ಎಲ್ಲರಿಗೂ ನಮಸ್ಕಾರ, ಹೊಸ ರೇಷನ್ ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್. ಹೊಸ ಪಡಿತರ ಚೀಟಿ (New Ration Card) ಪಡೆಯುವ ನಿರೀಕ್ಷೆಯಲ್ಲಿ ಇದ್ದವರಿಗೆ ಸರ್ಕಾರ ಸಂತಸದ ಸುದ್ದಿ ನೀಡಿದೆ.
2023 ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಕಾರಣದಿಂದಾಗಿ ಹೊಸ ಪಡಿತರ ಚೀಟಿ ವಿತರಣಾ ಪ್ರಕ್ರೀಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿ ಆರೇಳು ತಿಂಗಳು ಕಳೆದರೂ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿರಲಿಲ್ಲ. ಇದೀಗ ಪರಿಶೀಲನೆ ಮಾಡಿ ಪಡಿತರ ಚೀಟಿ ವಿತರಣೆ ಮಾಡಲು ಸರ್ಕಾರ ತಯಾರಾಗಿದೆ.
New Ration Card Karnataka
ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದು, ಚುನಾವಣೆ ಸಂದರ್ಭದಲ್ಲಿ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಇನ್ನು 15 ದಿನದೊಳಗೆ ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಡಿತರ ಚೀಟಿದಾರರಿಗೆ ಹಣದ ಬದಲು ಅಕ್ಕಿ ನೀಡಲು ಪ್ರಯತ್ನ ನಡೆಸಲಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ ನೀಡಿದರೆ ಹಂತವರಿಗೆ ಸರ್ಕಾರದ ಕಲ್ಯಾಣ ಯೋಜನಗಳ ಲಾಭ ಸಿಗಲಿದೆ. ರೇಷನ್ ಕಾರ್ಡ್ ಸಿಕ್ಕರೆ ಅನೇಕ ಬಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ.

ಇತರೆ ಮಾಹಿತಿಗಳನ್ನು ಓದಿ
ವಿದ್ಯಾರ್ಥಿಗಳಿಗೆ 20,000 ರೂ. ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