ಎಲ್ಲರಿಗೂ ನಮಸ್ಕಾರ, GRT ಜ್ಯುವೆಲರ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ GRT Endowment Scholarship 2025 ಅನ್ನು ನೀಡುತ್ತಿದ್ದಾರೆ. ಅರ್ಹ ವಿದ್ಯಾರ್ಥಿಗಳು ಈ ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಸರಿಯಾಗಿ ಓದಿ ಅರ್ಜಿ ಸಲ್ಲಿಸಿ.
2025-26 ಸಾಲಿನ GRT ದತ್ತಿ ವಿದ್ಯಾರ್ಥಿವೇತನವನ್ನು 12 ನೇ ತರಗತಿ ಪಾಸಾಗಿರುವ ವಿದ್ಯಾರ್ಥಿಗಳಿಗೆ GRT ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನೀಡುತ್ತಾರೆ. ಈ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಪ್ರತಿಭಾನ್ವಿತ ಹಣಕಾಸಿನ ನೇರವು ನೀಡುವ ಗುರಿಯನ್ನು ಹೊಂದಿದೆ.
ಯಾವ ರಾಜ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
GRT ದತ್ತಿ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಹಾಗೂ ತೆಲಂಗಾಣದಲ್ಲಿ ವಾಸಿಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
GRT Endowment Scholarship 2025 ಅರ್ಹತೆಗಳು:
- ವಿದ್ಯಾರ್ಥಿಯು ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಮತ್ತು ತೆಲಂಗಾಣದಲ್ಲಿ ನೆಲೆಸಿರಬೇಕು.
- ಅರ್ಜಿದಾರರು PUC ಯಲ್ಲಿ ಎಲ್ಲಾ ವಿಷಯಗಳಲ್ಲಿ 70% ಅಂಕಗಳೊಂದಿಗೆ ಪಾಸಾಗಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿರಬಾರದು.
GRT ದತ್ತಿ ವಿದ್ಯಾರ್ಥಿವೇತನ ಈ ಕೇಳಗಿನವರು ಅರ್ಜಿ ಸಲ್ಲಿಸಲು ಅರ್ಹರಲ್ಲ:
- GRT ಜ್ಯುವೆಲ್ಲರ್ಸ್ ನ ಉದ್ಯೋಗಿಗಳ ಮಕ್ಕಳು ಈ ಸ್ಕಾಲರ್ಶಿಪ್ ಗೆ ಅರ್ಹರಲ್ಲ, ಆದರೆ GRT ಉದ್ಯೋಗಿಗಳ ಸಂಬಂಧಿಕರ ಮಕ್ಕಳು ಅರ್ಜಿ ಸಲ್ಲಿಸಬಹುದು.
- GRT ಸಂಸ್ಥೆಗಳ ಸಮೂಹಕ್ಕೆ ಪ್ರವೇಶ ಪಡೆದಿರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
- ಈಗಾಗಲೇ ಬೇರೆ ಯಾವುದೇ ಸಂಸ್ಥೆಯಿಂದ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
GRT Scholarship ಅಗತ್ಯ ದಾಖಲೆಗಳು:
- 12th ಮಾರ್ಕ್ಸ್ ಕಾರ್ಡ್
- BPL ಕಾರ್ಡ್
- Domicile certificate
- ಆದಾಯ ಪ್ರಮಾಣ ಪತ್ರ
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2025
GRT Endowment Scholarship 2025 ಪ್ರಮುಖ ಲಿಂಕ್ ಗಳು:
ಅರ್ಜಿ ಸಲ್ಲಿಕೆ ಲಿಂಕ್: ಅರ್ಜಿ ಸಲ್ಲಿಸಿ
ಅಧಿಕೃತ ವೆಬ್ಸೈಟ್: www.grtjewels.com/endowment
ಇತರೆ ಮಾಹಿತಿಗಳು:

