PM ABHIM ಯೋಜನೆಯಡಿಯಲ್ಲಿ ‘ನಮ್ಮ ಕ್ಲಿನಿಕ್’ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಪ್ರಕಟಣೆ (Namma Clinic Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Namma Clinic Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (ರಿ), ಮಂಡ್ಯ
ವೇತನ ಶ್ರೇಣಿ: 12,944 ರಿಂದ 43,142 ರೂ
ಉದ್ಯೋಗ ಸ್ಥಳ: ಮಂಡ್ಯ
ಶೈಕ್ಷಣಿಕ ಅರ್ಹತೆ:
ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್.
ಶುಶೂಷಣಾಧಿಕಾರಿಗಳು – ಬಿ.ಎಸ್ಸಿ ನರ್ಸಿಂಗ್, ಪೋಸ್ಟ್ ಸರ್ಟಿಫೈಡ್ ಬಿ.ಎಸ್ಸಿ, ಡಿಪ್ಲೊಮ ಇನ್ ನರ್ಸಿಂಗ್
ಪ್ರಯೋಗ ಶಾಲಾ ತಂತ್ರಜ್ಞರು – ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ:
ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – 43,142 ರೂ
ಶುಶೂಷಣಾಧಿಕಾರಿಗಳು – 12,944 ರೂ
ಪ್ರಯೋಗ ಶಾಲಾ ತಂತ್ರಜ್ಞರು – 12,810 ರೂ
ವಯೋಮಿತಿ:
ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – ಗರಿಷ್ಠ 70 ವರ್ಷ ಮೀರಿರಬಾರದು.
ಶುಶೂಷಣಾಧಿಕಾರಿಗಳು – ಗರಿಷ್ಠ 40 ವರ್ಷ ಮೀರಿರಬಾರದು.
ಪ್ರಯೋಗ ಶಾಲಾ ತಂತ್ರಜ್ಞರು – ಗರಿಷ್ಠ 40 ವರ್ಷ ಮೀರಿರಬಾರದು.
ಹುದ್ದೆಗಳ ವಿವರ:
ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – 4
ಶುಶೂಷಣಾಧಿಕಾರಿಗಳು – 4
ಪ್ರಯೋಗ ಶಾಲಾ ತಂತ್ರಜ್ಞರು – 4
Namma Clinic Recruitment 2023 ನೇರ ಸಂದರ್ಶನ:
ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು (ವಾಕ್ ಇನ್ ಇಂಟರ್ ವ್ಯೂ) ದಿನಾಂಕ : (08-13-2023 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 2.00 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣ, ಮಂಡ್ಯ ಇಲ್ಲಿ ಅರ್ಜಿ ವಿತರಿಸಲಾಗುವುದು ಹಾಗೂ ಭರ್ತಿ ಮಾಡಿದ ಸದರಿ ಅರ್ಜಿಗಳನ್ನು ಅದೇ ದಿನ ಪಡೆದುಕೊಳ್ಳಲಾಗುವುದು. (ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು, ಅರ್ಜಿಯನ್ನು ಪಡೆದು, ಅರ್ಜಿಯೊಂದಿಗೆ ಸಂಬಂಧಿಸಿದ ದೃಢೀಕರಿಸಿದ ನಕಲು ಪ್ರತಿಯೊಂದಿಗೆ, ಇತ್ತೀಚಿನ ಎರಡು ಭಾವಚಿತ್ರಗಳನ್ನು ಲಗತ್ತಿಸಿ ಮಧ್ಯಾಹ್ನ 2 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ).
ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 01-03-2023
ನೇರ ಸಂದರ್ಶನ ದಿನಾಂಕ: 08-03-2023
ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ವಿಳಾಸ: ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣ, ಮಂಡ್ಯ
1 thought on “ಆರೋಗ್ಯ ಕೇಂದ್ರದಲ್ಲಿ ಉದ್ಯೋಗವಕಾಶ | Namma Clinic Recruitment 2023”