ಗೃಹಲಕ್ಷ್ಮೀ ಯೋಜನೆ ಅರ್ಜಿಯನ್ನು ಹೀಗೆ ಸಲ್ಲಿಸಿ, 2000 ರೂ. ಪಡೆಯಿರಿ | Gruhalakshmi Yojana Application For 2000 Rupees

Telegram Group Join Now
WhatsApp Group Join Now

ನೀವು ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು (Gruhalakshmi Yojana Application) ಪ್ರಯತ್ನ ಮಾಡುತ್ತಿದ್ದಿರಾ? ಇನ್ನೂವರೆಗೂ ಅರ್ಜಿ ಸಲ್ಲಿಸಿಲ್ಲವೇ? ಚಿಂತೆ ಬಿಡಿ ಇಲ್ಲದೆ ನಿಮಗಾಗಿ ಗುಡ್‌ ನ್ಯೂಸ್.‌ ಈ ಹಿಂದೆ ಸರ್ಕಾರ ಸರ್ವರ್‌ ಸಮಸ್ಯೆ ಹಾಗೂ ನುಕುನುಗ್ಗಲು ಆಗದಿರಲಿ ಎಂದು ಒಂದು ದಿನಕ್ಕೆ ಲಿಮಿಟೆಡ್ ಅರ್ಜಿ ಹಾಗೂ ‌SMS ಬಂದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇತ್ತು.

ಯಾವ ದಿನಾಂಕ, ಸಮಯ ಹಾಗೂ ಸ್ಥಳ ನಿಗದಿ ಮಾಡಲಾಗಿತ್ತು. ಆದರೆ ಇದೀಗ ಸರ್ಕಾರ ನಿಮಯ ಬದಲಿಸಿದ್ದು, ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರೀಯೆಯನ್ನು ಸರಳಗೊಳಿಸಲಾಗಿದೆ.

Gruhalakshmi Yojana Application

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯ ನೋಂದಣಿ ಇದೀಗ ಮತ್ತಷ್ಟು ಸರಳ ಮಾಡಲಾಗಿದ್ದು, ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ (ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌, ಬಾಪೂಜಿ ಕೇಂದ್ರ) ಭೇಟಿ ನೀಡಿ ಅರ್ಜಿ (Gruhalakshmi Yojana Application) ಸಲ್ಲಿಸಬಹುದಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದ್ದಾರೆ.

ಇಂದು ಟ್ವಿಟ್‌ ಮಾಡಿರುವ ಅವರು, ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ನಂಬರ್‌ಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಇದೀಗ ಎಸ್‌ಎಂಎಸ್ ಅವಲಂಭಿಸದೇ ಅಗತ್ಯವಾದ ದಾಖಲಾತಿಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು.

ಗೃಹ ಲಕ್ಷ್ಮೀ ಯೋಜನೆ (Gruha Lakshmi Scheme) ಗೆ ಚಾಲನೆ ನೀಡಿ 7 ದಿನಗಳಲ್ಲೇ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿರುವುದು ಖುಷಿ ತಂದಿದೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರೆ ಅಂತಹವರ ವಿರುದ್ಧವೂ ಸಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಎಚ್ಚರಿಕೆ ನೀಡಿದ್ದಾರೆ.

ಗೃಹಲಕ್ಷ್ಮೀ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಮಂಜೂರಾತಿ ಪತ್ರ (Gruhalakshmi Sanction Letter) ವನ್ನು ನೀಡುತ್ತಾರೆ.

ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು. ಹಾಗೂ ಕನ್ನಡಸಿರಿ.in ಗೆ ಭೇಟಿ ನೀಡಿ ಹೊಸ ಹೊಸ ಮಾಹಿತಿಯನ್ನು ಪಡೆಯಬಹುದು.

ಸರ್ಕಾರ ಇತರೆ ಯೋಜನೆಗಳ ಮಾಹಿತಿ

“ಗೃಹ ಲಕ್ಷ್ಮೀ” ಯೋಜನೆ 2023 ಅರ್ಜಿ ಸಲ್ಲಿಕೆ ಹೇಗೆ?

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂತಾ? ಚೆಕ್‌ ಮಾಡಿ

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

Telegram Group Join Now
WhatsApp Group Join Now

Leave a Comment