“ಗೃಹ ಲಕ್ಷ್ಮೀ” ಯೋಜನೆ 2023 ಅರ್ಜಿ ಆರಂಭ | Karnataka Gruha Lakshmi Scheme 2023 Application

Telegram Group Join Now
WhatsApp Group Join Now

ನಮಸ್ಕಾರ… ನೀವು ಕೂಡ “ಗೃಹ ಲಕ್ಷ್ಮೀ” ಯೋಜನೆಯ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರಾ…? ಹಾಗಿದ್ದರೇ ನೀವು ಚಿಂತೆ ಮಾಡಬೇಡಿ. ಈ ಲೇಖನದಲ್ಲಿ ಗೃಹಲಕ್ಷ್ಮೀ ಯೋಜನೆಯ (Karnataka Gruha Lakshmi Scheme 2023) ಆನ್‌ಲೈನ್ ಅರ್ಜಿ ಯಾವಾಗ ಆರಂಭವಾಗುತ್ತದೆ, ಅರ್ಜಿ ಯಾವ ರೀತಿ ಭರ್ತಿ ಮಾಡಬೇಕು, ಯಾವ ಯಾವ ದಾಖಲೆಗಳು ಬೇಕು ಮತ್ತು ಇತರೆ ಮಾಹಿತಿಗಳನ್ನು ನೀಡಲಾಗುತ್ತದೆ. ಆದ್ದರಿಂದ ಈ ಲೇಖನವನ್ನು ಪೂರ್ತಿ ಓದಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ “ಗೃಹ ಲಕ್ಷ್ಮೀ” (Gruhalakshmi) ಯೋಜನೆಯನ್ನು ಜಾರಿಗೆ ತರಲು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದೆ, 19-07-2023 ರಿಂದ ನೋಂದಣಿ ಪ್ರಕ್ರೀಯೆ (Gruhalakshmi Application) ಪ್ರಾರಂಭವಾಗಿದೆ.

SMS ಬಂದಿಲ್ಲವೇ ಚಿಂತೆ ಬಿಡಿ, ಹೀಗೆ ಅರ್ಜಿ ಸಲ್ಲಿಸಿ

ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸುವ ಮುನ್ನ ಈ ವಿಷಯ ಗೊತ್ತಿರಲಿ

ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ ನೋಡಿ

ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರುಪ್‌ Join ಆಗಿ ಹಾಗೂ Subscribe ಮಾಡಿಕೊಳ್ಳಿ.

Karnataka Gruha Lakshmi Scheme 2023 ಸಂಕ್ಷಿಪ್ತ ವಿವರ:

ಯೋಜನೆಯ ಹೆಸರು “ಗೃಹ ಲಕ್ಷ್ಮೀ” ಯೋಜನೆಯ (Gruha Lakshmi Scheme)
ಯೋಜನೆ ಘೋಷಿಸಿದ ಪಕ್ಷಕಾಂಗ್ರೇಸ್
ಯೋಜನೆಯ ಉದ್ದೇಶರಾಜ್ಯದ ಮಹಿಳೆಯರ ಸಬಲೀಕರಣ
ಯಾರು ಅರ್ಹರುಕುಟುಂಬದ ಯಜಮಾನಿ
ಸಹಾಯಧನಮಾಸಿಕ 2,000 ರೂ.ಗಳು
ಅರ್ಜಿ ಸಲ್ಲಿಕೆ ಆರಂಭಜುಲೈ 19, 2023

“ಗೃಹ ಲಕ್ಷ್ಮೀ” ಯೋಜನೆಯ ಉದ್ದೇಶಗಳು:

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಅದರಂತೆ ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಬಹು ಪ್ರಮುಖವಾಗಿರುತ್ತದೆ. ಮನೆ ಯಜಮಾನಿಯು ಆರ್ಥಿಕವಾಗಿ ಸಬಲೀಕರಣವಾದರೆ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000 ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ” ಯನ್ನು ಜಾರಿಗೆ ತರಲಾಗಿದೆ.

“ಗೃಹ ಲಕ್ಷ್ಮೀ” ಯೋಜನೆಗೆ ಯಾರು ಅರ್ಹರು?

  • ಕರ್ನಾಟಕ ಆಹಾರ ಇಲಾಖೆ ವಿತರಿಸುವ ಅಂತ್ಯೋದಯ (AAP), ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
  • ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆ ಅನ್ವಯಿಸಲಾಗುತ್ತದೆ.

“ಗೃಹಲಕ್ಷ್ಮಿ ಯೋಜನೆ”ಗೆ ಯಾರು ಅರ್ಹರಾಗಿರುವುದಿಲ್ಲ.?

  • ಈ ಮಾನದಂಡಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
  • ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ (Income Tax Returns) ಪಾವತಿದಾರರಾಗಿದ್ದಲ್ಲಿ.
  • ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ GST ರಿಟರ್ನ್ಸ್ (GST Returns) ಸಲ್ಲಿಸುವವರಾಗಿದ್ದಲ್ಲಿ .

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

  • ‌ರೇಷನ್‌ ಕಾರ್ಡ್
  • ಆಧಾರ ಕಾರ್ಡ್‌
  • ಬ್ಯಾಂಕ್‌ ಖಾತೆ ವಿವರ
  • ವೋಟರ್‌ ಐಡಿ
  • ಫಲಾನುಭವಿಯ ಭಾವಚಿತ್ರ

ಅಗತ್ಯವಿರುವ ವಿವರಗಳು

  • ರೇಷನ್‌ ಕಾರ್ಡ್ ಸಂಖ್ಯೆ
  • ಆಧಾರ ಸಂಖ್ಯೆ
  • ಮೊಬೈಲ್‌ ನಂಬರ್
  • ಬ್ಯಾಂಕ್‌ ಖಾತೆ ಸಂಖ್ಯೆ
  • IFSC Code
  • Aadhaar Seeded Bank Name
  • ಪತಿಯ ಆಧಾರ ಸಂಖ್ಯೆ
  • ಪತಿಯ ಮೊಬೈಲ್‌ ಸಂಖ್ಯೆ

ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಈ ಯೋಜನೆಯ ಸೌಲಭ್ಯ ಪಡೆಯಲು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ಸ್ವಯಂಸೇವಕ “ಪ್ರಜಾಪ್ರತಿನಿಧಿಗಳು” ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ ಎಂದು ಸರ್ಕಾರ ತಿಳಿಸಿದೆ.

ಮುಖ್ಯಾಂಶಗಳು

  • ಪಡಿತರ ಕಾರ್ಡ್ (Ration Card) ಹೊಂದಿರುವ ಕುಟುಂಬದ ಯಜಮಾನಿ ಖಾತೆಗೆ ಹಣ ಜಮೆ,
  • ಗ್ರಾಮ ಓನ್ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರದಲ್ಲಿ ಉಚಿತ ನೋಂದಣಿ
  • ಅಧಿಕೃತ “ಪ್ರಜಾ ಪ್ರತಿನಿಧಿ” ಸ್ವಯಂ ಸೇವಕರು ಕೂಡ ನಿಮ್ಮಮನೆ ಬಾಗಿಲಲ್ಲೇ ಉಚಿತವಾಗಿ ನೋಂದಣಿ ಮಾಡುತ್ತಾರೆ.
  • ನೋಂದಣಿಗೆ ಬ್ಯಾಂಕ್‌ ಪಾಸ್‌ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ ಯಜಮಾನಿಯ ಮತ್ತು ಪತಿಯ ಆಧಾರ್ ಕಾರ್ಡ್‌ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.

“ಗೃಹ ಲಕ್ಷ್ಮೀ” ಯೋಜನೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?

