e-Shram Card ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ | E Shram Card Apply Online Karnataka 2024‌ @www.eshram.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಇ-ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕೆ? ಅರ್ಜಿ ಸಲ್ಲಿಸಲು ಯಾರು ಅರ್ಹರು ಹಾಗೂ ಯಾವ ಕೆಲಸ ಮಾಡುವವರು E Shram Card ಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ಯಾವೇಲ್ಲ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಸರಿಯಾಗಿ ಓದಿ ಅರ್ಜಿ ಸಲ್ಲಿಸಿ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 379 ವರ್ಗಗಳ ಕಾರ್ಮಿಕರು ಇ-ಶ್ರಮ್ ಕಾರ್ಡ್ ಗೆ ನೋಂದಣಿಯಾಗಬಹುದಾಗಿದೆ.

E Shram Card ಅರ್ಜಿ ಸಲ್ಲಿಕೆಗೆ ಅರ್ಹತೆ:

  • ಕನಿಷ್ಠ 16 ವರ್ಷ ರಿಂದ 59 ವಯೋ
  • ಆದಾಯ ತೆರಿಗೆ ಪಾವತಿದಾರರಾಗಿರಬಾರದು.
  • ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು.

E Shram Card: ಅವಶ್ಯಕ ದಾಖಲೆಗಳು:
ಆಧಾರ್ ಕಾರ್ಡ್
ಆಧಾ‌ರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ.
ಬ್ಯಾಂಕ್ ಖಾತೆ ವಿವರಗಳು.

ಹಂತ- 1: ಮೊದಲಿಗೆ ಅಧಿಕೃತ ವೆಬ್‌ ಸೈಟ್’ಗೆ ಭೇಟಿ ನೀಡಿ “Register on e-SHRAM” ಮೇಲೆ ಕ್ಲಿಕ್ ಮಾಡಿ.

ಹಂತ- 2: ನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ್ ವನ್ನು ನಮೂದಿಸಬೇಕು ನಂತರ ನೀವು EPFO ಮತ್ತು ESIC ಸದಸ್ಯರಿದ್ದೀರಾ ಎಂದು ಕೇಳಾಗಿದೆ ಅದನ್ನು No ಎಂದು ಆಯ್ಕೆ ಮಾಡಿ ನಂತರ Send OTP ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ- 3: ನಿಮ್ಮ ಮೊಬೈಲ್ ನಂಬರಗೆ ಬಂದ OTP ಸಂಖ್ಯೆಯನ್ನು ನಮೂದಿಸಿ Submit ಮಾಡಿ.

ಹಂತ- 4: ನಿಮ್ಮ ಆಧಾರ್ ನಂಬರನ್ನು ನಮೂದಿಸಿ Submit ಮಾಡಿ.

ಹಂತ- 5: ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯು ಕಂಪ್ಯೂಟರ್ ಪರದೆಯ ಮೇಲೆ ತೋರಿಸಲಾಗುವುದು. ಅದನ್ನು ಪರಿಶೀಲಿಸಿ. ಇತರೆ ಮಾಹಿತಿಯನ್ನು ನಮೂದಿಸಿ ಮುಂದುವರೆಯಬೇಕು.

ಹಂತ- 6: ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಕು.

ಹಂತ- 7: ನಿಮ್ಮ ವಿಳಾಸದ ವಿವರವನ್ನು ನಮೂದಿಸಬೇಕು.

ಹಂತ- 8: ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಆದಾಯದ ವಿವರಗಳನ್ನು ನಮೂದಿಸಬೇಕು.

ಹಂತ- 9: ವೃತ್ತಿ/ಉದ್ಯೋಗದ ವಿವರಗಳನ್ನು ನಮೂದಿಸಿ.

ಹಂತ- 10: ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಲಿಂಕ್ ಆಗಿರದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರ ನಮೂದಿಸಿ.

ಹಂತ- 11: ನೀವು ಎಂಟರ್‌ ಮಾಡಿರುವ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ-12: ಸಕ್ರಿಯವಾಗಿ ಅರ್ಜಿಯನ್ನು ಸಲ್ಲಿಸಿದ ನಂತರ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದು.

E Shram Card ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ
ಅಧಿಕೃತ ವೆಬ್‌ಸೈಟ್:‌ www.eshram.gov.in, www.ksuwssb.karnataka.gov.in

ಹೆಚ್ಚಿನ ಮಾಹಿತಿ/ಸಹಾಯಕ್ಕಾಗಿ ಸಂಪರ್ಕಿಸಿ:

  • ಕಾರ್ಮಿಕ ಸಹಾಯವಾಣಿ 155214 (24×7).
  • ಇ-ಶ್ರಮ್ ಸಹಾಯ ವಾಣಿ 14434 (ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 08 ರಿಂದ ರಾತ್ರಿ 08 ವರೆಗೆ
  • ದೂರುಗಳನ್ನು ಸಲ್ಲಿಸಲು URL: www.gms.eshram.gov.in ಗೆ ಭೇಟಿ ನೀಡುವುದು.
  • ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳ ಮಾಹಿತಿಯನ್ನು ಪಡೆಯಲು https://findmycse.nic.in/csc/ ಜಾಲತಾಣಕ್ಕೆ ಭೇಟಿ ನೀಡಿ
  • ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಜಾಲತಾಣ: www.ksuwssb.karnataka.gov.in

ಇತರೆ ಮಾಹಿತಿಗಳನ್ನು ಓದಿ

Labour Card Scholarship 2023-24 Apply Online

Labour Card Karnataka Application 2024

Telegram Group Join Now
WhatsApp Group Join Now

Leave a Comment