ಹತ್ತನೇ ತರಗತಿ (SSLC) ಪಾಸ್ ಆಗಿ ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ರಾಜ್ಯದ ಯುವಜನತೆಗೆ ಭಾರತೀಯ ಅಂಚೆ ಇಲಾಖೆ (Post Office Recruitment 2026) ಸಿಹಿಸುದ್ದಿ ನೀಡಿದೆ.
ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಕರ್ನಾಟಕವೊಂದರಲ್ಲೇ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.
ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ 10ನೇ ತರಗತಿಯ ಅಂಕಗಳ ಆಧಾರದ ಮೇಲೆ (Merit Based) ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಎಷ್ಟಿವೆ ಹುದ್ದೆಗಳು?
ಅಖಿಲ ಭಾರತ ಮಟ್ಟದಲ್ಲಿ ಒಟ್ಟು 21,413 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಈ ಪೈಕಿ ಕರ್ನಾಟಕ ವೃತ್ತದಲ್ಲಿ (Karnataka Circle) ಒಟ್ಟು 1,135 ಹುದ್ದೆಗಳು ಲಭ್ಯವಿವೆ.
ಕರ್ನಾಟಕದ ಹುದ್ದೆಗಳ ವರ್ಗವಾರು ವಿವರ:
- ಸಾಮಾನ್ಯ ವರ್ಗ (UR): 482
- ಒಬಿಸಿ (OBC): 260
- ಪರಿಶಿಷ್ಟ ಜಾತಿ (SC): 175
- ಆರ್ಥಿಕವಾಗಿ ಹಿಂದುಳಿದ ವರ್ಗ (EWS): 122
- ಪರಿಶಿಷ್ಟ ಪಂಗಡ (ST): 78
- ವಿಕಲಚೇತನರು (PWD): 18 (ವಿವಿಧ ವಿಭಾಗಗಳಲ್ಲಿ)
- ಒಟ್ಟು: 1,135.
ಹುದ್ದೆಗಳ ಹೆಸರು ಮತ್ತು ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ‘ಸಮಯ ಸಂಬಂಧಿತ ನಿರಂತರ ಭತ್ಯೆ’ (TRCA) ಅಡಿಯಲ್ಲಿ ವೇತನ ನೀಡಲಾಗುತ್ತದೆ.
- ಬಿಪಿಎಂ (Branch Postmaster – BPM): ₹12,000 – ₹29,380.
- ಎಬಿಪಿಎಂ/ ಡಾಕ್ ಸೇವಕ್ (ABPM/ Dak Sevak): ₹10,000 – ₹24,470.
ಅರ್ಹತೆಗಳೇನು?
- ಶಿಕ್ಷಣ: ಮಾನ್ಯತೆ ಪಡೆದ ಮಂಡಳಿಯಿಂದ ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.
- ಭಾಷಾ ಜ್ಞಾನ: ಕರ್ನಾಟಕಕ್ಕೆ ಅರ್ಜಿ ಸಲ್ಲಿಸುವವರು ಸ್ಥಳೀಯ ಭಾಷೆಯಾದ ‘ಕನ್ನಡ’ವನ್ನು 10ನೇ ತರಗತಿಯವರೆಗೆ ಒಂದು ವಿಷಯವಾಗಿ ಓದಿರಬೇಕು.
- ಇತರೆ: ಕಂಪ್ಯೂಟರ್ ಜ್ಞಾನ ಮತ್ತು ಸೈಕಲ್ ಸವಾರಿ ಗೊತ್ತಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸು: 18 ವರ್ಷಗಳು.
- ಗರಿಷ್ಠ ವಯಸ್ಸು: 40 ವರ್ಷಗಳು.
- ವಯೋಮಿತಿ ಸಡಿಲಿಕೆ: SC/ST ಗೆ 5 ವರ್ಷ, OBC ಗೆ 3 ವರ್ಷ ಹಾಗೂ PWD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
Post Office Recruitment 2026 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ: 10-02-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2025
- ಅರ್ಜಿ ತಿದ್ದುಪಡಿ (Correction Window): 06-03-2025 ರಿಂದ 08-03-2025 ರವರೆಗೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
- ವೆಬ್‌ಸೈಟ್:
https://indiapostgdsonline.gov.in - ಅರ್ಜಿ ಶುಲ್ಕ: ₹100/- (ಸಾಮಾನ್ಯ ಮತ್ತು OBC ಪುರುಷ ಅಭ್ಯರ್ಥಿಗಳಿಗೆ ಮಾತ್ರ). ಮಹಿಳೆಯರು, SC/ST, PwD ಮತ್ತು ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
Post Office Recruitment 2026 Karnataka Application 2026:
ಆನ್‌ಲೈನ್ ಅರ್ಜಿ: ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್: indiapostgdsonline.cept.gov.in
ಇತರೆ ಮಾಹಿತಿಗಳನ್ನು ಓದಿ

