ಎಲ್ಲರಿಗೂ ನಮಸ್ಕಾರ, ನೀವು ಕೂಡ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಬೇಕೆ..? ಯಾರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಯಾವೇಲ್ಲಾ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ವಿದ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣವನ್ನು ಮುಂದುವರೆಸಲು NextGen Edu ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ. ಭಾರತದಲ್ಲಿನ ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ದಾಖಲಾದ 11 ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು.
NextGen Edu Scholarship 2024 ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 15,000 ರೂ. ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನದ ಲಾಭ ಪಡೆದುಕೊಳ್ಳಬಹುದು. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.
NextGen Edu Scholarship ಅರ್ಹತೆಗಳು:
- 11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅರ್ಜಿದಾರರು ಭಾರತದಾದ್ಯಂತ ಯಾವುದೇ ಖಾಸಗಿ/ಸರ್ಕಾರಿ ಶಾಲೆಯಲ್ಲಿ ದಾಖಲಾಗಿರಬೇಕು.
- ಅಭ್ಯರ್ಥಿಗಳು ತಮ್ಮ 10 ನೇ ತರಗತಿಯಲ್ಲಿ ಕನಿಷ್ಠ 60% ಗಳಿಸಿರಬೇಕು.
- ಅವರು ಎಲ್ಲಾ ಮೂಲಗಳಿಂದ INR 3 ಲಕ್ಷದವರೆಗಿನ ಕುಟುಂಬದ ವಾರ್ಷಿಕ ಆದಾಯವನ್ನು ಹೊಂದಿರಬೇಕು.
- Buddy4Study ಮತ್ತು EY ಗ್ಲೋಬಲ್ ಡೆಲಿವರಿ ಸೇವೆಗಳ ಉದ್ಯೋಗಿಗಳ ಮಕ್ಕಳು ವಿದ್ಯಾರ್ಥಿವೇತನದಲ್ಲಿ ಭಾಗವಹಿಸಲು ಅರ್ಹರಲ್ಲ.
NextGen Edu Scholarship 2024 ದಾಖಲೆಗಳು:
- 10 ನೇ ತರಗತಿ ಅಂಕಪಟ್ಟಿ
- ಸರ್ಕಾರ ನೀಡಿದ ವಿಳಾಸ ಪುರಾವೆ (ಆಧಾರ್ ಕಾರ್ಡ್)
- ಕುಟುಂಬದ ಆದಾಯದ ಪುರಾವೆಗಳಾದ ITR, Salary Slip, ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರದಿಂದ ಆದಾಯ ಪ್ರಮಾಣಪತ್ರ ಇತ್ಯಾದಿ.
- ಪ್ರವೇಶದ ಪುರಾವೆ (ಕಾಲೇಜು/ಶಾಲಾ ಗುರುತಿನ ಚೀಟಿ, ಶೈಕ್ಷಣಿಕ ಶುಲ್ಕ ರಶೀದಿ ಅಥವಾ ಶುಲ್ಕ ರಚನೆ)
- ಅರ್ಜಿದಾರರ ಅಥವಾ ಸಂಸ್ಥೆಯ ಬ್ಯಾಂಕ್ ಖಾತೆ ವಿವರಗಳು
- ಯಾವುದೇ NGO/GoI ಅಥವಾ ಸಕ್ಷಮ ಪ್ರಾಧಿಕಾರದಿಂದ ನೀಡಿದ ಟ್ರಾನ್ಸ್ಜೆಂಡರ್ ಪ್ರಮಾಣಪತ್ರ (ಅನ್ವಯಿಸಿದರೆ)
- ಇತ್ತೀಚಿನ ಛಾಯಾಚಿತ್ರ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 26-06-2024
ಪ್ರಮುಖ ಲಿಂಕ್’ಗಳು:
Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

