ರೈತರ ಬ್ಯಾಂಕ್‌ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಜಮಾ | Bele Parihara Karnataka 2023-24 Check Status

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಮಳೆಯ ಕೊರತೆಯಿಂದ ರಾಜ್ಯದ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದರು, ಸಕಾಲಕ್ಕೆ ಮಳೆಯಾಗದ ಕಾರಣ ರೈತರು ನಷ್ಟ ಅನುಭವಿಸುವಂತಾಯಿತು. ಸರ್ಕಾರವು ಜನರ ಕಷ್ಟವನ್ನು ಅರಿತು ಬರ ಪರಿಹಾರವನ್ನು (Bele Parihara Karnataka 2023-24) ಬಿಡುಗಡೆ ಮಾಡಿದೆ. ಬೆಳೆಗಳಿಗೆ ಅನುಗುಣವಾಗಿ ಪರಿಹಾರದ ಹಣವನ್ನು ರೈತರ ಖಾತೆಗಳಿ ಸಂದಾಯ ಮಾಡಲಾಗುತ್ತಿದೆ.

ಬೆಳೆ ಪರಿಹಾರದ ಹಣವನ್ನು ಹಂತ ಹಂತವಾಗಿ ಅರ್ಹ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿತ್ತಿದೆ. ಇನ್ನುಳಿದ ಫಲಾನುಭವಿಗಳ ಖಾತೆಗಳಿಗೆ ಶೀಘ್ರವೆ ಬೆಳೆ ಪರಿಹಾರದ ಹಣ ಜಮಾ ಆಗಲಿದೆ. ಬರ ಪರಿಹಾರ ಪಟ್ಟಿಯಲ್ಲಿ ಸೇರದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರವನ್ನು ನೀಡಲಾಗುತ್ತಿದೆ.

Bele Parihara Karnataka 2023-24

ಈ ಕುರಿತು ಸರ್ಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯವರು ಹಾಗೂ ಕೃಷಿ ಸಚಿವರು ಮಾಹಿತಿ ನೀಡಿದ್ದು, ಈ ಕೇಳಗಿನಂತಿದೆ.

ಎನ್.ಡಿ.ಆರ್.ಎಫ್ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇಂದಿನ ವರೆಗೆ 32.12 ಲಕ್ಷ ರೈತರ ಖಾತೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ ಮಾಡಲಾಗಿದೆ. ಇನ್ನೂ ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ.

ಇದಲ್ಲದೆ, ಹಲವು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು 2 ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ. ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯದ ನಷ್ಟಕ್ಕೆ ಪರಿಹಾರವಾಗಿ ತಲಾ 3,000 ರೂ. ಪರಿಹಾರ ನೀಡಲೂ ಸಹ ತೀರ್ಮಾನಿಸಲಾಗಿದೆ.

ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇಲ್ಲಿಯವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಿದೆ ಹಾಗೂ 462 ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್‌ ಸಭೆಗಳನ್ನು ನಡೆಸಿದೆ. ನೀರಿನ ಸಮಸ್ಯೆಯಿರುವ 270 ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 594 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ.
153 ನಗರ ಪ್ರದೇಶದ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಮತ್ತು 35 ವಾರ್ಡ್‌ಗಳಿಗೆ ಖಾಸಗಿ ಬೋರ್‌ವೆಲ್‌ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ.

ರಾಜ್ಯದ ಅವಶ್ಯಕತೆಯಿರುವ ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್‌ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಗಳ ಖಾತೆಗಳಲ್ಲಿ ರೂ. 836 ಕೋಟಿ ಅನುದಾನ ಲಭ್ಯವಿದೆ.

How Check Bele Parihara Karnataka 2023-24 Status:

ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳನ್ನು ಪಡೆಯಲು ಈ ಕೇಳಗೆ ನೀಡಿರುವ ಹಂತಗಳನ್ನು ಅನುಸರಿಸಿ.

Bele Parihara Karnataka
  • Step-1: ವರ್ಷ ಆಯ್ಕೆ ಮಾಡಿ ಎಂಬಲ್ಲಿ 2023-24 ಅನ್ನು ಆಯ್ಕೆ ಮಾಡಿ
  • Step-2:ಮುಂಗಾರು” ಋತು ಆಯ್ಕೆ ಮಾಡಿ
  • Step-3: ನಂತರ ವಿಪತ್ತಿನ ವಿಧದಲ್ಲಿ “ಬರ” ಎಂಬುದನ್ನು ಆಯ್ಕೆ ಮಾಡಿ
  • Step-4: ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ನಿಮ್ಮ ಹಳ್ಳಿಯ ಹೆಸರನ್ನು ಆಯ್ಕೆ ಮಾಡಿ
  • Step-5: ನಂತರ Get Report ಬಟನ್‌ ಮೇಲೆ ಕ್ಲಿಕ್‌ ಮಾಡಿ

ಅಂತಿಮವಾಗಿ ನಿಮ್ಮ ಮುಂದೆ ನಿಮ್ಮ ಹಳ್ಳಿಯ ಬೆಳೆ ಪರಿಹಾರ ಪಟ್ಟಿಯನ್ನು ನೋಡಬಹುದು.

Karnataka bele parihara karnataka 2023-24 link: Check Now

ಇತರೆ ಮಾಹಿತಿಗಳನ್ನು ಓದಿ:

ಹೊಸ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸುವವರಿಗೆ ಗುಡ್‌ ನ್ಯೂಸ್

ಗೃಹಲಕ್ಷ್ಮಿ DBT Status Check ಮಾಡಿ, 2,000 ರೂ. ಬಂತಾ ನೋಡಿ

ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ: ಡೈರೆಕ್ಟ್‌ ಬ್ಯಾಂಕ್‌ ಖಾತೆಗೆ ಹಣ ಜಮಾ

PUC ಪಾಸಾದವರಿಗೆ 20,000 ರೂಪಾಯಿ ಪ್ರೋತ್ಸಾಹಧನ

Telegram Group Join Now
WhatsApp Group Join Now

Leave a Comment

error: Content is protected !!