ಬಹುದಿನಗಳಿಂದ “ಗೃಹ ಲಕ್ಷ್ಮೀ” (Gruha Lakshmi) ಯೋಜನೆಯ ಅರ್ಜಿ ಸಲ್ಲಿಸಲು ಕಾಯುತ್ತಿರುವವರಿಗೆ ಶುಭ ಸುದ್ದಿ. ಈಗಾಗಲೇ ಗೃಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಸಿದ್ದೀರಿ. ಈಗ ಈ ಯೋಜನೆಯ ಆನ್‌ಲೈನ್‌ ಅರ್ಜಿಯು ಆರಂಭವಾಗಲಿದೆ. ಅರ್ಜಿಯನ್ನು ಹೇಗೆ ಭರ್ತಿ ಮಾಡುವುದು ಎಂಬುದನ್ನು ಈ ಕೇಳಗಿನ ಸುಲಭ ವಿಧಾನಗಳ ಮೂಲಕ ತಿಳಿಸಲಾಗಿದೆ. ಅರ್ಹರು ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆದು ಅರ್ಜಿ ಭರ್ತಿ ಮಾಡಿ.

How to Register for Gruha Lakshmi scheme in Karnataka?

ಈ ಸುಲಭ ವಿಧಾನಗಳನ್ನು ಅನುಸರಿಸಿ ಹಾಗೂ ಗೃಹಲಕ್ಷ್ಮೀ (Gruhalakshmi) ಯೋಜನೆಯ ಅರ್ಜಿ ಸಲ್ಲಿಸಿ (ಆರ್ಜಿ ಆರಂಭವಾದ ನಂತರ). “ಗೃಹ ಲಕ್ಷ್ಮೀ” ಆನ್‌ಲೈನ್‌ ಅರ್ಜಿ ಸಲ್ಲಿಕೆ ಮಾಡಲು ಎರಡು ವಿಧಾನಗಳು ಇರಬಹುದು.

Gruha Lakshmi Scheme Apply Online ಮೊದಲ ವಿಧಾನ

ಮೊದಲನೇ ವಿಧಾನದ ಮೂಲಕ ಅರ್ಜಿ ಸಲ್ಲಿಸುವ ಮಾಹಿತಿ ಈ ಕೇಳಗಿನಂತಿದೆ.

  • Step-1: ಮೊದಲಿಗೆ ಕೇಳಗೆ ನೀಡಿರುವ ಸೇವಾ ಸಿಂಧು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • Step-2: ಸೇವಾ ಸಿಂಧು ಅಕೌಂಟ್‌ ಲಾಗ್‌ಇನ್‌ ಮಾಡಿ.
  • Step-3: ಅಲ್ಲಿ Apply For Services ಅಂತ ಇರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ View All Available Services ಅಂತ ಕಾಣುತ್ತದೆ ಅದನ್ನು ಸೇಲೆಕ್ಟ್‌ ಮಾಡಿ.
  • Step-4: ನಂತರ GruhaLakshmi Yojana Pre Approved ಎಂದಿರುತ್ತದೆ. ನೀವು ಅದರ ಮೇಲೆ ಕ್ಲಿಕ್‌ ಮಾಡಿ.
  • Step-5: ಮತ್ತೊಂದು ಪುಟದಲ್ಲಿ Gruhalakshmi Application ಓಪನ್‌ ಆಗುತ್ತದೆ. ಅಲ್ಲಿ ಭರ್ತಿ ಮಾಡಬೇಕಾದ ಅಗತ್ಯ ಮಾಹಿತಿ ನಿಮ್ಮಲ್ಲಿ ಇರಲಿ.
  • Step-6: ಮೊದಲ ಭಾಗದಲ್ಲಿ “ವೈಯಕ್ತಿಕ ವಿವರಗಳು” ಎಂದಿರುತ್ತದೆ. ಅಲ್ಲಿ ಪಡಿತರ ಚೀಟಿ ಸಂಖ್ಯೆ, ಅರ್ಜಿದಾರರ ಹೆಸರು, ವರ್ಗ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಲ್ಪಸಂಖ್ಯಾತ, ಇತರೆ) ಎಂದಿರುತ್ತದೆ. ನಿಮ್ಮ Category ಯನ್ನು ಆಯ್ಕೆ ಮಾಡಿ. ಹಾಗೂ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ.
Gruhalakshmi Scheme Apply Online
  • Step-7: ಎರಡನೇ ಭಾಗದಲ್ಲಿ “ಬ್ಯಾಂಕ್‌ ಖಾತೆಯ ವಿವರಗಳು” ಎಂದಿರುತ್ತದೆ. ಅಲ್ಲಿ ಎರಡು ಆಯ್ಕೆಗಳಿವೆ ಮೊದಲನೇಯದನ್ನು ಆಯ್ಕೆ ಮಾಡಿದರೆ ಫಲಾನುಭವಿಯ ಆಧಾರ್‌ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ದುಡ್ಡ ಜಮಾ ಆಗುತ್ತದೆ. ಎರಡನೇ ಆಯ್ಕೆಯಲ್ಲಿ ಫಲಾನುಭವಿಯ ಬೇರೆ ಬ್ಯಾಂಕ್‌ ಖಾತೆಗೆ ಹಣ ಪಾವತಿಸುತ್ತಾರೆ. ಬೇರೆ ಬ್ಯಾಂಕ್‌ ಎಂಬ ಆಯ್ಕೆ ಮಾಡಿದರೆ. IFSC ಕೋಡ್‌, ಬ್ಯಾಂಕ್‌ ಖಾತೆಯ ಸಂಖ್ಯೆ, ಬ್ಯಾಂಕ್‌ ಹೆಸರು, ಶಾಖೆಯ ಹೆಸರನ್ನು ಅಲ್ಲಿ ಭರ್ತಿ ಮಾಡಿ.
Karnataka Gruha Lakshmi Scheme 2023
  • Step-8: ಮೂರನೇ ಭಾಗದಲ್ಲಿ “ಸ್ವಯಂ ಘೋಷಣೆ” ಎಂದುರುತ್ತದೆ. ಅಲ್ಲಿ ಹೌದು ಅಥವಾ ಇಲ್ಲ ಎಂಬ ಆಯ್ಕೆಗಳಿವೆ.
    • ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರಾಗಿತ್ತೇವೆ. ಹೌದು ಅಥವಾ ಇಲ್ಲ
    • ನಾನು ಮತ್ತು ನನ್ನ ಪತಿ ಜಿಎಸ್ ಟಿ ಫೈಲಿಂಗ್ ಸಲ್ಲಿಸಿರುತ್ತೇವೆ. ಹೌದು ಅಥವಾ ಇಲ್ಲ
  • ನಾನು ಒದಗಿಸಿರುವ ಎಲ್ಲಾ ವಿವರಗಳು ನನ್ನ ತಿಳಿವಳಿಕೆಯಂತೆ ಸಮರ್ಪಕವಾಗಿವೆ. ನನ್ನ ಕುಟುಂಬ/ಮನೆಯಲ್ಲಿ ನಾನೇ ಮನೆ ಒಡತಿಯಾಗಿರುತ್ತೇನೆ. ನಾನು ಒದಗಿಸಿರುವ ಮಾಹಿತಿಯು ಯಾವುದೇ ಕಾಲದಲ್ಲಿ ಸುಳ್ಳೆಂದು ಕಂಡು ಬಂದರೆ ಕಾನೂನಿನ ಕ್ರಮಕ್ಕೆ ಒಳಗಾಗಲು ಹಾಗೂ ನಾನು ಪಡೆದ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧಳಾಗಿರುತ್ತೇನೆಂದು ಈ ಮೂಲಕ ದೃಢೀಕರಿಸುತ್ತೇನೆ. (ಇದನ್ನು ಓದಿ ಅರ್ಥ ಮಾಡಿಕೊಂಡು) ✅ I Agree ಎನ್ನುವುದನ್ನು Select ಮಾಡಿ.
Karnataka Gruha Lakshmi Scheme Apply Online
  • Step-9: “ಆಧಾರ ದೃಢೀಕರಣ” ವಿಭಾಗ: ಆಧಾರ ದೃಢೀಕರಣಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ ಎಂದಿರುವ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಧಾರ್‌ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. ಓಟಿಪಿಯನ್ನು ಅಲ್ಲಿ ನಮೂದಿಸಿ Verify ಮಾಡಿ.
Karnataka Gruha Lakshmi Scheme 2023
  • Step-10: Word Verification: ಆರು ಅಂಕಿಗಳ ನಂಬರ್‌ನ್ನು ಖಾಲಿ ಇರುವ ಬಾಕ್ಸ್‌ನಲ್ಲಿ ಭರ್ತಿ ಮಾಡಿ. ನಂತರ ಹಸಿರು ಬಣ್ಣದ Submit ಮೇಲೆ ಕ್ಲಿಕ್‌ ಮಾಡಿ. ಭರ್ತಿ ಮಾಡಿರುವ ಎಲ್ಲ ಮಾಹಿತಿಗಳು ಸರಿ ಇವೆಯೇ ಎಂಬುದನ್ನು ಪರಿಶೀಲಿಸಿ ಅಂತಿಮ ಹಂತದ Submit ಬಟನ್‌ ಮೇಲೆ ಕ್ಲಿಕ್‌ ಮಾಡಿ. ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ. ಅಲ್ಲಿ ಸ್ವೀಕೃತಿ ಪ್ರತಿ ಸಿಗುತ್ತದೆ ಅದನ್ನು ScreenShot ತೆಗೆದುಕೊಳ್ಳಿ ಅಥವಾ PDF ಫೈಲ್‌ ಸೇವ್‌ ಮಾಡಿಕೊಳ್ಳಿ.
Gruha Lakshmi Scheme 2023 Application Submission

Apply Online Karnataka Gruha Lakshmi Scheme 2023 ಎರಡನೇ ವಿಧಾನ

  • Step-1: ಮೊದಲಿಗೆ ಕೇಳಗೆ ನೀಡಿರುವ ಸೇವಾ ಸಿಂಧು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • Step-2: ಸೇವಾ ಸಿಂಧು ಅಕೌಂಟ್‌ ಲಾಗ್‌ಇನ್‌ ಮಾಡಿ.
  • Step-3: ಅಲ್ಲಿ Apply For Services ಅಂತ ಇರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ View All Available Services ಅಂತ ಕಾಣುತ್ತದೆ ಅದನ್ನು ಸೇಲೆಕ್ಟ್‌ ಮಾಡಿ.
  • Step-4: ನಂತರ GruhaLakshmi Yojana ಅಂತಿರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.
  • Step-5: ಹೊಸ ಪುಟದಲ್ಲಿ Gruhalakshmi Online Application ಕಾಣುತ್ತದೆ.
  • Step-6: “ಆಧಾರ ದೃಢೀಕರಣ” ಎಂದಿರುತ್ತದೆ. ಆಧಾರ ಸಂಖ್ಯೆ ನಮೂದಿಸಿ, ಆಧಾರ ದೃಢೀಕರಣಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಧಾರ್‌ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. ಓಟಿಪಿ ಎಂಟರ್‌ ಮಾಡಿ.
Gruha lakshmi Application 2023 Apply
  • Step-7: “ಮನೆ ಯಜಮಾನಿಯ ವಿವರಗಳು” ಎಂದಿರುತ್ತದೆ. ಅಲ್ಲಿ ಅರ್ಜಿದಾರರ ಹೆಸರು, ಆಧಾರ ಸಂಖ್ಯೆ, ಮೊಬೈಲ್‌ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಪಡಿತರ ಚೀಟಿ ವಿಧ (BPL, AAP, APL), ವರ್ಗ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಲ್ಪಸಂಖ್ಯಾತ, ಇತರೆ) ಎಂದಿರುತ್ತದೆ. ನಿಮ್ಮ Category ಯನ್ನು ಆಯ್ಕೆ ಮಾಡಿ, ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಿ, ಫಲಾನುಭವಿಯ ಭಾವಚಿತ್ರವನ್ನು ಅಪಲೋಡ್‌ ಮಾಡಿ. Aadhaar Seeded Bank Name (ನಿಮ್ಮ ಬ್ಯಾಂಕ್‌ ಅಟೌಂಟ್‌ಗೆ ಆಧಾರ ಲಿಂಕ್‌ ಇರುವ) ಎಂಬಲ್ಲಿ ಬ್ಯಾಂಕ್‌ ಹೆಸರು ನಮೂದಿಸಿ ಹಾಗೂ IFSC ಕೋಡ್‌ನ್ನು ಎಂಟರ್‌ ಮಾಡಿ.
Grah Laxmi Yojana Link
  • Step-8: ಕುಟುಂಬ ಸದಸ್ಯರ ವಿವರಗಳು ಎಂಬ ವಿಭಾಗದಲ್ಲಿ ಪಡಿತರ ಚೀಟಿಯಲ್ಲಿನ ಕುಟುಂಬ ಸದಸ್ಯರ ಪಟ್ಟಿಯಿಂದ ಯಜಮಾನಿಯ ಪತಿಯ ಹೆಸರನ್ನು ಆಯ್ಕೆ ಮಾಡಿ.
  • ಮನೆ ಯಜಮಾನಿಯ ಪತಿಯ ವಿವರ ಲಭ್ಯವಿಲ್ಲದಿದ್ದಲ್ಲಿ ಈ ಆಯ್ಕೆಗಳು
    • ಮೇಲೆ ತೋರಿಸಿರುವ ಪಟ್ಟಿಯಲ್ಲಿ ಯಜಮಾನರ ಹೆಸರನ್ನು ಸೇರಿಸಿ
    • ಅವಿವಾಹಿತೆ
    • ಬೇರ್ಪಡೆಯಾಗಿದ್ದಾರೆ.
    • ಮರಣ ಹೊಂದಿದ್ದಾರೆ.
  • ನಂತರ ಪತಿಯ ಆಧಾರ್ ಸಂಖ್ಯೆ, ಪತಿಯ ಹೆಸರು ಆಧಾರ್ ನಲ್ಲಿರುವಂತೆ, ಪತಿಯ ಮೊಬೈಲ್ ಸಂಖ್ಯೆ ಎಂಟರ್‌ ಮಾಡಿ.
  • Step-9: “ಘೋಷಣೆ”– ಹೌದು ಅಥವಾ ಇಲ್ಲ ಎಂಬ ಆಯ್ಕೆಗಳಿವೆ.
    • ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರಾಗಿತ್ತೇವೆ. ಹೌದು ಅಥವಾ ಇಲ್ಲ
    • ನಾನು ಮತ್ತು ನನ್ನ ಪತಿ ಜಿಎಸ್ ಟಿ ಫೈಲಿಂಗ್ ಮಾಡುತ್ತಿದ್ದೇವೆ. ಹೌದು ಅಥವಾ ಇಲ್ಲ
  • ನಾನು ಒದಗಿಸಿರುವ ಎಲ್ಲಾ ವಿವರಗಳು ನನ್ನ ತಿಳಿವಳಿಕೆಯಂತೆ ಸಮರ್ಪಕವಾಗಿವೆ. ನನ್ನ ಕುಟುಂಬ/ಮನೆಯಲ್ಲಿ ನಾನೇ ಮನೆ ಒಡತಿಯಾಗಿರುತ್ತೇನೆ. ನಾನು ಒದಗಿಸಿರುವ ಮಾಹಿತಿಯು ಯಾವುದೇ ಕಾಲದಲ್ಲಿ ಸುಳ್ಳೆಂದು ಕಂಡು ಬಂದರೆ ಕಾನೂನಿನ ಕ್ರಮಕ್ಕೆ ಒಳಗಾಗಲು ಹಾಗೂ ನಾನು ಪಡೆದ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧಳಾಗಿರುತ್ತೇನೆಂದು ಈ ಮೂಲಕ ದೃಢೀಕರಿಸುತ್ತೇನೆ. (ಇದನ್ನು ಓದಿ ಅರ್ಥ ಮಾಡಿಕೊಂಡು) ✅ I Agree ಎನ್ನುವುದನ್ನು Select ಮಾಡಿ.
  • Step-10: Word Verification: ಆರು ಅಂಕಿಗಳ ನಂಬರ್‌ನ್ನು ಬಾಕ್ಸ್‌ನಲ್ಲಿ ಎಂಟರ್ ಮಾಡಿ. ನಂತರ ಹಸಿರು ಬಣ್ಣದ Submit‌ ಬಟನ್ ಮೇಲೆ ಕ್ಲಿಕ್‌ ಮಾಡಿ. ಭರ್ತಿ ಮಾಡಿರುವ ಎಲ್ಲ ಮಾಹಿತಿಗಳು ಸರಿ ಇವೆಯೇ ಎಂಬುದನ್ನು ಪರಿಶೀಲಿಸಿ ಅಂತಿಮ ಹಂತದ Submit ಬಟನ್‌ ಮೇಲೆ ಕ್ಲಿಕ್‌ ಮಾಡಿ. ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ. ಅಲ್ಲಿ ಸ್ವೀಕೃತಿ ಪ್ರತಿ ಸಿಗುತ್ತದೆ ಅದನ್ನು ScreenShot ತೆಗೆದುಕೊಳ್ಳಿ ಅಥವಾ PDF ಫೈಲ್‌ ಸೇವ್‌ ಮಾಡಿಕೊಳ್ಳಿ.

