ಕಾರ್ಮಿಕ ಕಾರ್ಡ್‌ ಇದ್ದವರಿಗೆ ಗುಡ್‌ ನ್ಯೂಸ್‌, ಒಂದು ಕಾರ್ಡ್‌ ಹಲವು ಪ್ರಯೋಜನ | Labour Card Karnataka Benefits 2023 Check @ksuwssb.karnataka.gov.in

Telegram Group Join Now
WhatsApp Group Join Now

ಕಾರ್ಮಿಕರ ಸರ್ವಾಂಗೀಣ ಬೆಳವಣಿಗೆಗಾಗಿ ಹತ್ತು ಹಲವು ಯೋಜನೆಯಗಳನ್ನು ರೂಪಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಕಾರ್ಮಿಕರಿಗೆ ಅನೇಕ ಸೌಲಭ್ಯಗಳು ದೊರೆಯುತ್ತದೆ. ನೀಡುತ್ತಿದೆ. ಕಟ್ಟಡ ಕಾರ್ಮಿಕರು ಹಾಗೂ ಅವರನ್ನು ಅವಲಂಭಿಸಿರುವ ಕುಟುಂಬದ ಅರ್ಹ ಫಲಾನುಭವಿಗಳು ಈ ಸೌಲಭ್ಯಗಳ ಪ್ರಯೋಜನ (Labour Card Karnataka Benefits) ಗಳನ್ನು ಪಡಿಸಿಕೊಳ್ಳಬಹುದು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ವತಿಯಿಂದ ಪ್ರತಿ ವರ್ಷ ಧನಸಹಾಯ ನೀಡಲಾಗುತ್ತದೆ. ಹಾಗೂ ಅಪಘಾತ ಪರಿಹಾರ, ಹೆರಿಗೆ ಸೌಲಭ್ಯ, ಪಿಂಚಣಿ ಸೌಲಭ್ಯ, ಮದುವೆಗೆ ಸಹಾಯ ಧನ, ವೈದ್ಯಕೀಯ ಸೇವೆಗಳು, ದುರ್ಬಲತೆಯ ಪಿಂಚಣಿ ಹಾಗೂ ಮುಂತಾದ ಸೌಲಭ್ಯಗಳನ್ನು ಸರ್ಕಾರವು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ನೀಡಲಾಗುತ್ತದೆ.

ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು. ಹಾಗೂ ಕನ್ನಡಸಿರಿ.in ಗೆ ಭೇಟಿ ನೀಡಿ ಹೊಸ ಹೊಸ ಮಾಹಿತಿಯನ್ನು ಪಡೆಯಬಹುದು.

ಕಾರ್ಮಿಕ ಕಾರ್ಡ (Labour Card Karnataka) ನ ಪ್ರಯೋಜನಗಳು:

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕ ಕಾರ್ಡ್‌ (Karmika Card) ಹೊಂದಿರುವ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ನೀಡಲಾಗುತ್ತಿರುವ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳು ಈ ಕೇಳಗಿನಂತಿವೆ.

1) ಪಿಂಚಣಿ ಸೌಲಭ್ಯ:
3 ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಅರ್ಹ ಫಲಾನುಭವಿಗೆ ಪ್ರತಿ ತಿಂಗಳು 3,000 ರೂ ಪಿಂಚಣಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:

  • ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ. (Labour Card Karnataka)
  • ಫಲಾನುಭವಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಜೀವಿತ ಪ್ರಮಾಣ ಪತ್ರ.
  • ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪ್ರತಿ.
  • ಉದ್ಯೋಗ ದೃಢೀಕರಣ ಪತ್ರ ಅಥವಾ ಸ್ವಯಂ ದೃಢೀಕರಣ ಪತ್ರ.
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.

2) ಕುಟುಂಬ ಪಿಂಚಣಿ ಸೌಲಭ್ಯ:
ಮೃತ ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿರುವ ವೇಳೆ ಮರಣ ಹೊಂದಿದರೆ. ಮೃತ ಪಿಂಚಣಿದಾರರ ಪತಿ ಇಲ್ಲವೇ ಪತ್ನಿಗೆ ಮಂಡಳಿಯು ಪ್ರತಿ ತಿಂಗಳು 1,500 ರೂ. ಪಿಂಚಣಿ ನೀಡಲಾಗುತ್ತದೆ. ಕಾರ್ಮಿಕ ಕಚೇರಿಯಲ್ಲಿ ಅಗತ್ಯ ದಾಖಲೆ ನೀಡಿ ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು.

3) ಅಪಘಾತ ಪರಿಹಾರ:
ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಅಪಘಾತವಾದಲ್ಲಿ ಈ ಕೇಳಗಿನ ಪರಿಹಾರ ದೊರೆಯುತ್ತದೆ.
ಪರಿಹಾರದ ಸಂದರ್ಭ ಹಾಗೂ ಮೊತ್ತ:

  • ಮರಣದ ಹೊಂದಿದಲ್ಲಿ 5 ಲಕ್ಷ ಪರಿಹಾರ.
  • ಸಂಪೂರ್ಣ ಶಾಶ್ವತ ದುರ್ಬಲತೆಯ ಪರಿಸ್ಥಿತಿಯಲ್ಲಿ 2 ಲಕ್ಷ ಪರಿಹಾರ.
  • ಭಾಗಶಃ ಶಾಶ್ವತ ದುರ್ಬಲತೆಯ ಸ್ಥಿತಿಯಲ್ಲಿ 1 ಲಕ್ಷ ಪರಿಹಾರ.
    ಫಲಾನುಭವಿಯು ಅಪಘಾತಕ್ಕೀಡಾದ ದಿನದಿಂದ 1 ವರ್ಷದೊಳಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಈ ಸೌಲಭ್ಯ ಪಡೆಯಬಹುದು.

4) ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್):

ನೋಂದಾಯಿತ ಮಹಿಳಾ ಫಲಾನುಭವಿಯು ತನ್ನ ಮೊದಲ ಎರಡು ಹೆರಿಗೆಗೆ ಮಂಡಳಿಯಿಂದ 50,000 ರೂ. ಸಹಾಯಧನ ಪಡೆಯಬಹುದು.

  • ಅರ್ಜಿ ಸಲ್ಲಿಸಲು ಬೇಕಾಗಿರುವ ಅವಶ್ಯಕ ದಾಖಲೆಗಳು:
    • ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ (Labour Card Karnataka)
    • ಮೊದಲ ಅಥವಾ ಎರಡನೇ ಹೆರಿಗೆ ಎಂದು ಅಫಿಡವಿಟ್
    • ಬ್ಯಾಂಕ್ ಪಾಸ್ ಬುಕ್ ಪ್ರತಿ
    • ಉದ್ಯೋಗ ದೃಢೀಕರಣ ಪತ್ರ
    • ಡಿಸ್ಟಾರ್ಜ್ ಸಾರಾಂಶ
    • ಜನನ ಪ್ರಮಾಣ ಪತ್ರ

5) ಕಾರ್ಮಿಕರ ಟೊಲ್ ಕಿಟ್:

  • ಕೆಲಸ ಮಾಡುವ ಸ್ಥಳಗಳಲ್ಲಿ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡುವುದು ಅವಶ್ಯಕ. ಅಪಘಾತ ಸಂಭವಿಸಿದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಹಾನಿ ಅಥವಾ ಪ್ರಾಣಾಪಾಯದಿಂದ ಗಾಯಾಳುವನ್ನು ರಕ್ಷಿಸಲು ಅನುಕೂಲವಾಗಲಿದೆ. ಆದ್ದರಿಂದ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ (ಟೊಲ್ ಕಿಟ್) ಕಿಟ್‌ ನೀಡಲಾಗುತ್ತದೆ.

6) ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ):
ಕಲಿಕೆ ಭಾಗ್ಯ ಯೋಜನೆಯ ಅಡಿಯಲ್ಲಿ ನೋಂದಾಯಿತ (Labour Card Karnataka) ಫಲಾನುಭವಿ ಕಾರ್ಮಿಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಕೇಳಗಿನಂತೆ ಶೈಕ್ಷಣಿಕ ಸಹಾಯಧನ ನೀಡಲಾಗುತ್ತದೆ.

Labour Department Karnataka
Labour Card Karnataka

7) ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಸೇವೆ:
ಮಂಡಳಿಯ ವತಿಯಿಂದ ನೋಂದಾಯಿತ (Labour Card Karnataka) ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರು ಇರುವ ಜಾಗಕ್ಕೆ ತೆರಳಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಸೌಲಭ್ಯಗಳು: ನುರಿತ ವೈದ್ಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಎ.ಎನ್.ಎಂ

8) ತಾಯಿ-ಮಗು ಸಹಾಯ ಹಸ್ತ:
ನೋಂದಾಯಿತ ಮಹಿಳೆ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಮಗುವಿನ ಪೂರ್ವ ಶಿಕ್ಷಣ ಹಾಗೂ ಪೌಷ್ಟಿಕತೆಗಾಗಿ ಈ ಸೌಲಭ್ಯ ನೀಡಲಾಗುತ್ತದೆ. ಮಗುವಿಗೆ ಮೂರು ವರ್ಷ ತುಂಬುವವರೆಗೆ ಮಂಡಳಿಯು ವಾರ್ಷಿಕ 6,000 ರೂ. ಸಹಾಯಧನ ನೀಡುತ್ತದೆ.
ಮಗುವಿನ ಜನನದ ಆರು ತಿಂಗಳೊಳಗೆ ಆನ್ʼಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.

