ಯುವ ನಿಧಿ: 3,000 ರೂ. ಹಣ ಜಮಾ ಯಾವಾಗ..? ಮಾಹಿತಿ ಇಲ್ಲಿದೆ | Yuva Nidhi DBT Status Check Online 2024 @sevasindhugs.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್‌ ನ್ಯೂಸ್. ನಿಮಗೆ ಯಾವಾಗ ಹಣ ಜಮಾ (Yuva Nidhi DBT Status) ಆಗಲಿದೆ ಎಂಬುದನ್ನು ತಿಳಿಸಲು ನಾವು ಈ ಲೇಖನವನ್ನು ಬರೆದಿದ್ದೀವೆ ಆಸಕ್ತರು ಓದಿರಿ.

ಪದವೀಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ನಿರುದ್ಯೋಗ ಭತ್ಯೆ ನೀಡಲು “ಕರ್ನಾಟಕ ಯುವ ನಿಧಿ ಯೋಜನೆ” ಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ಯುವ ನಿಧಿ ಯೋಜನೆಗಾಗಿ 2023 ರ ಡಿಸೆಂಬರ್‌ 26 ರಿಂದ ಆನ್‌ಲೈನ್‌ ಮೂಲಕ ನೋಂದಣಿ ಪ್ರಕ್ರೀಯೆ ಆರಂಭವಾಗಿದೆ. 2023 ರಲ್ಲಿ ಪದವಿ ಮತ್ತು ಡಿಪ್ಲೊಮಾ ಪಾಸಾಗಿರುವ ವಿದ್ಯಾರ್ಥಿಗಳಿಗೆ ಮಾಸಿಕ 3 ಸಾವಿರ ರೂ. ಮತ್ತು 1,500 ರೂ. ಪಾವತಿಸುವ ಯೋಜನೆ ಇದಾಗಿದೆ.

ಈಗಾಗಲೇ ಸುಮಾರು 40 ಸಾವಿರಕ್ಕೂ ಅಧಿಕ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಬರಗಾಲದ ಸಮಯದಲ್ಲಿ ನಿರುದ್ಯೋಗ ಭತ್ಯೆ ಯುವ ಜನರಿಗೆ ಸಹಕಾರಿಯಾಗಲಿದೆ.

ಯುವ ನಿಧಿ ಹಣ ಬಿಡುಗಡೆ ಯಾವಾಗ..?

ಸರ್ಕಾರದ ಮೂಲಗಳ ಪ್ರಕಾರ ‘ಸ್ವಾಮಿ ವಿವೇಕಾನಂದ ಜಯಂತಿ‌’ ದಿನವಾದ 12-01-2024 ರಂದು ‘ಯುವನಿಧಿ‘ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (Yuva Nidhi Scheme DBT) ಮಾಡಲಿದ್ದಾರೆ.

‘ಯುವನಿಧಿ’ ಯೋಜನೆಯ ಹಣ ವರ್ಗಾವಣೆ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಜರುಗಲಿದೆ.

ಯುವಕರಲ್ಲಿ ಆತ್ಮವಿಶ್ವಾಸ ತುಂಬಿ ಉದ್ಯೋಗ ಸಿದ್ಧತೆ ನಡೆಸಲು ಈ ಯೋಜನೆ ಸಹಾಯ ಮಾಡಲಿದ್ದು, ಇನ್ನುವರೆಗೆ ಅರ್ಜಿ ಸಲ್ಲಿಸದ ಫಲಾನುಭವಿಗಳು ಇಂದೇ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡಿಕೊಳ್ಳಬಹುದು.

Yuva Nidhi DBT Status Check

‘ಯುವನಿಧಿ’ ಯೋಜನೆಯ DBT Status Check ಮಾಡುವ ಲಿಂಕ್‌ಅನ್ನು ಶೀಘ್ರದಲ್ಲೇ ನಿಮಗೆ ನೀಡಲಾಗುತ್ತದೆ. ನೀವು ದಯವಿಟ್ಟು ನಮ್ಮ www.kannadasiri.in ನ ವಾಟ್ಸ್‌ಆಪ್‌ ಗ್ರುಪ್‌ ಮತ್ತು ನೋಟಿಫಿಕೇಷನ್‌ ಆನ್‌ ಮಾಡಿಕೊಳ್ಳಿ.

Yuva Nidhi Application Link 2023-24:

ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್‌ ಮಾಡಿ

Telegram Group Join Now
WhatsApp Group Join Now

Leave a Comment