ವಿದ್ಯಾರ್ಥಿಗಳಿಗೆ 35,000 ರೂ. ಪ್ರೋತ್ಸಾಹಧನ, ಅರ್ಜಿ ಸಲ್ಲಿಸಿ | Prize Money Scholarship 2023-24 Apply Online, Last Date @sw.kar.nic.in

Telegram Group Join Now
WhatsApp Group Join Now

ನಮಸ್ಕಾರ, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ Prize Money Scholarship 2023 ಪ್ರೋತ್ಸಾಹಧನದ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಅರ್ಹ ವಿದ್ಯಾರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಯಾವ ಕೋರ್ಸ್‌ಗೆ ಎಷ್ಟು Prize Money ನೀಡಲಾಗುತ್ತದೆ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂತಾದ ವಿವರ ನೀಡಲಾಗಿದೆ. ಲೇಖನವನ್ನು ಓದಿ ಅರ್ಹರು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

Prize Money Scholarship 2023 ಸಂಕ್ಷಿಪ್ತ ವಿವರ:

ಯೋಜನೆಯ ಹೆಸರು Prize Money
ಇಲಾಖೆ ಹೆಸರುಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
ಅರ್ಹತೆPUC, Degree, Diploma, PG ಪಾಸಾದವರು
ಈ ಯೋಜನೆ ಯಾರಿಗಾಗಿSC, ST ಸಮುದಾಯದವರಿಗೆ
ಯಾರು ಅರ್ಜಿ ಸಲ್ಲಿಸಬಹುದು 2023 ರಲ್ಲಿ ಪಾಸಾದವರು
ಅರ್ಜಿ ಸಲ್ಲಿಕೆ ವಿಧಾನಆನ್‌ಲೈನ್‌
ಲೇಖನ ವಿಭಾಗScholarships

Post Matric Prize Money 2023 For SC, ST Students: ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಪದವಿ, ಯಾವುದೇ ಸ್ನಾತಕೋತ್ತರ ಪದವಿಯನ್ನು 2023 ನೇ ಸಾಲಿನಲ್ಲಿ ಪಾಸಾಗಿರಬೇಕು.

SC ST Prize Money Amount in Karnataka 2023:

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಕೇಳಗೆ ನೀಡಿರುವ ಮೊತ್ತವನ್ನು ಕೋರ್ಸ್‌ಗಳಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ & ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ನೀಡುತ್ತದೆ.

 • PUC Prize Money 2023 – ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ:- 20,000 ರೂಪಾಯಿ
 • Degree Prize Money 2023 – ಪದವಿ:- 25,000 ರೂಪಾಯಿ
 • PG Prize Money 2023 – ಯಾವುದೆ ಸ್ನಾತಕೋತ್ತರ (ಉದಾ: M.A., M.Sc ಮುಂತಾದ):- 30,000 ರೂಪಾಯಿ
 • Agriculture, Engineering, Veterinary, Medicine:- 35,000 ರೂಪಾಯಿ

Prize Money Scholarship ಅರ್ಹತೆಗಳು:

 • ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಯಾಗಿರಬೇಕು
 • ಪ್ರಥಮ ಬಾರಿಗೆ (First Attempt) ಪಾಸಾಗಿರಬೇಕು
 • ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು

ಸೂಚನೆ: ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ʼಸೈಟ್ʼನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ.

ಅಗತ್ಯ ದಾಖಲೆಗಳು:

 • ಆಧಾರ ಸಂಖ್ಯೆ
 • Passport Size ಭಾವಚಿತ್ರ‌
 • SSLC Marks Card
 • Marks Cards
 • Income Caste Certificate
 • ಬ್ಯಾಂಕ್‌ ಖಾತೆ ವಿವರ
 • ಮೊಬೈಲ್‌ ನಂಬರ್

How To Apply Post Matric Prize Money Scholarship 2023?