9) ದುರ್ಬಲತೆ ಪಿಂಚಣಿ ಸೌಲಭ್ಯ:
ನೋಂದಾಯಿತ ಕಾರ್ಮಿಕರು ಖಾಯಿಲೆಯಿಂದ ಅಥವಾ ಕಟ್ಟಡ ಕಾಮಗಾರಿಗಳ ವೇಳೆ ಯಾವುದೇ ಅವಘಡ ಸಂಭವಿಸಿ ಅಂಗವಿಕಲತೆ ಉಂಟಾದರೆ ಪ್ರತಿ ತಿಂಗಳು 2000 ರೂ. ಧನಸಹಾಯ ಪಡೆಯಬಹುದು. ಮಂಡಳಿಯ ವತಿಯಿಂದ ಅಪಘಾತ ಪರಿಹಾರ ಸಹಾಯಧನ ಪಡೆಯದಿದ್ದಲ್ಲಿ ದುರ್ಬಲತೆ ಆಧಾರದ ಮೇಲೆ ಅನುಗ್ರಹ ರಾಶಿ ಸಹಾಯಧನ ಪಡೆಯಬಹುದು.

10) ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ – ಮತ್ತು ಶಸ್ತ್ರಚಿಕಿತ್ಸೆ, ನರ ರೋಗ ಶಸ್ತ್ರಚಿಕಿತ್ಸೆ, ವ್ಯಾಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್‌ಲೊಕೇಶನ್ ಚಿಕಿತ್ಸೆ, ಪ್ರಮುಖ ಖಾಯಿಲೆಗಳ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಮಂಡಳಿಯು ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ 2,00,000 ರೂ. ಸಹಾಯಧನ ನೀಡುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ 6 ತಿಂಗಳೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.

11) ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ.300/- ರಿಂದ ರೂ.20,000/-ವರೆಗೆ ಸಹಾಯಧನ ನೀಡುತ್ತಾರೆ.

12) ಮದುವೆ ಸಹಾಯಧನ (ಗೃಹಲಕ್ಷ್ಮೀ ಬಾಂಡ್): ನೋಂದಾಯಿತ (Labour Card Karnataka) ಕಟ್ಟಡ ಕಾರ್ಮಿಕ ಫಲಾನುಭವಿ ಅಥವಾ ಅವರ ಮೊದಲ ಎರಡು ಮಕ್ಕಳ ಮದುವೆಗೆ ಮಂಡಳಿಯು 60,000 ರೂ. ಸಹಾಯಧನ ನೀಡುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
ನೋಂದಣಿ ದಿನಾಂಕದಿಂದ ಮದುವೆ ದಿನಾಂಕದವರೆಗೆ ಮಂಡಳಿಯಲ್ಲಿ ಕನಿಷ್ಟ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
ಒಂದು ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಬಹುದು. ವಧು ವರರು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು. ಮದುವೆಯಾದ ದಿನದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು.

13) ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,00,000/- ದವರೆಗೆ ಮುಂಗಡ ಸೌಲಭ್ಯ ನೀಡುತ್ತಾರೆ.

14) ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ: ನೋಂದಾಯಿತ ಫಲಾನುಭವಿಯ ಅವಲಂಭಿತರಿಗೆ( ಈಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ)

15) ಶಿಶು ಪಾಲನಾ ಸೌಲಭ್ಯ: ಕಟ್ಟಡ ಮತ್ತು ಇತರೆ ನಿರ್ಮಾಣ ಸ್ಥಳಗಳಲ್ಲಿ ಫಲಾನುಭವಿಯ 06 ತಿಂಗಳ ಮಗುವಿನಿಂದ
06 ವರ್ಷದ ಮಕ್ಕಳ ಪಾಲನೆಗಾಗಿ ಶಿಶು ಪಾಲನಾ ಸೌಲಭ್ಯ

16) ಅಂತ್ಯಕ್ರಿಯೆ ವೆಚ್ಚ : 4,000 ರೂ. ಹಾಗೂ ಅನುಗ್ರಹ ರಾಶಿ 71,000 ರೂ. ಸಹಾಯಧನ

ಸರ್ಕಾರ ಇತರೆ ಯೋಜನೆಗಳು

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

“ಗೃಹ ಲಕ್ಷ್ಮೀ” ಯೋಜನೆ 2023 ಅರ್ಜಿ ಸಲ್ಲಿಕೆ ಹೇಗೆ?

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂತಾ? ಚೆಕ್‌ ಮಾಡಿ

ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

Telegram Group Join Now
WhatsApp Group Join Now

Leave a Comment