iQOO Z7 Pro 5G Price & Offer: ಬಲಿಷ್ಠ ಪ್ರೊಸೆಸರ್, ಬೊಂಬಾಟ್ ಬ್ಯಾಟರಿ, ಆಕರ್ಷಕ ಕ್ಯಾಮೆರಾ – 2,000 ರೂ. OFF?

Telegram Group Join Now
WhatsApp Group Join Now

ನಮಸ್ಕಾರ ಎಲ್ಲರಿಗೂ, ನೀವು ಹೊಸ ಸ್ಮಾರ್ಟ್​ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೇ.. iQOO Z7 Pro 5G ಸ್ಮಾರ್ಟ್​ಫೋನ್ ನಿಮಗೆ ಒಂದು ಉತ್ತಮ ಆಯ್ಕೆಯಾಗಲಿದೆ. ಭಾರತದಲ್ಲಿ ಭರ್ಜರಿ ಬೇಡಿಕೆಯಲ್ಲಿರುವ ಈ ಮೊಬೈಲ್‌ಗೆ ಉತ್ತಮ ಸ್ಪಂದನೆ ದೊರೆತಿದೆ. ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರುವ iQOO Z7 Pro 5G ಬೆಲೆ ಮತ್ತು ಇತರೆ ಮಾಹಿತಿಯನ್ನು ಈ ಕೇಳಗೆ ವಿವರಿಸಲಾಗಿದೆ.

iQOO Z7 Pro 5G ಮಾಹಿತಿ:

ಸ್ಮಾರ್ಟ್​ಫೋನ್ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ iQOO ಕಂಪನಿ. Z ಸಿರೀಜ್‌ನ ಹೊಸ ಮೊಬೈಲ್‌ ಲಾಂಚ್‌ ಮಾಡಿದೆ. ಭಾರತದಲ್ಲಿ ಬೇಡಿಕೆ ಹೆಚ್ಚಾದಂತೆ ಸ್ಮಾರ್ಟ್​ಫೋನ್‌ಗಳ ಬಿಡುಗಡೆ ಸಂಖ್ಯೆಯನ್ನು ಸಹ ಹೆಚ್ಚಿಸುತ್ತಿದೆ. 120 Hz ರಿಫ್ರೆಶ್ ರೇಟ್ 6.78-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 2400×1080 ಪಿಕ್ಸೆಲ್‌ಗಳ (FHD) ರೆಸಲ್ಯೂಶನ್ ನೀಡುತ್ತದೆ.

ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಬಲಿಷ್ಠ ಪ್ರೊಸೆಸರ್, ಬೊಂಬಾಟ್ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. iQOO Z7 Pro 5G ಮೊಬೈಲ್‌​ನಲ್ಲಿ 66W ವೇಗದ ಚಾರ್ಜಿಂಗ್ ನೊಂದಿಗೆ 4,600mAh ಬ್ಯಾಟರಿ ನೀಡಲಾಗಿದೆ.

iQOO Z7 Pro 5G ಫೀಚರ್ಸ್:

ಪ್ರೊಸೆಸರ್: 
ಈ ಮೊಬೈಲ್MediaTek Dimensity 7200 5G ಚಿಪ್‌ಸೆಟ್ ಹೊಂದಿದ್ದು, ARM Mali-G610 GPU ಅನ್ನು ಜೋಡಿಸಲಾಗಿದೆ.

ಕ್ಯಾಮೆರಾಗಳು: 
64MP Rear Camera ಮತ್ತು ಹಿಂಭಾಗದಲ್ಲಿ 2MP ಬೊಕೆ ಲೆನ್ಸ್ ಮತ್ತು 16MP Front Camera ನೀಡಲಾಗಿದೆ.

RAM ಮತ್ತು Storage: 
8GB RAM + 128GB ಮತ್ತು 8GB RAM + 256GB ಯ ಎರಡು ಆಯ್ಕೆಗಳನ್ನು ನೀಡಲಾಗಿದೆ.

Display: 
ಐಕ್ಯೂ Z7 ಪ್ರೊ 5G ಸ್ಮಾರ್ಟ್​ಫೋನ್ 3D Curved ಜೊತೆಗೆ 6.78 ಇಂಚಿನ FHD+ AMOLED ಡಿಸ್‌ಪ್ಲೇ ನೊಂದಿಗೆ 120Hz ರಿಫ್ರೆಶ್ ರೇಟ್, 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 1300nits ಗರಿಷ್ಠ ಬ್ರೈಟ್​ನೆಸ್ ಇರಲಿದೆ.

ಸಾಫ್ಟ್‌ವೇರ್: 
ಈ ಮೊಬೈಲ್‌ನಲ್ಲಿ ಆಂಡ್ರಾಯ್ಡ್ 13 ಆಧಾರಿತ Funtouch OS 13 ಅನ್ನು ಅಳವಡಿಸಲಾಗಿದೆ.

ಬ್ಯಾಟರಿ, ಚಾರ್ಜಿಂಗ್: 
ಈ ಸ್ಮಾರ್ಟ್​ಫೋನ್​ನಲ್ಲಿ 66W Fast Charging ನೀಡಲಾಗಿದ್ದು, 4,600mAh ಬ್ಯಾಟರಿ ಅಳವಡಿಸಲಾಗಿದೆ.

ಬಣ್ಣಗಳು: 
ಐಕ್ಯೂ Z7 ಪ್ರೊ 5G: ಗ್ರ್ಯಾಫೈಟ್ ಮ್ಯಾಟ್ ಮತ್ತು ಬ್ಲೂ ಲಗೂನ್‌ ಎಂಬ ಎರಡು ಬಣ್ಣಗಳಲ್ಲಿ ಖರೀದಿಸಲು ಆಯ್ಕೆ ನೀಡಲಾಗಿದೆ.

ಇತರ ವೈಶಿಷ್ಟ್ಯಗಳು: 
ಐಕ್ಯೂ Z7 ಪ್ರೊ 5G ಸ್ಮಾರ್ಟ್​ಫೋನ್ ವೈ-ಫೈ 6, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ52 ರೇಟಿಂಗ್‌ ನೀಡಲಾಗಿದೆ.

iQOO Z7 Pro 5G Price

iQOO Z7 Pro 5G Price ಏಷ್ಟು?:

ಐಕ್ಯೂ Z7 ಪ್ರೊ 5G ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. 8GB RAM ಮತ್ತು 128GB ಸಂಗ್ರಹ ಸಮಾರ್ಥ್ಯಕ್ಕೆ 23,999 ರೂ. ಬೆಲೆ ನಿಗದಿ ಮಾಡಲಾಗಿದ್ದು, 8GB RAM + 256GB ಸ್ಟೋರೇಜ್‌ನ ಫೋನ್‌ಗೆ 24,999 ರೂ. ಬೆಲೆ ಇರಲಿದೆ. ಸೆಪ್ಟೆಂಬರ್ 5 ರಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ನಲ್ಲಿ ಐಕ್ಯೂ Z7 ಪ್ರೊ 5G ಸ್ಮಾರ್ಟ್​ಫೋನ್ ಸೇಲ್‌ ಆರಂಭವಾಗಲಿದೆ.

Bank Offer:
ಇದರ ಮೊದಲ ಸೇಲ್ ಪ್ರಯುಕ್ತ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್ ಕಾರ್ಡ್ ಇರುವವರಿಗೆ ಫ್ಲಾಟ್ 2,000 ರೂ. ರಿಯಾಯಿತಿ ಮತ್ತು ಎಕ್ಸ್‌ಚೇಂಜ್‌ನಲ್ಲಿ ಹೆಚ್ಚುವರಿ 2,000 ರೂ. ಗಳ ರಿಯಾಯಿತಿಯನ್ನು ನೀಡಲಾಗಿದೆ. ನೀವು ಸಹ ಈ ಮೊಬೈಲ್‌ ಖರೀದಿಸುವರಿದ್ದರೆ Amazon.in ನಲ್ಲಿ ಖರೀದಿಸಬಹುದು.

Telegram Group Join Now
WhatsApp Group Join Now

Leave a Comment