ಲೇಬರ್‌ ಕಾರ್ಡ್‌: ನೋಂದಣಿ ಪ್ರಕ್ರಿಯೆ ಆರಂಭ | Labour Card Karnataka Application 2024 Started

ಎಲ್ಲರಿಗೂ ನಮಸ್ಕಾರ, ನೀವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾ..? ಸರ್ಕಾರದಿಂದ ಇಲ್ಲಿದೆ ನಿಮಗೆ ಗುಡ್‌ ನ್ಯೂಸ್.‌ ಕಾರ್ಮಿಕ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿರುತ್ತದೆ. ಅವುಗಳನ್ನು ಪಡೆಯಲು ಕಾರ್ಮಿಕರು ನೋಂದಣಿ (Labour Card Karnataka) ಕಡ್ಡಾಯವಾಗಿರುತ್ತದೆ.

ಕರ್ನಾಟಕ ಸರ್ಕಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಅದಕ್ಕಾಗಿ ಕಡ್ಡಾಯವಾಗಿ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

Labour Card Karnataka Schemes:

ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಅರ್ಹ ಫಲಾನುಭವಿಗಳು ಈ ಕೇಳಕಂಡ ಯೋಜನೆಗಳ ಸೌಲಭ್ಯ ಪಡೆಯಬಹುದು.

  • ಅಪಘಾತ ಪರಿಹಾರ
  • ಪ್ರಮುಖ ವೃದ್ಯಕೀಯ ವೆಚ್ಚ ಸಹಾಯಧನ
  • ತಾಯಿ ಮಗು ಸಹಾಯಹಸ್ತಾ
  • ದುರ್ಬಲತೆ ಪಿಂಚಣಿ ಮುಂದುವರಿಕೆ
  • ಪಿಂಚಣಿ ಮುಂದುವರಿಕೆ
  • ಹೆರಿಗ ಸೌಲಭ್ಯ
  • ದುರ್ಬಲತೆ ಪಿಂಚಣಿ ಸಾಲಭ್ಯ
  • ಶೈಕ್ಷಣಿಕ ಸಹಾಯಧನ
  • ಅಂತ್ಯಕ್ರಿಯೆ ವೆಚ್ಚ
  • ಮದುವೆ ಸಹಾಯಧನ
  • ವೈದ್ಯಕೀಯ ಸಹಾಯಧನ
  • ಪಿಂಚಣಿ ಸೌಲಭ್ಯ
  • ಶ್ರಮಸಾಮರ್ಥ್ಯ ಟೂಲ್ ಕಿಟ್
  • ಉಚತ ಸಾರಿಗೆ ಬಸ್‌ ಪಾಸ್‌ ಸೌಲಭ್ಯ

Labour Card Karnataka ಅರ್ಹತೆ: ನೋಂದಣಿ ಪೂರ್ವದಲ್ಲಿ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.

Labour Card Karnataka ಬೇಕಾಗುವ ದಾಖಲೆಗಳು:

  • 90 ದಿನಗಳ ಉದ್ಯೋಗ ದೃಢೀಕರಣ ಪತ್ರ,
  • ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ,
  • ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ,
  • ಅರ್ಜಿದಾರರ ಆಧಾರ್ ಕಾರ್ಡ್ʼಗೆ ಲಿಂಕ್‌ ಇರುವ ದೂರವಾಣಿ ಸಂಖ್ಯೆ

ವಯೋಮಿತಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ವಯೋಮಿತಿಯು 18 ರಿಂದ 60 ವರ್ಷದೊಳಗಿರಬೇಕು.

ನೋಂದಣಿ ಅಭಿಯಾನ:

ಬೆಂಗಳೂರು ನಗರದಲ್ಲಿ ಸ್ಥಳದಲ್ಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು 30 ನೇ ಡಿಸೆಂಬರ್ 2023 ರಿಂದ 31 ನೇ ಮಾರ್ಚ್‌ 2024 ರವರೆಗೆ ನಡೆಯಲಿದೆ ಎಂದು ಕರ್ಮಿಕ ಇಲಾಖೆಯು ತಿಳಿಸಿದೆ.

ಇನ್ನುಳಿದ ಭಾಗದ ಜನರು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು.

ನೋಂದಣಿ ಮಾಡುವ ಕಛೇರಿಗಳು: ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರ ಕಛೇರಿ

ಸೂಚನೆ: ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ.

ಪ್ರಮುಖ ಲಿಂಕ್‌ಗಳು:
ಇಲಾಖೆಯ ವೆಬ್‌ಸೈಟ್:‌ karbwwb.karnataka.gov.in

ಇತರೆ ಮಾಹಿತಿಗಳನ್ನು ಓದಿ

e-Shram Card ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

Labour Card Scholarship 2023 Apply Online

ಕಾರ್ಮಿಕ ಕಾರ್ಡ್‌ ಇದ್ದವರಿಗೆ ಗುಡ್‌ ನ್ಯೂಸ್‌, ಒಂದು ಕಾರ್ಡ್‌ ಹಲವು ಪ್ರಯೋಜನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment