Labour Card Pension Scheme: ಲೇಬರ್ ಕಾರ್ಡ್ ಇದ್ದವರಿಗೆ ಪಿಂಚಣಿ ಸೌಲಭ್ಯ ಯೋಜನೆ

ಎಲ್ಲರಿಗೂ ನಮಸ್ಕಾರ, ನೀವು ಕೂಡ ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬೇಕೆ..? ಯಾರಿಗೆ ಈ ಸೌಲಭ್ಯಗಳು ದೊರೆಯಲಿವೆ..? Labour Card Pension Scheme ಅರ್ಜಿ ಸಲ್ಲಿಕೆ ಹೇಗೆ..? ಅರ್ಜಿ ಸಲ್ಲಿಸಲು ಯಾವೇಲ್ಲಾ ದಾಖಲೆಗಳು ಬೇಕಾಗುತ್ತದೆ..? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ರಾಜ್ಯದಲ್ಲಿನ 60 ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯವನ್ನು ಕಾರ್ಮಿಕ ಇಲಾಖೆಯ ವತಿಯಿಂದ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ತನಗೆ 60 ವರ್ಷ ಪೂರ್ಣಗೊಳ್ಳುವ ಮೊದಲು ಕನಿಷ್ಠ 3 ವರ್ಷ ನಿರಂತರವಾಗಿ ಮಂಡಳಿಯ ಸದಸ್ಯತ್ವವನ್ನು ನವೀಕರಿಸಿ ಫಲಾನುಭವಿಯಾಗಿರಬೇಕು.

Labour Card Pension Scheme ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಮಂಡಳಿಯು ನೀಡಿರುವ ಗುರುತಿನ ಚೀಟಿ
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಬುಕ್ ಪ್ರತಿ
  • ಜೀವಿತ ಪ್ರಮಾಣಪತ್ರ (ಜೀವಿತ ಅವಧಿಯವರೆಗೆ ಪ್ರತಿ ವರ್ಷ ಸಲ್ಲಿಸುವುದು)
  • ಉದ್ಯೋಗ ದೃಢೀಕರಣ ಪತ್ರ
  • ಸ್ವಯಂ ದೃಢೀಕರಣ ಪತ್ರ

ಅರ್ಹ ಮತ್ತು ಆಸಕ್ತ ನೋಂದಾಯಿತ ಕಾರ್ಮಿಕರು ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಥವಾ ಆನ್’ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ಸಂಖ್ಯೆ: 155214 ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇತರೆ ಮಾಹಿತಿ ಓದಿ:

ಗೃಹಲಕ್ಷ್ಮೀ ಯೋಜನೆಯ 2,000 ರೂ. ಜಮಾ; ನಿಮ್ಮ ಖಾತೆಗೆ ಹಣ ಬಂತಾ..?

ಅನ್ನಭಾಗ್ಯ ಯೋಜನೆಯ DBT ಹಣ ಜಮಾ ಆಗಿದೆ

PM Kisan DBT: PM ಕಿಸಾನ್ ಯೋಜನೆಯ 2,000 ರೂ. ಹಣ ಬಿಡುಗಡೆ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment