SDA FDA ನೇಮಕಾತಿ 2023 ಇಂದೇ ಅರ್ಜಿ ಸಲ್ಲಿಸಿ | KSRTC Credit Co-Op Society Recruitment 2023

Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

KSRTC Credit Co-Op Society Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತ
ಒಟ್ಟು ಹುದ್ದೆಗಳು:  39 ಹುದ್ದೆಗಳು
ವೇತನ ಶ್ರೇಣಿ: 18,600 ರಿಂದ 62,600 ರೂ.
ಅರ್ಜಿ ಸಲ್ಲಿಕೆ ಆರಂಭ: 28-01-2023

ಜಿಲ್ಲಾ ನ್ಯಾಯಾಲಯ ನೇಮಕಾತಿ 2023 ಅಧಿಸೂಚನೆ

SHIMUL ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

DCC ಬ್ಯಾಂಕ್ ನೇಮಕಾತಿ 2023 ಆನ್‌ಲೈನ್‌ ಅರ್ಜಿ ಸಲ್ಲಿಸಿ 

RBKMUL ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

KSRTC Credit Co-Op Society Recruitment 2023 ಶೈಕ್ಷಣಿಕ ಅರ್ಹತೆ:

ಸಿಬ್ಬಂದಿ ಮೇಲ್ವಿಚಾರಕರು:
ರಾಜ್ಯದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನವನ್ನು ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರತಕ್ಕದ್ದು.

ಲೆಕ್ಕಪತ್ರ ಮೇಲ್ವಿಚಾರಕರು:
ಕರ್ನಾಟಕ ರಾಜ್ಯದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಕಂಪ್ಯೂಟರ್ ಆಪರೇಷನ್ ಮತ್ತು ಆಪ್ಲಿಕೇಷನ್ ಜ್ಞಾನದ ಜೊತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರವನ್ನು ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರತಕ್ಕದ್ದು,

ಪ್ರಥಮ ದರ್ಜೆ ಸಹಾಯಕರು:
ರಾಜ್ಯದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನವನ್ನು ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರತಕ್ಕದ್ದು.

ದ್ವಿತೀಯ ದರ್ಜೆ ಸಹಾಯಕರು:
ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತೀಣರಾಗಿರಬೇಕು. ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನವನ್ನು ಹೊಂದಿರಬೇಕು. ಕನ್ನಡ ಓದಲು ಬರೆಯಲು ಬರತಕ್ಕದ್ದು

ಕಛೇರಿ ಸಹಾಯಕರು:
ಎಸ್‌.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ/ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಓದಿರಬೇಕು.

KSRTC Credit Co-Op Society Recruitment 2023 ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಸಿಬ್ಬಂದಿ ಮೇಲ್ವಿಚಾರಕರು2
ಲೆಕ್ಕಪತ್ರ ಮೇಲ್ವಿಚಾರಕರ1
ಪ್ರಥಮ ದರ್ಜೆ ಸಹಾಯಕರು7
ದ್ವಿತೀಯ ದರ್ಜೆ ಸಹಾಯಕರು18
ಕಛೇರಿ ಸಹಾಯಕರು11


ವೇತನ ಶ್ರೇಣಿ:
ಸಿಬ್ಬಂದಿ ಮೇಲ್ವಿಚಾರಕರು
– 33,450 ರಿಂದ 62,600 ರೂ.
ಲೆಕ್ಕಪತ್ರ ಮೇಲ್ವಿಚಾರಕರ – 33,450 ರಿಂದ 62,600 ರೂ.
ಪ್ರಥಮ ದರ್ಜೆ ಸಹಾಯಕರು – 27,650 ರಿಂದ 52,650 ರೂ.
ದ್ವಿತೀಯ ದರ್ಜೆ ಸಹಾಯಕರು – 21,400 ರಿಂದ 42,000 ರೂ.
ಕಛೇರಿ ಸಹಾಯಕರು – 18,600 ರಿಂದ 32,000 ರೂ.

ವಯೋಮಿತಿ:
ಸಾಮಾನ್ಯ ವರ್ಗ (GM) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ
SC/ST/ ಪ್ರ-1 ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ

ಅರ್ಜಿ ಶುಲ್ಕ :
ಅರ್ಜಿ ಶುಲ್ಕ – 500

KSRTC Credit Co-Op Society Recruitment 2023 ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಪ್ರಾರಂಭ:
 28-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-02-2023

10 ನೇ ತರಗತಿ ಪಾಸಾಗಿದ್ದೀರಾ..? ತಡ ಮಾಡದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

KSRTC Credit Co-Op Society Recruitment 2023 ನಿಬಂಧನೆಗಳು:

  1. ಸಿಬ್ಬಂದಿ ಮೇಲ್ವಿಚಾರಕ ಹುದ್ದೆ, ಲೆಕ್ಕಪತ್ರ ಮೇಲ್ವಿಚಾರಕ ಹುದ್ದೆ ಮತ್ತು ಪ್ರಥಮ ದರ್ಜೆಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2+3 ಶೈಕ್ಷಣಿಕ ಪದ್ಧತಿಯಲ್ಲಿ ಅಥವಾ ತತ್ಸಮಾನ ಪದ್ದತಿಯಲ್ಲಿ ತೇರ್ಗಡೆ ಹೊಂದಿ ಪದವಿ ಪಡೆದಿರಬೇಕು.
  2. ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ಶೈಕ್ಷಣಿಕ | ಪದ್ಧತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರತಕ್ಕದ್ದು.
  3. ಕಛೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ವರ್ಷಗಳ ಶೈಕ್ಷಣಿಕ ಪದ್ಧತಿಯಲ್ಲಿ ಎಸ್‌.ಎಸ್‌.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
  4. ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
  5. ಅಭ್ಯರ್ಥಿಗಳ ಆಯ್ಕೆಯು ಪಾರದರ್ಶಕವಾಗಿದ್ದು, ನೇಮಕಾತಿ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
  6. ಅರ್ಹ ಅಭ್ಯರ್ಥಿಗಳು ಸಂಘವು ನಿಗಧಿಪಡಿಸಿರುವ ಅರ್ಜಿ ನಮೂನೆಯನ್ನು ಸಂಘದ ಪ್ರಧಾನ ಕಛೇರಿ, ಶಾಂತಿನಗರ, ಕೆ.ಹೆಚ್.ರಸ್ತೆ, ಬೆಂಗಳೂರು-27, ಇಲ್ಲಿ ದಿನಾಂಕ: 28/01/2023 ರಿಂದ ಕೆಲಸದ ವೇಳೆಯಲ್ಲಿ ಅರ್ಜಿ ಶುಲ್ಕ ರೂ.500/- ಗಳನ್ನು ಖುದ್ದು ನಗದಾಗಿ ಪಾವತಿಸಿ, ಅರ್ಜಿಗಳನ್ನು ಪಡೆದು ನಿಗಧಿತ ನಮೂನೆಯಲ್ಲಿ, ದಿನಾಂಕ: 7/02/2023 ರ ಒಳಗೆ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಖುದ್ದು ಅರ್ಜಿಗಳನ್ನು ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು.
  7. ನಿಗಧಿಪಡಿಸಿರುವ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೇ ವಯೋಮಿತಿ ಮೀರಿದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  8. ವಿದ್ಯಾರ್ಹತೆ ಮತ್ತು ಮಿಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿರತಕ್ಕದ್ದು.

ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್

Telegram Group Join Now
WhatsApp Group Join Now