ಗೃಹ ಲಕ್ಷ್ಮಿ ಯೋಜನೆಯ ಆನ್‌ಲೈನ್‌ ಅರ್ಜಿ ಇನ್ನು ಆರಂಭವಾಗಿಲ್ಲ. ಅರ್ಜಿ ಸಲ್ಲಿಕೆ ಪ್ರಕ್ರೀಯೆ ಆರಂಭವಾದ ತಕ್ಷಣ ಮಾಹಿತಿ ನೀಡಲಾಗುತ್ತದೆ. ಆದ್ದರಿಂದ ನೀವು ನಮ್ಮ ವಾಟ್ಸ್‌ಆಪ್‌ ಗ್ರುಪ್‌ Join ಆಗಿ ಹಾಗೂ Notification On ಮಾಡಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆ Online Application Link ಗಳು:
“ಗೃಹ ಲಕ್ಷ್ಮೀʼ” ಯೋಜನೆ:‌ sevasindhugs1.karnataka.gov.in
Gruhalakshmi Scheme Apply Online Link:‌ sevasindhugs1.karnataka.gov.in/gl-sp
ಗೃಹ ಲಕ್ಷ್ಮಿ ಯೋಜನೆ ಅರ್ಜಿ Online Link 1: Gruhalakshmi.karnataka.gov.in
ಗೃಹ ಲಕ್ಷ್ಮಿ ಯೋಜನೆ Online Link 2: sevasindhugs.karnataka.gov.in/Gruhalakshmi
ಸೇವಾ ಸಿಂಧು ವೆಬ್‌ಸೈಟ್:‌ sevasindhu.karnataka.gov.in
ಗೃಹಲಕ್ಷ್ಮಿ ಆನ್ಲೈನ್ ಅಪ್ಲಿಕೇಶನ್: sevasindhugs.karnataka.gov.in,

RC Number In Gruhalakshmi ಎಂದರೆ ಏನು?
ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವಾಗ RC Number ಎಂದಿರುತ್ತದೆ ಅದರ ಅರ್ಥ Ration Card Number ಎಂದು.

ಸರ್ಕಾರ ಇತರೆ ಯೋಜನೆಗಳು

ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸುವ ಮುನ್ನ ಈ ವಿಷಯ ಗೊತ್ತಿರಲಿ

ಗೃಹಲಕ್ಷ್ಮಿ ಯೋಜನೆ ಅರ್ಜಿ ಆರಂಭ ದಿನಾಂಕ ನಿಗದಿ

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂತಾ? ಚೆಕ್‌ ಮಾಡಿ

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

Telegram Group Join Now
WhatsApp Group Join Now

Leave a Comment