 • Step-1: ಮೊದಲಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (ಲಿಂಕ್‌ ಕೇಳಗೆ ನೀಡಿಲಾಗಿದೆ)
 • Step-2: ಅಲ್ಲಿ “ಆನ್ ಲೈನ್ ಅರ್ಜಿ/Online Application (Passed in 2023 only)” ಎಂದಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
 • Step-3: ಒಂದು ಹೊಸ ಪೇಜ್‌ ಓಪನ್‌ ಆಗುತ್ತದೆ. ಅಲ್ಲಿ “SSLC DETAILS” ಎಂದಿರುತ್ತದೆ. ಅದರಲ್ಲಿ ಈ ಕೇಳಗಿನ ಮಾಹಿತಿಯನ್ನು Fill-Up ಮಾಡಿ. ನಂತರ Submit Button ಮೇಲೆ ಕ್ಲಿಕ್‌ ಮಾಡಿ.
  • SSLC BOARD TYPE:
  • SSLC PASSED YEAR:
  • SSLC REGISTRATION NUMBER:
  • CASTE:
  • STUDENT Name as in Aadhar Card:
 • Step-4: ನಂತರ “ನಿಮ್ಮ ಗುರುತಿನ ಧೃಢೀಕರಣ ಸೇವೆ” ಎಂದಿರುತ್ತದೆ. ಅದರಲ್ಲಿ ನಿಮ್ಮ ಆಧಾರ ಕಾರ್ಡ್‌ನಲ್ಲಿರುವಂತೆ ನಿಮ್ಮ ಹೆಸರನ್ನು ಅಲ್ಲಿ ಭರ್ತಿ ಮಾಡಿ ಮತ್ತು ಆಧಾರ ಸಂಖ್ಯೆಯನ್ನು Enter ಮಾಡಿ. I Agree ಟಿಕ್‌ ಮಾರ್ಕ್ ✅ ಮಾಡಿ. ನಂತರ Submit ಬಟನ್ ಮೇಲೆ‌ ಕ್ಲಿಕ್ ಮಾಡಿ.
 • Step-5: ನಂತರ ಮತ್ತೊಂದು ಹೊಸ ಪುಟ ಓಪನ್‌ ಆಗುತ್ತದೆ. ಅದರಲ್ಲಿ ನಿಮ್ಮ Personal Details ಅನ್ನು ಎಂಟರ್‌ ಮಾಡಬೇಕಾಗುತ್ತದೆ.
 • Step-6: ನಿಮ್ಮ ವಯಕ್ತಿಕ ಮಾಹಿತಿಯನ್ನು ನಮೂದಿಸಿದ ನಂತರ College & Course Details ಎಂದಿರುತ್ತದೆ. ಅಲ್ಲಿ ನಿಮ್ಮ College ಮಾಹಿತಿ, ನಿಮ್ಮ Course ಮಾಹಿತಿ ನಿಮ್ಮ Exam Reg No. ಮತ್ತು ನೀವು ಪಡೆದಿರುವ ಅಂಕಗಳ ಮಾಹಿತಿಯನ್ನು ನಮೂದಿಸಿ.
 • Step-7: ತದನಂತರ ನಿಮ್ಮ ಬ್ಯಾಂಕ್‌ ಖಾತೆಯ ವಿವರ ನಮೂದಿಸಬೇಕು.
 • Step-8: ಅಂತಿಮ ಹಂತದಲ್ಲಿ ನಿಮ್ಮ ಭಾವಚಿತ್ರ, Caste Certificate, Marks Card ಸ್ಕ್ಯಾನ್‌ ಪ್ರತಿಗಳನ್ನು Upload ಮಾಡಬೇಕು. ಈ ದಾಖಲೆಗಳ File Size 100KB ಗಿಂತ ಕಡಿಮೆ ಇರಬೇಕು. ಅಲ್ಲಿ ಕೇಳಲಾದ ದಾಖಲೆಗಳನ್ನು Upload ಮಾಡಿ Declaration ಟಿಕ್‌ ಮಾರ್ಕ್ ✅ ಮಾಡಿ. ನಿಮ್ಮ ಅರ್ಜಿಯನ್ನು Submit ಮಾಡಬೇಕು.
 • ಅಂತಿಮವಾಗಿ ನಿಮ್ಮ Prize Money Application 2023 ಅನ್ನು ಭರ್ತಿ ಮಾಡಿರುತ್ತಿರಿ.
 • ಇಲಾಖೆ ನಿಮ್ಮ ದಾಖಲೆಗಳನ್ನು ಪರಿಶೀಲನೇ ಮಾಡಿ. ನಿಮ್ಮ ದಾಖಲೆಗಳು ಮಾನ್ಯವಾಗಿದ್ದರೆ, ನೀವು ಅರ್ಹರಾಗಿದ್ದರೆ ಅರ್ಜಿಯನ್ನು Approve ಮಾಡುತ್ತದೆ. ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಅಥವಾ ಮಾಹಿತಿಯಲ್ಲಿ ದೋಷಗಳಿದ್ದರೆ, ತಪ್ಪು ಮಾಹಿತಿ ಇದ್ದರೆ Reject ಮಾಡುತ್ತಾರೆ.

ಮುಂದಿನ ಲೇಖನದಲ್ಲಿ Prize Money Scholarship 2023 Status Check ಮಾಡುವ ವಿಧಾನವನ್ನು ತಿಳಿಸಿಕೊಡಲಿದ್ದೇವೆ. ಹಾಗಾಗಿ ನಮ್ಮ WhatsApp Group, Telegram Channel ಗೆ Join ಆಗಿ ಅಥವಾ ನಮ್ಮ ವೆಬ್‌ಸೈಟ್‌ ನೋಟಿಫಿಕೇಶ್‌ ಆನ್‌ ಮಾಡಿಕೊಳ್ಳಿ.

Prize Money Scholarship 2023 Last Date:
SC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2024
ST ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2024

SC ST Prize Money Scholarship 2023 ಪ್ರಮುಖ ಲಿಂಕ್‌ಗಳು:
SC Prize Money 2023 ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ
ST Prize Money 2023 ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ
ಅಧಿಕೃತ ವೆಬ್‌ಸೈಟ್‌ಗಳು:
sw.kar.nic.in, swdservices.karnataka.gov.in

ವಿಶೇಷ ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್‌ ನಲ್ಲಿ ತಿಳಿಸಲಾಗಿರುವ ಎಲ್ಲ ವಿವರಗಳನ್ನು ಪಡೆದು ನಂತರ ಅರ್ಜಿ ಸಲ್ಲಿಸಿ. ಯಾವುದೇ ಗೊಂದಲಗಳಿದ್ದರೆ ನಿಮ್ಮ ಕಾಲೇಜಿನಲ್ಲಿ ವಿಚಾರಿಸಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.

ಕೊನೆಯ ಮಾತು: ಈ ಲೇಖನ ನಿಮಗೆ Prize Money Application ಸಲ್ಲಿಸಲು ಸಹಕಾರಿಯಾಗಿದೆ ಎಂದು ಭಾವಿಸುತ್ತೇವೆ. ಇದೆ ರೀತಿಯ ವಿದ್ಯಾರ್ಥಿವೇತನ, ಪ್ರೋತ್ಸಾಹಧನ, ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಿಮ್ಮ Kannadasiri.in ಗೆ ಭೇಟಿ ನೀಡಿ. ನಿಮ್ಮ ಸ್ನೇಹಿತರಿಗೂ ಕನ್ನಡ ಸಿರಿ ವೆಬ್‌ಸೈಟ್‌ನ್ನು ಪರಿಚಯಿಸುವುದಕ್ಕಾಗಿ ಲಿಂಕ್‌ಅನ್ನು ಅವರಿಗೆ ಶೇರ್‌ ಮಾಡಿ.

ಇತರೆ ಮಾಹಿತಿಗಳನ್ನು ಓದಿ:

Prize Money ಅರ್ಜಿ ಸ್ಥಿತಿ ನೋಡಿ, ಹಣ ಬಂತಾ ಚೆಕ್‌ ಮಾಡಿ

Scholarship: ಶುಲ್ಕ ಮರುಪಾವತಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ವಿದ್ಯಾಸಿರಿ ವಿದ್ಯಾರ್ಥಿ ವೇತನ: ಆನ್‌ಲೈನ್‌ ಅರ್ಜಿ ಆಹ್ವಾನ

Prize Money ಅರ್ಜಿ ಸ್ಥಿತಿ ನೋಡಿ, ಹಣ ಬಂತಾ ಚೆಕ್‌ ಮಾಡಿ

Labour Department Scholarship 2023

SSP Scholarship 2023, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment

error: Content is protected !!