ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ | KVCDC Karnataka Gov In Loan Scheme 2023 Apply Online

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ (KVCDC Karnataka Gov In Loan Scheme 2023) ವತಿಯಿಂದ ವಿವಿಧ ಯೋಜನೆಗಳಿಗಾಗಿ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಶೈಕ್ಷಣಿಕ ಸಾಲ ಯೋಜನೆ, ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ, ಸ್ವಯಂ ಉದ್ಯೋಗ ಸಾಲ ಯೋಜನೆ, ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ ವಿವಿಧ ಸಾಲ ಸೌಲಭ್ಯ ಯೋಜನೆಗಳಿಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

KVCDC Karnataka Gov In Loan Scheme 2023

ಇಲಾಖೆಯ ಹೆಸರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ನಿಗಮದ ಹೆಸರು: ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ (Karnataka Vokkaliga Community Development Corporation Limited)
ಯೋಜನೆ ಹೆಸರು: ವಿವಿಧ ಯೋಜನೆಗಳು

2023-24ನೇ ಸಾಲಿನಲ್ಲಿ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಈ ಕೆಳಕಂಡ ಯೋಜನೆಗಳಿಗೆ ಅರ್ಜಿಗಳ ಆಹ್ವಾನ ಮಾಡಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆ (Vehicle Subsidy Scheme)
ಘಟಕ ವೆಚ್ಚ ಶೇ.50 ರಷ್ಟು ಗರಿಷ್ಠ ರೂ. 3 ಲಕ್ಷಗಳ ಸಹಾಯಧನ
ನಾಲ್ಕು ಚಕ್ರಗಳ ವಾಹನ ಖರೀದಿಸಲು (ಹಳದಿ ಬೋರ್ಡ್)
ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
ಘಟಕ ವೆಚ್ಚ: ರೂ. 1ಲಕ್ಷ / ರೂ. 2ಲಕ್ಷ
ಸಹಾಯಧನ: ರೂ. 20,000/- / ರೂ. 30,000/-
ಸಾಲದ ಮೊತ್ತ: ರೂ. 80,000/- / ರೂ. 1,70,000/-

ಗಂಗಾ ಕಲ್ಯಾಣ ನೀರಾವರಿ ಯೋಜನೆ (Ganga Kalyana Scheme):
ಘಟಕ ವೆಚ್ಚ: ರೂ. 4.75 ಲಕ್ಷ / ರೂ. 3.75 ಲಕ್ಷ
ಸಹಾಯಧನ: ರೂ. 4.25 ಲಕ್ಷ / ರೂ. 3.25 ಲಕ್ಷ
ಸಾಲ ಮೊತ್ತ: ರೂ. 50,000/- / ರೂ. 75,000/- ESCOM ಗೆ ಪಾವತಿ

ಶೈಕ್ಷಣಿಕ ಸಾಲ ಯೋಜನೆ (Education Loan Scheme) :
ಹೊಸ ವಿದ್ಯಾರ್ಥಿಗಳಿಗೆ
ವಾರ್ಷಿಕ ಗರಿಷ್ಟ ರೂ. 1 ಲಕ್ಷ
ವಾರ್ಷಿಕ ಬಡ್ಡಿ ಶೇ. 2 ರಷ್ಟು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ನೀಟ್ ಪರೀಕ್ಷೆ ಮೂಲಕ ಪ್ರವೇಶ ಪಡೆದಿರಬೇಕು.
ಶೈಕ್ಷಣಿಕ ಸಾಲ ನವೀಕರಣ ಯೋಜನೆ:
2ನೇ / 3ನೇ ಕಂತಿನ ಸಾಲ

ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ
ವಾರ್ಷಿಕ ಗರಿಷ್ಟ ರೂ. 10 ಲಕ್ಷ
ಬಡ್ಡಿದರ : ಶೂನ್ಯ
QS World Ranking – 500 ರೊಳಗೆ

ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ
ಉಚಿತ ಅಲ್ಪಾವಧಿ ತರಬೇತಿ ಹಾಗೂ Placement
ITI’s, GTTC’s | KGTTI’s ಅಥವಾ 101 Job Role ಗೆ ತರಬೇತಿ
ಅರ್ಜಿಯನ್ನು ಕೌಶಲ್ಯ ತಂತ್ರಾಂಶ (https://www.kaushalkar.com) ದಲ್ಲಿ ಸಲ್ಲಿಸುವುದು

ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)
ಘಟಕ ವೆಚ್ಚ : ಶೇ 20 ರಷ್ಟು ಗರಿಷ್ಟ ರೂ. 1 ಲಕ್ಷ ಸಹಾಯಧನ, ಉಳಿಕೆ ಮೊತ್ತ ಬ್ಯಾಂಕ್‌ ಪಾಲಿನ ಸಾಲ,
ಉದ್ದೇಶ : ಕೃಷಿ / ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳು

KVCDC Karnataka Gov In Loan Scheme 2023 ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಅಥವಾ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಮೂಲಕ ಅರ್ಜಿ ಸಲ್ಲಿಸಬಹುದು.

KVCDC Karnataka Gov In Loan Scheme 2023 ಗಮನಿಸಿ:

  1. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವವರು ಒಕ್ಕಲಿಗ ಸಮುದಾಯಗಳಿಗೆ ಸೇರಿದವರಾಗಿರಬೇಕು.
  2. ಒಂದು ಕುಟುಂಬದ ಒಬ್ಬರು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  3. ಮಂಡಳಿ ವಿವೇಚನಾ ಕೋಟಾ / ಸರ್ಕಾರದ ವಿವೇಚನಾ ಕೋಟಾ ಸೌಲಭ್ಯದ ಅರ್ಜಿಗಳನ್ನು ಸಹ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.
  4. ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸುವುದು ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

Vokkaliga Abhivrudhi Nigam Karnataka Application Link:
ಆನ್‌ಲೈನ್‌ ಅರ್ಜಿ ಲಿಂಕ್‌:
ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ kvcdc.karnataka.gov.in, https://sevasindhu.karnataka.gov.in

KVCDC Karnataka Gov In Loan Scheme Last Date:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-10-2023

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-2990 4350, 2990 4268, ಅಥವಾ ಆಯಾ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ರವರ ಕಚೇರಿಯವರನ್ನು ಸಂಪರ್ಕಿಸುವುದು.

ಇತರೆ ಮಾಹಿತಿಗಳನ್ನು ಓದಿ

ಸಹಾಯಧನ ಯೋಜನೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ಸ್ವಂತ ವಾಹನ ಖರೀದಿಸಲು 3 ಲಕ್ಷ ಸಬ್ಸಿಡಿ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ

ಅನ್ನಭಾಗ್ಯ ಯೋಜನೆ: DBT Status ಚೆಕ್‌ ಮಾಡಿ

Telegram Group Join Now
WhatsApp Group Join Now

Leave a Comment