲಯಗಳಿಗೆ ನೀಡುತ್ತಿರುವ ವಾರ್ಷಿಕ ನಗದು ಅನುದಾನವನ್ನು ಕನಿಷ್ಠ ರೂ.35 ಗಳಿಂದ ಗರಿಷ್ಠ ರೂ.15,000/-ಗಳಿಗೆ ಹೆಚ್ಚಿಸಲಾಗಿದೆ.
  • ಅರ್ಚಕರ ವರ್ಷಾಸನ ವಾರ್ಷಿಕ ಮೊತ್ತವನ್ನು ರೂ.48,000 ಗಳಿಂದ ರೂ.60,000 ಗಳಿಗೆ ಹೆಚ್ಚಿಸಲಾಗಿದೆ.
  • ತಸ್ತೀಕ್ ಮತ್ತು ವರ್ಷಾಸನ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
  • ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಚಾಮುಂಡಿ ಬೆಟ್ಟ, ಅಭಿವೃದ್ಧಿ ಪ್ರಾಧಿಕಾರ ರಚಿಸಲು ಕ್ರಮ ವಹಿಸಲಾಗಿದೆ.
  • ದೇವಾಲಯಗಳಲ್ಲಿ ಹಿರಿಯ ನಾಗರೀಕರಿಗೆ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
  • ದೇವಾಲಯಗಳಿಗೆ ಶಿಶುಗಳೊಂದಿಗೆ ಆಗಮಿಸುವ ತಾಯಂದಿರು ಶಿಶುಗಳಿಗೆ ಆರೈಕೆ ಮಾಡಲು ಹಾಗೂ ಹಾಲುಣಿಸಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಹಾಲುಣಿಸುವ ಕೊಠಡಿಯನ್ನು ನಿರ್ಮಿಸಲು ಆದೇಶಿಸಲಾಗಿದೆ.
  • ದೇವಾಲಯಗಳ ನಿರ್ಮಾಣಕ್ಕಾಗಿ ಪರಿಣಿತ ಶಿಲ್ಪಿಗಳನ್ನು ರೂಪುಗೊಳಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದೆ.

ಇತರೆ ಮಾಹಿತಿಗಳನ್ನು ಓದಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ 2023, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment