Ahara Vahini Karnataka: ಆಹಾರ ವಾಹಿನಿ ಯೋಜನೆ; ಸ್ವಂತ ವಾಹನ ಖರೀದಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ; ಅರ್ಹರಿಂದ ಅರ್ಜಿ ಆಹ್ವಾನ

ಸ್ವಂತ ಕಾಲ ಮೇಲೆ ನಿಂತು ಬದುಕು ಕಟ್ಟಿಕೊಳ್ಳಬೇಕು ಎಂಬ ಛಲ ಇರುವ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ‘ಆಹಾರ ವಾಹಿನಿ’ (ಆಹಾರ ಕಿಯೋಸ್ಕ್) ಯೋಜನೆಯಡಿ ಅರ್ಜಿ ಆಹ್ವಾನಿಸಿದ್ದು, ಅರ್ಹರಿಗೆ ಬರೋಬ್ಬರಿ 3 ಲಕ್ಷ ರೂಪಾಯಿಗಳ ಸಬ್ಸಿಡಿ ಸಿಗಲಿದೆ.

Ahara Vahini Karnataka 2026:

ನಗರ ಪ್ರದೇಶಗಳಲ್ಲಿ ಜನಸಂದಣಿ ಇರುವ ಕಡೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ, ನಾಲ್ಕು ಚಕ್ರಗಳ ಇವಿ-ಗೂಡ್ಸ್ (EV-Goods) ವಾಹನಗಳನ್ನು ಖರೀದಿಸಲು ನಿಗಮವು ಧನಸಹಾಯ ನೀಡುತ್ತದೆ.

  • ಸಹಾಯಧನ: ವಾಹನ ಖರೀದಿಗೆ ನಿಗಮದಿಂದ ₹3 ಲಕ್ಷ ಉಚಿತ ನೆರವು.
  • ಉಳಿದ ಮೊತ್ತ: ಬಾಕಿ ಹಣವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಬಹುದು.

ಈ ಯೋಜನೆಯು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ. ಗಮನಿಸಿ: ಈ ಕೆಳಗಿನ ಸಮುದಾಯದವರು ಈ ನಿಗಮದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ (ಏಕೆಂದರೆ ಇವರಿಗೆ ಪ್ರತ್ಯೇಕ ನಿಗಮಗಳಿವೆ):

  • ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ/ಅರೆ ಅಲೆಮಾರಿ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇವುಗಳ ಉಪ ಸಮುದಾಯಗಳನ್ನು ಹೊರತುಪಡಿಸಿ ಉಳಿದ ಹಿಂದುಳಿದ ವರ್ಗದವರು ಇಲ್ಲಿ ಅರ್ಜಿ ಸಲ್ಲಿಸಬೇಕು. ಇನ್ನುಳಿದ ಜಾತಿಯವರಿಗೆ ಪ್ರತ್ಯೇಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು:

  1. ವಯಸ್ಸು: 21 ರಿಂದ 45 ವರ್ಷದೊಳಗಿರಬೇಕು.
  2. ಆದಾಯ: ಕುಟುಂಬದ ವಾರ್ಷಿಕ ವರಮಾನ ₹3 ಲಕ್ಷ ಮೀರಿರಬಾರದು.
  3. ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.

ವಿಧಾನಸಭಾ ಕ್ಷೇತ್ರವರಿಗೆ ಅವಕಾಶ:

ಈ ಯೋಜನೆಯು ಕೇವಲ ಈ ಕೆಳಗಿನ ವಿಧಾನಸಭಾ ಕ್ಷೇತ್ರ/ನಗರಗಳಿಗೆ ಸೀಮಿತವಾಗಿದೆ:

  • ಬೆಂಗಳೂರು ನಗರ: ಬ್ಯಾಟರಾಯನಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಗಾಂಧಿನಗರ, ಕೆ.ಆರ್. ಪುರಂ, ಮಹದೇವಪುರ, ಪುಲಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್ ನಗರ, ಶಿವಾಜಿನಗರ, ದಾಸರಹಳ್ಳಿ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಗೋವಿಂದರಾಜನಗರ, ವಿಜಯನಗರ, ಚಾಮರಾಜಪೇಟೆ, ಚಿಕ್ಕಪೇಟೆ, ರಾಜರಾಜೇಶ್ವರಿ ನಗರ, ಶಾಂತಿನಗರ, ರಾಜಾಜಿನಗರ.
  • ಇತರೆ ಜಿಲ್ಲೆಗಳು: ಶಿವಮೊಗ್ಗ ನಗರ, ತುಮಕೂರು ನಗರ, ಮೈಸೂರು (ಕೃಷ್ಣರಾಜ, ಚಾಮರಾಜ, ನರಸಿಂಹರಾಜ), ಮಂಗಳೂರು ನಗರ (ದಕ್ಷಿಣ), ಬೆಳಗಾವಿ ಉತ್ತರ, ಹುಬ್ಬಳ್ಳಿ-ಧಾರವಾಡ (ಪೂರ್ವ, ಸೆಂಟ್ರಲ್), ಕಲಬುರಗಿ ಉತ್ತರ, ಬಳ್ಳಾರಿ ನಗರ.

Ahara Vahini Scheme Karnataka Application 2026:
ಆನ್‌ಲೈನ್‌ ಅರ್ಜಿ: ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್:‌
sevasindhu.karnataka.gov.in, www.dbcdc.karnataka.gov.in
ಸಹಾಯವಾಣಿ: 080-22374832 / 8050770004 / 8050770005.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-03-2026

ಆಸಕ್ತರು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ) ಅರ್ಜಿ ಸಲ್ಲಿಸಬೇಕು.

ಇತರೆ ಮಾಹಿತಿಗಳನ್ನು ಓದಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment