DCC ಬ್ಯಾಂಕ್ ನೇಮಕಾತಿ 2023 ಆನ್‌ಲೈನ್‌ ಅರ್ಜಿ ಸಲ್ಲಿಸಿ | Bangalore DCC BANK Recruitment 2023 Apply Online

Telegram Group Join Now
WhatsApp Group Join Now

Bangalore DCC BANK Recruitment 2023 Notification For Branch managers, Senior Assistants, Junior Assistants, Stenographer, Computer Operators, Drivers Vacancies.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (BDDCB) ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಶಾಖಾ ವ್ಯವಸ್ಥಾಪಕರು (Branch managers) , ಹಿರಿಯ ಸಹಾಯಕರು (Senior Assistants), ಶೀಘಲಿಪಿಗಾರರು (Stenographer), ಕಿರಿಯ ಸಹಾಯಕರು (Junior Assistants), ಕಂಪ್ಯೂಟರ್ ಆಪರೇಟರ್ ( Computer Operators), ವಾಹನ ಚಾಲಕರು(Drivers) ಮತ್ತು Class-IV ಹುದ್ದೆಗಳಿಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿರಿ.

DCC ಬ್ಯಾಂಕ್ ಹೊಸ ನೇಮಕಾತಿ 2023

SDA FDA ನೇಮಕಾತಿ 2023

ಅಂಚೆ ಇಲಾಖೆ ಭರ್ಜರಿ ನೇಮಕಾತಿ 2023

RBKMUL ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Bangalore DCC BANK Recruitment 2023 ಸಂಕ್ಷಿಪ್ತ ವಿವರ

ನೇಮಕಾತಿ ಸಂಸ್ಥೆ: DCC BANK Bangalore
ಒಟ್ಟು ಹುದ್ದೆಗಳು: 96 ಹುದ್ದೆಗಳು
ವೇತನ ಶ್ರೇಣಿ: ವಿವಿಧ ಹುದ್ದೆಗಳಿಗೆ ಅನುಸಾರ
ಅರ್ಜಿ ಸಲ್ಲಿಕೆ ಆರಂಭ: 30-01-2023

Bangalore DCC BANK Recruitment 2023 ವೇತನ ಶ್ರೇಣಿ:

ಹುದ್ದೆಗಳುವೇತನ
ಶಾಖಾ ವ್ಯವಸ್ಥಾಪಕರು40,900 ರಿಂದ 78,200 ರೂ
ಹಿರಿಯ ಸಹಾಯಕರು37,900 ರಿಂದ 70,850 ರೂ
ಶೀಘಲಿಪಿಗಾರರು37,900 ರಿಂದ 70,850 ರೂ
ಕಿರಿಯ ಸಹಾಯಕರು30,350 ರಿಂದ 58,250 ರೂ
ಕಂಪ್ಯೂಟರ್ ಆಪರೇಟರ್30,350 ರಿಂದ 58,250 ರೂ
ವಾಹನ ಚಾಲಕರು27,650 ರಿಂದ 52,650 ರೂ
Class-IV ಹುದ್ದೆ23,500 ರಿಂದ 47,650 ರೂ

Bangalore DCC BANK Recruitment 2023 ಶೈಕ್ಷಣಿಕ ಅರ್ಹತೆ:

ಶಾಖಾ ವ್ಯವಸ್ಥಾಪಕರು (Branch managers):
ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಕನ್ನಡವನ್ನು ಓದಲು, ಬರೆಯಲು, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ ಹಾಗೂ ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು.

ಹಿರಿಯ ಸಹಾಯಕರು (Senior Assistants) ಹುದ್ದೆಗಳು.
ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಕನ್ನಡವನ್ನು ಓದಲು, ಬರೆಯಲು, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ ಹಾಗೂ ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು.

ಶೀಘಲಿಪಿಗಾರರು (Stenographer) ಹುದ್ದೆಗಳು:
ದ್ವಿತೀಯ ಪಿ.ಯು.ಸಿ.ಯಲ್ಲಿ ಅಥವಾ 3 ವರ್ಷಗಳ ಡಿಪ್ಲೋಮೊ ಇನ್ ಕಮರ್ಷಿಯಲ್ ಪ್ರಾಕ್ಟಿಸ್‌ನಲ್ಲಿ ಉತ್ತೀರ್ಣರಾಗಿರಬೇಕು, ಸೀನಿಯರ್ ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಟೈಪಿಂಗ್, ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ ಜ್ಞಾನವಿರಬೇಕು ಮತ್ತು ಕನ್ನಡವನ್ನು ಓದಲು, ಬರೆಯಲು, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಬೇಕು.

ಕಿರಿಯ ಸಹಾಯಕರು (Junior Assistants) ಹುದ್ದೆಗಳು:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀಣ೯ರಾಗಿರಬೇಕು, ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಶನ್ ಜ್ಞಾನವಿರಬೇಕು.

ಕಂಪ್ಯೂಟರ್ ಆಪರೇಟರ್ (Computer Operators) ಹುದ್ದೆಗಳು:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಅಥವಾ 3 ವರ್ಷಗಳ ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟಿಸ್‌ನಲ್ಲಿ ಉತ್ತೀರ್ಣರಾಗಿರಬೇಕು, ಸೀನಿಯರ್, ಕನ್ನಡ ಮತ್ತು ಇಂಗ್ಲಿಷ್ ಟೈಪ್ ರೈಟಿಂಗ್‌ನ್ನು ಉತ್ತೀರ್ಣರಾಗಿರಬೇಕು, ಕಂಪ್ಯೂಟ‌ರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವಿರಬೇಕು ಮತ್ತು ಕನ್ನಡವನ್ನು ಓದುವ ,ಬರೆಯುವ ಹಾಗೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.


ವಾಹನ ಚಾಲಕರು (Drivers) ಹುದ್ದೆಗಳು:
ಎಸ್.ಎಸ್.ಎಲ್.ಸಿ
ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು,ಕಾನೂನಿನನ್ವಯ ಲಘು ಹಾಗೂ ಭಾರೀ ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು.

Class- IV ಹುದ್ದೆಗಳು:
ಎಸ್.ಎಸ್.ಎಲ್.ಸಿ
ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

ವಯೋಮಿತಿ :
ಸಾಮಾನ್ಯ ವರ್ಗ (GM) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ
2ಎ, 2ಬಿ, 3ಎ, 3ಬಿ ,ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ
SC/ST/ ಪ್ರ-1 ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ

ಅರ್ಜಿ ಶುಲ್ಕ :
ಸಾಮಾನ್ಯ ವರ್ಗ 2ಎ, 2ಬಿ, 3ಎ, 3ಬಿ, ಗೆ ಸೇರಿದ ಅಭ್ಯರ್ಥಿಗಳಿಗೆ : 1500 ರೂ
SC/ST ,ಪ್ರವರ್ಗ- 1 ಮತ್ತು ಅಂಗವಿಕಲ ಹಾಗೂ ಸೈನಿಕ ಅಭ್ಯರ್ಥಿಗಳಿಗೆ : 750 ರೂ

Bangalore DCC BANK Recruitment 2023 ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ
: 30-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28-02-2023

ಪ್ರಮುಖ ಲಿಂಕ್‌ಗಳು:
ಅಧಿಸೂಚನೆ
Download
ಆನ್‌ಲೈನ್ ಅರ್ಜಿ ಲಿಂಕ್:‌ Apply Online
ಅಧಿಕೃತ ವೆಬ್‌ಸೈಟ್:‌ bengalurudccbank.com

Telegram Group Join Now
WhatsApp Group Join Now

7 thoughts on “DCC ಬ್ಯಾಂಕ್ ನೇಮಕಾತಿ 2023 ಆನ್‌ಲೈನ್‌ ಅರ್ಜಿ ಸಲ್ಲಿಸಿ | Bangalore DCC BANK Recruitment 2023 Apply Online”

Leave a Comment