ಅರ್ಜಿ ಸಲ್ಲಿಸಲು ಹಣ ಪಡೆದರೆ ಕಠಿಣ ಕ್ರಮ ಗ್ಯಾರಂಟಿ: ಡಿಕೆಶಿ | Karnataka Guarantee Scheme Application 2023

Telegram Group Join Now
WhatsApp Group Join Now

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಅರ್ಜಿ (Karnataka Guarantee Scheme Application) ಹಾಕಲು ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ಗೃಹ ಜ್ಯೋತಿ ಯೋಜನೆಯ ಆನ್ ಲೈನ್ ಅರ್ಜಿ ಹಾಕಲು ಕೆಲವರು ವೈಯಕ್ತಿಕವಾಗಿ ಹಾಗೂ ಕೆಲವು ಏಜೆನ್ಸಿ ಮೂಲಕ ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಜನರಲ್ಲಿ ನಾನು ಮಾಡುವ ಮನವಿ ಏನೆಂದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಯಾರಿಗೂ ಲಂಚ ನೀಡಬೇಕಾಗಿಲ್ಲ. ನೀವೇ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ (Shakti Yojane Karnataka), ಗೃಹ ಜ್ಯೋತಿ ಯೋಜನೆ (Gruha Jyothi Scheme), ಯುವನಿಧಿ ಯೋಜನೆ (Yuva Nidhi Scheme), ಅನ್ನಭಾಗ್ಯ (Anna Bhagya Yojane) ಮತ್ತು ಗೃಹ ಲಕ್ಷ್ಮೀ (Gruha Lakshmi Scheme) ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜನರು ಅರ್ಜಿ ಸಲ್ಲಿಸಲು ಧಾವಿಸುತ್ತಿದ್ದಾರೆ. ಇದರ ಲಾಭ ಪಡೆಯಲು ಆನ್’ಲೈನ್ ಸೇವಾ ಕೇಂದ್ರಗಳು ಹಣ ಪೀಕುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಸಾರ್ವಜನಿಕರಿಂದ ಹಣ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಕೆಶಿ ವಾರ್ನ್ ಮಾಡಿದ್ದಾರೆ.

ಫಲಾನುಭವಿಗಳು ತಮ್ಮತಮ್ಮ ಮೊಬೈಲ್, ಲ್ಯಾಪ್ ಟಾಪ್, ಅಥವಾ ಕಂಪ್ಯೂಟರ್ ಗಳಲ್ಲಿ ಗೃಹಜ್ಯೋತಿ ಯೋಜನೆಯನ್ನು ಸಲ್ಲಿಸಲು ಮನವಿ ಮಾಡಿದ್ದಾರೆ.

Karnataka Guarantee Scheme Application 2023

ಗೃಹಜ್ಯೋತಿ ಅರ್ಜಿಯನ್ನು ಕೆಲವೇ ನಿಮಿಷಗಳಲ್ಲಿ ಸೇವಾ ಸಿಂಧು (Seva Sindhu) ವೆಬ್ ಸೈಟ್ ಮೂಲಕ ಸಲ್ಲಿಸಬಹುದು ಅದರ ಬಗ್ಗೆ ಈ ಕೇಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ ಅರ್ಜಿ ಸಲ್ಲಿಸಿ.

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

“ಗೃಹ ಜ್ಯೋತಿ” ಸೇವಾ ಸಿಂಧು ಆನ್‌ಲೈನ್‌ ಅರ್ಜಿ

ಗೃಹ ಜ್ಯೋತಿ ಆನ್’ಲೈನ್ ಅರ್ಜಿ ಸಲ್ಲಿಕೆ ಲಿಂಕ್, ಕೊನೆಯ ದಿನಾಂಕ

ಗೃಹ ಲಕ್ಷ್ಮೀ” ಸೇವಾ ಸಿಂಧು ಆನ್‌ಲೈನ್‌ ಅರ್ಜಿ

Telegram Group Join Now
WhatsApp Group Join Now

Leave a Comment