Infinix Note 50X 5G: ಇನ್ಫಿನಿಕ್ಸ್ ನೋಟ್ 50X 5G ಸ್ಮಾರ್ಟ್‌ಫೋನ್ ಬಿಡುಗಡೆ

ಎಲ್ಲರಿಗೂ ನಮಸ್ಕಾರ, Infinix Note 50X 5G ಪೋನ್ ಭಾರತದಲ್ಲಿ‌ ಬಿಡುಗಡೆಯಾಗಿದೆ. ಈ ಸ್ಮಾರ್ಟ್’ಫೋನ್ ನ ಬೆಲೆ ಎಷ್ಟು..? ಯಾವೇಲ್ಲಾ ವಿಶೇಷತೆಗಳನ್ನು ಹೊಂದಿದೆ. ಕ್ಯಾಮೆರಾ, ಬ್ಯಾಟರಿ ಸಾಮರ್ಥ್ಯ, ಹಾಗೂ ಬಣ್ಣಗಳ ಆಯ್ಕೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

Infinix Note 50X 5G ಪೋನ್ ನ ವಿಶೇಷತೆಗಳು:

ಇನ್ಫಿನಿಕ್ಸ್ ನೋಟ್ 50X 5G ಸ್ಮಾರ್ಟ್’ಫೋನ್ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ SoC ಚಿಪ್‌ಸೆಟ್‌ ನೊಂದಿಗೆ ಆಂಡ್ರಾಯ್ಡ್ 15 ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇನ್ಫಿನಿಕ್ಸ್ ನೋಟ್ 50X 5G ಡಿಟಿಎಸ್-ಚಾಲಿತ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಹಾಗೂ ನೀರು ಮತ್ತು ಧೂಳು ನಿರೋಧಕತೆಗಾಗಿ IP64-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ. ಇದು ಒನ್-ಟ್ಯಾಪ್ ಇನ್ಫಿನಿಕ್ಸ್ AI ಕಾರ್ಯನಿರ್ವಹಣೆಯೊಂದಿಗೆ ಬರುತ್ತದೆ

ಬ್ಯಾಟರಿ ಸಾಮರ್ಥ್ಯ:
ಇನ್ಫಿನಿಕ್ಸ್ ನೋಟ್ 50X 5G ಸ್ಮಾರ್ಟ್‌ಫೋನ್ 5,500mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಬ್ಯಾಟರಿ ಚಾರ್ಜಿಂಗ್ ಗಾಗಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ಇನ್ಫಿನಿಕ್ಸ್ ನೋಟ್ 50X 5G ಬೆಲೆ:
ಇನ್ಫಿನಿಕ್ಸ್ ನೋಟ್ 50X 5G 6GB RAM ಹಾಗೂ 128GB ಸ್ಟೋರೇಜ್ ನ ಬೆಲೆ: 11,499 ರೂ.
8GB RAM ಹಾಗೂ 128GB ಸ್ಟೋರೇಜ್ ನ ಬೆಲೆ: 12,999 ರೂ.

ಬಣ್ಣಗಳ ಆಯ್ಕೆ:
ಈ ಮೂರು ಬಣ್ಣದ ಆಯ್ಕೆಯನ್ನು ಹೊಂದಿದೆ. ಎನ್‌ಚ್ಯಾಂಟೆಡ್ ಪರ್ಪಲ್ (Enchanted Purple) , ಸೀ ಬ್ರೀಜ್ ಗ್ರೀನ್ (Sea Breeze Green) ಮತ್ತು ಟೈಟಾನಿಯಂ ಗ್ರೇ (Titanium Grey) ಬಣ್ಣಗಳಲ್ಲಿ ಲಭ್ಯವಿದೆ.

ಈ ಫೋನ್ ಖರೀದಿಸುವಾಗ ಖರೀದಿದಾರರಿಗೆ 1,000 ರೂ. ಬ್ಯಾಂಕ್ ರಿಯಾಯಿತಿ ಅಥವಾ ವಿನಿಮಯ ಬೋನಸ್ ಪಡೆಯಬಹುದು. Infinix Note 50X 5G ಸ್ಮಾರ್ಟ್’ಫೋನ್ ಏಪ್ರಿಲ್ 3 ರಿಂದ ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ.

ಇತರೆ ಮಾಹಿತಿ ಓದಿ:

iQOO Neo 10R ಸ್ಮಾರ್ಟ್’ಫೋನ್ ಬಿಡುಗಡೆ

Lenovo Idea Tab Pro: ಲೆನೊವೊ ಕಂಪನಿ ಟ್ಯಾಬ್ ಬಿಡುಗಡೆ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment