[Download] ಕನ್ನಡ ವ್ಯಾಕರಣ PDF | ಕನ್ನಡ ವ್ಯಾಕರಣ Kannada Grammar PDF 100% Useful For Competitive Exams

Telegram Group Join Now
WhatsApp Group Join Now

Hi.. ಸ್ಪರ್ಧಾಮಿತ್ರರೇ.. ನಮ್ಮ ವೆಬ್ ಸೈಟ್ ಗೆ ಸ್ವಾಗತ, ನಿಮಗೆ ಕನ್ನಡ ವ್ಯಾಕರಣ PDF ಪುಸ್ತಕ (Kannada Grammar PDF Book) ಬೇಕಾದಿದೆ ಎಂದು ಭಾವಿಸುತ್ತೇನೆ. ಹಾಗಾದರೆ ನೀವು ಸರಿಯಾದ ವೆಬ್ ಸೈಟ್ ಗೆ ಭೇಟಿ ನೀಡಿದ್ದಿರಿ, ಇಲ್ಲಿ ನಿಮ್ಮ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳ (Kannada Grammar PDF For Competitive exams) ಅಧ್ಯಯನಕ್ಕೆ ಉಪಯೋಗವಾಗುವ ಕನ್ನಡ ವ್ಯಾಕರಣ ಪುಸ್ತಕದ PDF ಅನ್ನು ನೀಡಲಾಗಿದೆ. ಈ ಕೇಳಗೆ ನೀಡಲಾಗಿದೆ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಭಾರತೀಯ ಸೇನೆ ಸೇರಲು ಉಚಿತ ತರಬೇತಿ

ಕನ್ನಡ ವ್ಯಾಕರಣ ಯಾಕೆ ಅಧ್ಯಯನ ಮಾಡಬೇಕು? 

ಕನ್ನಡ ಭಾಷೆಯನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಲು ಕನ್ನಡ ವ್ಯಾಕರಣವು ಸಹಕಾರಿಯಾಗುತ್ತದೆ. ಕರ್ನಾಟಕ ಸರ್ಕಾರದ ಉದ್ಯೋಗ ಪಡೆಯಬಯಸುವ ಸ್ಪರ್ಧಾರ್ಥಿಗಳು ಕನ್ನಡ ವ್ಯಾಕರಣವನ್ನು ಸರಿಯಾದ ಕ್ರಮದಲ್ಲಿ ಅಭ್ಯಸಿಸುವುದು ಅಗತ್ಯವಾಗಿರುತ್ತದೆ. ಯಾಕೆಂದರೆ KPSC ಹಾಗೂ ಇತರ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ವಿವಿಧ ಪರೀಕ್ಷೆಗಳಿಗೆ “ಕನ್ನಡ ಪತ್ರಿಕೆ” (KPSC Kannada Paper) ಇರುತ್ತದೆ. ಉದಾ: KPSC FDA, SDA, Group-C ಪರೀಕ್ಷೆಗಳಿಗೆ ಪ್ರತ್ಯೇಕ “ಕನ್ನಡ ಪತ್ರಿಕೆ” ಇದೆ. ಹಾಗಾಗಿ ನೀವು ಕನ್ನಡ ವ್ಯಾಕರಣವನ್ನು ಅಧ್ಯಯನ ಮಾಡುವುದು ಒಳ್ಳೆಯದು. Kannada Grammar PDF eBook ಅನ್ನು ದಯವಿಟ್ಟು ಡೌನ್‌ಲೋಡ್ ಮಾಡಿಕೊಂಡು ಅಧ್ಯಯನ ಮಾಡಬಹುದು.

ವರ್ಣಮಾಲೆ

ನಮ್ಮ ಅಭಿಪ್ರಾಯಗಳನ್ನು ಇತರರಿಗೆ ತಿಳಿಸುವುದಕ್ಕೆ ಮತ್ತು ಇತರರ ಅಭಿಪ್ರಾಯವನ್ನು ನಾವು ತಿಳಿಯುವ ಮಾಧ್ಯಮಕ್ಕೆ “ಭಾಷೆ” ಎಂದು ಹೆಸರು. ಪ್ರಪಂಚದಲ್ಲಿ ಸುಮಾರು ನಾಲ್ಕು ಸಾವಿರ ಭಾಷೆಗಳಿವೆ, ಅವುಗಳಲ್ಲಿ ನಾವು ನಾವು ಮಾತನಾಡುವ ಕನ್ನಡ ಭಾಷೆಯು ಒಂದು ಪ್ರಮುಖ ಭಾಷೆಯಾಗಿದೆ.ಕನ್ನಡ ಭಾಷೆಗೆ “ಶ್ರವಣ ಮತ್ತು ಚಾಕ್ಷುಷ” ಎಂಬ ಎರಡು ರೂಪಗಳಿವೆ.

  • ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು “ಶ್ರವಣ” ವೆಂತಲೂ,
  • ಬರಹದ ಮೂಲಕ ಕಣ್ಣಿಗೆ ಕಾಣಿಸುವುದು “ಚಾಕ್ಷುಷ” ವೆಂತಲೂ,

ಕರೆಯಲಾಗುತ್ತದೆ, ನಾವು ಬರಹದ ಮೂಲಕ ಕನ್ನಡ ಭಾಷೆಯನ್ನು ತಿಳಿಯಬೇಕಾದರೆ ಚಾಕ್ಷುಷ ರೂಪದಿಂದ ಲಿಪಿ ರೂಪ ವರ್ಣಮಾಲೆಯನ್ನು ಮೊದಲು ತಿಳಿಯಬೇಕು.

ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ಅಕ್ಷರಗಳ ಗುಂಪಿಗೆ “ವರ್ಣಮಾಲೆ” ಎನ್ನುತ್ತೇವೆ. ಈ ವರ್ಣ ಮಾಲೆಯ ಸಂಖ್ಯೆಯು ಕಾಲಕಾಲಕ್ಕೆ ಬದಲಾವಣೆ ಹೊಂದುತ್ತಾ ಬಂದಿದೆ. ಕನ್ನಡದಲ್ಲಿ ಮೊದಲು “ಕೇಶಿರಾಜನ ಕಾಲಕ್ಕೆ 47 ಅಕ್ಷರಗಳಿದ್ದವು (ಕೇಶಿರಾಜನು ಈ ಕನ್ನಡ ವರ್ಣಮಾಲೆಗೆ “ಶುದ್ದಗೆ” ಎಂದು ಕರೆದಿದ್ದಾನೆ), ನಂತರ 52 ಅಕ್ಷರಗಳಾದವು (ಕ್ಷ, ಜ್ಞ, ಅಕ್ಷರಗಳು ಸೇರಿ) ಆದರೆ ‘ಕ್ಷʼ ಮತ್ತು ‘ಜ್ಞ’ ಅಕ್ಷರಗಳನ್ನು ಕೈ ಬಿಡಲಾಗಿದೆ. ಈಗ ಕನ್ನಡ ವರ್ಣಮಾಲೆಯಲ್ಲಿ ‘‘ ಅಕ್ಷರ ಬಳಕೆ ಅತೀ ವಿರಳವಾದ್ದರಿಂದ ಅದು ಲೋಪವಾಗಿ NCERT ಅಧಿಕೃತ ಅಕ್ಷರಗಳ ಸಂಖ್ಯೆ 49 ಆಗಿದೆ.

ಕನ್ನಡ ವರ್ಣಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಲಾಗಿದೆ

  1. ಸ್ವರಗಳು
  2. ವ್ಯಂಜನಗಳು
  3. ಯೋಗವಾಹಗಳು

ಸ್ವರಗಳು

ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಥವಾ ಸ್ವತಂತ್ರ ಅಸ್ತಿತ್ವವನ್ನು ಹೊಂದಿ ವರ್ಣಗಳಿಗೆ “ಸ್ವರಗಳು” ಎಂದು ಕರೆಯುತ್ತಾರೆ. ಉದಾ: ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ

ಸ್ವರಗಳಲ್ಲಿ ಮೂರು ಪ್ರಕಾರಗಳು

  1. ಹ್ರಸ್ವಸ್ವರ
  2. ದೀರ್ಘಸ್ವರ
  3. ಪ್ಲುತಸ್ವರ

1) ಹ್ರಸ್ವಸ್ವರ: ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳನ್ನು ಹ್ರಸ್ವಸ್ವರ ಎಂದು ಕರೆಯುತ್ತಾರೆ. ಉದಾಹರಣೆಗಳು: ಅ, ಇ, ಉ, ಋ, ಎ, ಒ.

2) ದೀರ್ಘಸ್ವರ: ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳನ್ನು ದೀರ್ಘಸ್ವರ ಎಂದು ಕರೆಯುತ್ತಾರೆ. ಉದಾಹರಣೆಗಳು: ಆ, ಈ, ಊ, ಏ ,ಐ ,ಓ, ಔ

3)ಪ್ಲುತಸ್ವರ: ಮೂರು ಮಾತ್ರೆಯ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳನ್ನು ಪ್ಲುತಸ್ವರ ಎಂದು ಕರೆಯುತ್ತಾರೆ. ಭಾವ ತೀವ್ರತೆಯನ್ನು ಅಭಿವ್ಯಕ್ತಿಸುವಾಗ ದೀರ್ಘಸ್ವರವು ಎಂಬ ಚಿನ್ನೆಯನ್ನು ಪಡೆಯುವುದರ ಮೂಲಕ ಪ್ಲುತಸ್ವರವಾಗುತ್ತದೆ. ಉದಾಹರಣೆಗಳು: ಅಮ್ಮಾ S, ಓ ದೇವರೇ.

ಸೂಚನೆ: ಆಧುನಿಕ ವ್ಯಾಕರಣದಲ್ಲಿ “” ಧ್ವನಿಯನ್ನು ವ್ಯಂಜನವೆಂದೂ ”ಐ” (ಅ+ಏ) ಮತ್ತು ”ಔ” (ಅ+ಓ) ಧ್ವನಿಗಳನ್ನು ಸಂಧ್ಯಕ್ಷರಗಳು ಎಂದು ಗುರುತಿಸುತ್ತಾರೆ. ಸಂಧ್ಯಕ್ಷರ ಎಂದರೆ “ಎರಡು ಸ್ವರಗಳು ಸೇರಿ ಹೊಸ ಸ್ವರಾಕ್ಷರವಾಗುವುದು” ಉದಾಹರಣೆಗೆ:- ಅ+ಏ=ಐ.

Kannada Grammar PDF Book

HOSAGANNADA VYAKARANA – A Grammer on Modern Kannada by Vidwan N. Ranganatha Sharma and published by Kannada Sahitya Parishattu.

Book NameHosagannada Vyakarana PDF
AuthorVidwan N Ranganatha Sharma
PublisherKannada Sahitya Parishattu, Pampa Mahakavi Road, Chamarajapete, Bengaluru – 560018
Number of Pages140+
Book Published 2015
PDF File CategoryeBooks
PDF File Size60K KB

Kannada Grammar PDF Book Download Links

Kannada Grammar PDF BooksDownload Links
Hosagannada Vyakarana By N Ranganatha SharmaDownload
Kannada Vyakarana Darpana Download
Hosagannada Vyakarana by Dr T V Venkatachala Shastry, Dr. K R Ganesh,Prof. G AshwathanarayanaDownload

FAQ

“ಅವನಿ” ಪದದ ಅರ್ಥ

(1) ಅವನ
(2) ಅವಳ
(3) ಭೂಮಿ
(4) ಪಟ್ಟಣ

ಉತ್ತರ: (3) ಭೂಮಿ

“ಅರ್ತಿ” ಪದದ ಅರ್ಥ

(1) ಆರತಿ
(2) ಅತಿಥಿ
(3) ಸ್ನೇಹ
(4) ಪ್ರೀತಿ

ಉತ್ತರ: (4) ಪ್ರೀತಿ

“ನನ್ನಿ” ಪದದ ಅರ್ಥ

(1) ಅವನ
(2) ನನ್ನ
(3) ಸತ್ಯ
(4) ಸುಳ್ಳು

ಉತ್ತರ: (3) ಸತ್ಯ

“ಅಂಘ್ರಿ” ಪದದ ಅರ್ಥ

(1) ಪಾದ
(2) ಋಷಿ
(3) ಮುನಿ
(4) ಮುಖ

ಉತ್ತರ: (1) ಪಾದ

“ಜೋಳವಾಳಿ” ಪದದ ಅರ್ಥ

(1) ಜೋಳ ಕೊಡು
(2) ಅನ್ನದ ಋಣ
(3) ಜೋಳದ ಆಳು
(4) ಜೋಳದ ಬೆಳೆ

ಉತ್ತರ: (2) ಅನ್ನದ ಋಣ

Telegram Group Join Now
WhatsApp Group Join Now

Leave a Comment