ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಆರಂಭ, ಅರ್ಜಿ ಸಲ್ಲಿಸುವುದು ಹೇಗೆ? | New Ration Card Karnataka Apply Online 2024 @ahara.kar.nic.in/public_new_rc/

Telegram Group Join Now
WhatsApp Group Join Now

ನಮಸ್ಕಾರ… ನೀವು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೀರಾ…? ಹಾಗಾದರೆ ಇಲ್ಲಿ ನಾವು ಹೊಸ ಪಡಿತರ ಚೀಟಿಯ (New Ration Card Karnataka @ahara.kar.nic.in) ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಲಿದ್ದೇವೆ. ನೀವುಗಳು ಈ ಮಾಹಿತಿಯನ್ನು ಪಡೆದು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು.

ರೇಷನ್ ಕಾರ್ಡ್ ಸರ್ಕಾರದ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಬಹು ಮುಖ್ಯ ದಾಖಲೆಯಾಗಿದ್ದು. ಬಡತನ ರೇಖೆಗಿಂತ ಕೇಳಗಿರುವ ನಾಗರಿಕರಿಗೆ ಬಿಪಿಎಲ್‌ ರೇಷನ್ ಕಾರ್ಡ್ ಅಥವಾ ಅತ್ಯೋದಯ. ಹಾಗೂ ಬಡತನ ರೇಖೆಗಿಂತ ಮೇಲಿರುವವರು ಎಪಿಎಲ್‌ ರೇಷನ್ ಕಾರ್ಡ್ ಪಡೆಯಬಹುದು.

ಹೊಸ ರೇಷನ್ ಕಾರ್ಡ್‌ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂಬುದು ತಿಳಿದು ಬಂದಿದ್ದು. ಲಿಂಕ್‌ ಕೇಳಗೆ ನೀಡಲಾಗಿದೆ ಗಮನಿಸಿ.

ರೇಷನ್‌ ಕಾರ್ಡ್‌ ತಿದ್ದುಪಡಿ, ಹೆಸರು ಸೇರ್ಪಡೆ ಆರಂಭ

ರೇಷನ್ ಕಾರ್ಡ್‌ನ ಉಪಯೋಗಗಳು (Benefits Of Ration Card)

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಜ್ಯದ ಅರ್ಹ ನಾಗರಿಕರಿಗೆ ವಿತರಿಸುವ ಬಿಪಿಎಲ್‌ ಕಾರ್ಡ್ ಅಥವಾ ಅತ್ಯೋದಯ ಕಾರ್ಡ್ ಮತ್ತು ಎಪಿಎಲ್‌ ರೇಷನ್ ಕಾರ್ಡ್‌ಗಳ ಉಪಯೋಗಗಳು ಈ ಕೇಳಗಿನಂತಿವೆ.

  1. ರೇಷನ್ ಕಾರ್ಡ್‌ ಸರ್ಕಾರದ ಬಹುಮುಖ್ಯ ದಾಖಲೆಗಳಲ್ಲಿ ಒಂದು
  2. ಸರ್ಕಾರದಿಂದ ಸಿಗುವ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಬಹುದು.
  3. ಬಿಪಿಎಲ್‌ ಕಾರ್ಡ್ ಅಥವಾ ಅತ್ಯೋದಯ ಕಾರ್ಡ್ ಹೊಂದಿದವರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡಲಾಗುತ್ತದೆ.
    • ಕಾಂಗ್ರೇಸ್‌ ಪಕ್ಷ ಪ್ರನಾಳಿಕೆಯಲ್ಲಿ ಘೋಷಿಸಿದಂತೆ ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ವಿತರಣೆ ಮಾಡುವರಿದ್ದರು, ಆದರೆ ಅಕ್ಕಿ ಅಲಭ್ಯತೆಯ ಕಾರಣದಿಂದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಕೆಜಿಗೆ 34 ರೂ. ರಂತೆ ಕುಟುಂಬದ ಪ್ರತಿ ಸದಸ್ಯರಿಗೆ 172 ರೂ. ನೀಡಲಾಗುತ್ತದೆ.
  4. ರೇಷನ್ ಕಾರ್ಡ್‌ ಹೊಂದಿರುವ ಕುಟುಂಬದ ಮನೆ ಯಜಮಾನಿಗೆ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2,000 ರೂ. ಪಡೆಯಬಹುದು.
  5. ಬಿಪಿಎಲ್‌ ಕಾರ್ಡ್ ಅಥವಾ ಅತ್ಯೋದಯ ಕಾರ್ಡ್ʼದಾರರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕ್ಸಿತೆ ಪಡೆಯಲು ರಿಯಾಯಿತಿ ದೊರೆಯುತ್ತದೆ.
  6. ಹೀಗೆ ಅನೇಕ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರದ ಪ್ರಮುಖ ದಾಖಲೆಗಳ್ಲಿ ಒಂದಾದ ರೇಷನ್ ಕಾರ್ಡ್ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೊಸ ರೇಷನ್ ಕಾರ್ಡ್ ಅರ್ಜಿ (New Ration Card Online Application) ಸಲ್ಲಿಕೆಯ ಸರಳ ವಿಧಾನಗಳನ್ನು ಈ ಕೇಳಗಿನಂತೆ ನೀಡಲಾಗಿದೆ.

How To Apply New Ration Card Karnataka @ahara.kar.nic.in ?

