ಭಾರತೀಯ ಸೇನೆ ಸೇರಲು ಉಚಿತ ತರಬೇತಿ | Army Pre-Recruitment Training 2023

Telegram Group Join Now
WhatsApp Group Join Now

ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ‌ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ಉಚಿತ ತರಬೇತಿ (Army Pre-Recruitment Training 2023) ಯನ್ನು ನೀಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಈ ಉಚಿತ ತರಬೇತಿ ಪಡೆಯ ಬಯಸುವ ಅರ್ಹ ಅಭ್ಯರ್ಥಿಗಳು ನಿಗದಿ ಪಡಿಸಿರುವ ಕೊನೆಯ ದಿನಾಂಕದ ಒಳಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಇತರೆ ವಿವರಣೆಗಳನ್ನು ಈ ಕೆಳಗಿಂತೆ ನೀಡಲಾಗಿದೆ.

Army Pre-Recruitment Training 2023 ಸಾಮಾನ್ಯ ಅರ್ಹತೆ:

  1. ಕನಿಷ್ಠ ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10 ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು.
  2. ವಯೋಮಿತಿ: ಡಿಸೆಂಬರ್ 31, 2023 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸು 17 ವರ್ಷದಿಂದ 20 ವರ್ಷಗಳ ವಯಸ್ಸಿನ ಒಳಗಿರಬೇಕು. (ಅಭ್ಯರ್ಥಿಯು 01 Dec 2003 ರಿಂದ 01 July 2006 ರ ದಿನಾಂಕಗಳ ನಡುವೆ ಜನಿಸಿರಬೇಕು).

ಉಚಿತ ತರಬೇತಿ ನೀಡುವ ಸ್ಥಳ:

ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ಉಚಿತ ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್‌: bcwd.karnataka.gov.in

Army Pre-Recruitment Training 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.02.2023

ಹೆಚ್ಚಿನ ಮಾಹಿತಿಗಾಗಿ

  1. ಸಹಾಯವಾಣಿ: 805077000,
  2. ದಕ್ಷಿಣ ಕನ್ನಡ ಜಿಲ್ಲೆ: ದೂ. ಸಂ. 0824-2225078,
  3. ಉಡುಪಿ ಜಿಲ್ಲೆ: ದೂ. ಸಂ. 0820-2574881,
  4. ಉತ್ತರ ಕನ್ನಡ: ದೂ.ಸಂ. 08382-226589.
    (ಸಮಯ ಬೆಳಗ್ಗೆ 10.00 ರಿಂದ ಸಂಜೆ 5.30ರವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ)

ಪ್ರಕಟಣೆ: ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು

ಸರ್ಕಾರಿ ಯೋಜನೆಗಳು

Telegram Group Join Now
WhatsApp Group Join Now