ಎಲ್ಲರಿಗೂ ನಮಸ್ಕಾರ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ (PMMVY Scheme) ಅರ್ಜಿ ಸಲ್ಲಿಸಬೇಕೆ..? ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂದು ತಿಳಿದಿಲ್ಲವೇ…? ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಎಷ್ಟು ಹಣ ದೊರೆಯಲಿದೆ ಎಂದು ತಿಳಿದಿಲ್ಲವೆ..? ಹಾಗಿದ್ದರೆ ಚಿಂತೆ ಬಿಡಿ. ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಗಮನಿಸಿ.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆಯು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರನ್ನು ಬೆಂಬಲಿಸಲು ಗುರಿಯನ್ನು ಹೊಂದಿದೆ.
ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಒದಗಿಸಲು, 5,000 ರೂ. ಅನ್ನು ಮೂರು ಕಂತುಗಳಲ್ಲಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ನೀಡುತ್ತಾರೆ.
ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಮೊದಲ ಜನನಕ್ಕೆ ಸಿಗಲಿದೆ ನೇರ ನಗದು ಪ್ರಯೋಜನ ದೊರೆಯಲಿದೆ.
ಒಟ್ಟು ಮೂರು ಕಂತುಗಳಲ್ಲಿ ಫಲಾನುಭವಿ ಮಹಿಳೆಯ ಖಾತೆಗೆ 5000 ರೂ. ನೇರ ನಗದು ವರ್ಗಾವಣೆ.
ಹೆರಿಗೆಯ ಸಂದರ್ಭದಲ್ಲಿ ಜನನಿ ಸುರಕ್ಷಾ ಯೋಜನೆಯಡಿ 1000 ರೂ. ನಗದು ಪ್ರೋತ್ಸಾಹ ಧನ ನೀಡಿಕೆ.
ಸೌಲಭ್ಯ ಪಡೆಯಲು ಅರ್ಹ ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು.
PMMVY Scheme ಅಗತ್ಯ ದಾಖಲೆಗಳು:
- ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ನಮೂನೆ 1A
- MCP ಕಾರ್ಡ್ ಪ್ರತಿ
- ಗುರುತಿನ ಪುರಾವೆಗಳು
- ಬ್ಯಾಂಕ್/ಅಂಚೆ ಕಚೇರಿ ಖಾತೆ ಪಾಸ್‌ಬುಕ್‌ನ ಪ್ರತಿ
- ಅರ್ಜಿದಾರರು ಮತ್ತು ಅವರ ಪತಿ ಸಹಿ ಮಾಡಿದ ಸಮ್ಮತಿ ಪತ್ರ
PM ಮಾತೃ ವಂದನಾ ಯೋಜನೆಯ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಬಹುದು.
ಇತರೆ ಮಾಹಿತಿಗಳು:
Crop Insurance 2025: ಮುಂಗಾರು ಬೆಳೆ ವಿಮೆ, ರೈತರು ಆನ್‌ಲೈನ್ ಅರ್ಜಿ ಸಲ್ಲಿಸಿ

