ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ಸಾಲ | Karnataka Budget 2023 July By CM Siddaramaiah

Telegram Group Join Now
WhatsApp Group Join Now

Karnataka Budget 2023: ರೈತರಿಗೆ ಗುಡ್‌ ನ್ಯೂಸ್.. ಅನ್ನದಾತರಿಗೆ ಕೃಷಿ ಚಟುವಟಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಈ ಸಾಲ ಸೌಲಭ್ಯದ ಈ ಹಿಂದೆ ಇದ್ದ 3 ಲಕ್ಷ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅದರೊಂದಿಗೆ ಶೇ.3 ರ ಬಡ್ಡಿ ದರದ ಮಧ್ಯಮಾವಧಿ, ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2023 ನಲ್ಲಿ ಘೋಷನೆ ಮಾಡಿದ್ದಾರೆ.

ಅದರ ಜೊತೆಗೆ ಗುಡ್ಡಗಾಡು ಪ್ರದೇಶದ ರೈತರಗೆ ಪಿಕ್ಅಪ್ ವ್ಯಾನ್ ಖರೀದಿ ಮಾಡಲು ಶೇ.4 ರ ಬಡ್ಡಿದರದಲ್ಲಿ 7 ಲಕ್ಷದವರೆಗೆ ನೀಡಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

14ನೇ ಬಾರಿಗೆ ಬಜೆಟ್​ ಮಂಡಿಸುತ್ತಿರುವ ಸಿದ್ದರಾಮಯ್ಯನವರು ದಾಖಲೆ ಬರೆಯಲಿದ್ದಾರೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಬೆಂಬಲ ನೀಡಲು ಕೃಷಿ ಭಾಗ್ಯ ಯೋಜನೆ 100 ಕೋಟಿ ರೂ. ವೆಚ್ಚದಲ್ಲಿ ಮರುಜಾರಿ ಮಾಡಲಾಗಿದೆ. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಐದು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ.

Karnataka Budget 2023: ರೇಷ್ಮೆ ಮಾರುಕಟ್ಟೆ ಹೈಟೆಕ್‌ ಮಾಡಲು 75 ಕೋಟಿ

‘ತೆಂಗು, ಅಡಕೆ, ದ್ರಾಕ್ಷಿ, ದಾಳಿಂಬೆ ಬೆಳೆ ಸಂಸ್ಕರಣೆಗೆ 10 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ, ಚಿಕ್ಕಮಗಳೂರು ಕಾಫಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ.

ನೀರಾವರಿಗೆ ಉತ್ತೇಜನ:

  • ಪ್ರಗತಿಯಲ್ಲಿರುವ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ.
  • 770 ಕೋಟಿ ರೂ. ವೆಚ್ಚದಲ್ಲಿ 899 ಕೆರೆ ತುಂಬಿಸುವ 19 ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ.
  • ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು, ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನ, ಭೂಸ್ವಾಧೀನಕ್ಕೆ ಕ್ರಮ.

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

“ಗೃಹ ಜ್ಯೋತಿ” ಸೇವಾ ಸಿಂಧು ಆನ್‌ಲೈನ್‌ ಅರ್ಜಿ

Download Karnataka Budget 2023 PDF: Download

Telegram Group Join Now
WhatsApp Group Join Now

Leave a Comment