  • Step 1: ಮೊದಲಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ (ahara.kar.nic.in) ಮೇಲೆ ಕ್ಲಿಕ್‌ ಮಾಡಿ. (ವೆಬ್‌ಸೈಟ್‌ ಲಿಂಕ್‌ನ್ನು ಕೇಳಗೆ ಒದಗಿಸಲಾಗಿದೆ)
  • Step-2: ಆಹಾರ ಇಲಾಖೆಯ ವೆಬ್‌ಸೈಟ್‌’ನಲ್ಲಿ ಮೇಲ್ಭಾಗದಲ್ಲಿ ಇರುವ “ಇ-ಸೇವೆಗಳು” ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
ahara.kar.nic Apply New Ration Card Karnataka Step-1
  • Step 3: ಎಡ ಭಾಗದಲ್ಲಿ ಇರುವ ಇ-ಪಡಿತರ ಚೀಟಿ ಎಂದಿರುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
  • Step 4: ಅಲ್ಲಿಯೇ ಕೇಳಗೆ “ಹೊಸ ಪಡಿತರ ಚೀಟಿ” (New Ration Card) ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
ahara.kar.nic New Ration Card Application
  • Step 5: “New Application For Ration Card” ಎಂದಿರುವ ಆನ್‌ಲೈನ್‌ ಅರ್ಜಿ ಪುಟ ತೆರೆಯುತ್ತದೆ. ಅದರಲ್ಲಿ ಮೂರು ಆಯ್ಕೆಗಳಿರುತ್ತವೆ. ಮೊದಲನೇಯ ಆಯ್ಕೆ “New Ration Card Request” ಎಂಬುದನ್ನು ಆಯ್ಕೆ ಮಾಡಿ.
New Ration Card Karnataka Appy
  • Step 6: Priority Household (PHH) ಮತ್ತು Non-Priority Household ಎರಡು ಆಯ್ಕೆಗಳಿವೆ. ನೀವು BPL Card ಗೆ ಅರ್ಹರಿದ್ದರೆ Priority Household ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ. ಅಥವಾ ನೀವು APL Card ಗೆ ಅರ್ಹರಿದ್ದರೆ Non-Priority Household ಎಂಬುದನ್ನು ಆಯ್ಕೆ ಮಾಡಿ.
Apply New Ration Card Karnataka Step-6
New Ration Card Apply Online Karnataka
  • Step 7: ಈ ಕೇಳಗಿನ ಅಂಶಗಳನ್ನು ಓದಿ. ಹೌದು – ಇಲ್ಲ ಎಂದು ಆಯ್ಕೆ ಮಾಡಿ ಮುಂದುವರೆಯಿರಿ.
  • Step 8: ನಿಮ್ಮ ಆಧಾರ ಸಂಖ್ಯೆ ಮತ್ತು ಆಧಾರಗೆ ಲಿಂಕ್ ಮೊಬೈಲ್‌ ಸಂಖ್ಯೆಯನ್ನು ಎಂಟರ್‌ ಮಾಡಿ. Go ಬಟನ್‌ ಮೇಲೆ ಕ್ಲಿಕ್‌ ಮಾಡಿ.
Ahara Nagarik Sarabaraju Karnataka Website
  • Step 9: ಓಟಿಪಿ ಬರುತ್ತದೆ ಅದನ್ನು ಅಲ್ಲಿರುವ ಬಾಕ್ಸ್‌ನಲ್ಲಿ ಎಂಟರ್‌ ಮಾಡಿ. Go ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step 10: ಕೇಳಗೆ ಇರುವ Captcha ಅನ್ನು ಎಂಟರ್‌ ಮಾಡಿ Verify ಮಾಡಬೇಕು.
  • Step 11: ನಂತರ Finger Print Verification ಮೇಲೆ ಕ್ಲಿಕ್‌ ಮಾಡಿ. ಪಿಂಗರ್‌ ಪ್ರೀಂಟ್‌ ಮಷಿನ್‌ ಮೇಲೆ ಬೆರಳು ಇಟ್ಟು ವೇರಿಫಿಕೇಶನ್‌ ಮಾಡಬೇಕು.
  • Step 12: ನಂತರ ಅಲ್ಲಿ ನೀವು ನಮೂದಿಸಿರುವ ಆಧಾರ ಸಂಖ್ಯೆಯಲ್ಲಿ ಎಲ್ಲ ಮಾಹಿತಿ ತೋರಿಸುತ್ತದೆ. ನಿಮ್ಮ ಹೆಸರು, ಜನ್ಮ ದಿನಾಂಕ, ಭಾವಚಿತ್ರ ಹೀಗೆ ಮಾಹಿತಿ ಇರುತ್ತದೆ. ಅಲ್ಲಿಯೇ ಕೇಳಗೆ Add ಬಟನ್‌ ಇರುತ್ತದೆ, ಅದರ ಮೇಲೆ ಕ್ಲಿಕ್‌ ಮಾಡಿ.
  • Step 13: Add Family Member ಎಂದಿರುವ ಬಟನ್‌ ಮೇಲೆ ಕ್ಲಕ್‌ ಮಾಡಿ ನಿಮ್ಮ ಮನೆಯ ಇನ್ನಿತ್ತರ ಸದಸ್ಯರನ್ನು Add ಮಾಡಿ.
  • Step 14: ಆಧಾರ ಕಾರ್ಡ್‌ನಲ್ಲಿರುವ ನಿಮ್ಮ ವಿಳಾಸ ಅಲ್ಲಿ ಕಾಣುತ್ತದೆ ಅದನ್ನು ಸೆಲೇಕ್ಟ್‌ ಮಾಡಿ.
  • Step 15: ನ್ಯಾಯ ಬೇಲೆ ಅಂಗಡಿಯನ್ನು ಆಯ್ಕೆ ಮಾಡಿ ಎಂದಿರುತ್ತದೆ. ನಿಮ್ಮ ಸಮೀಪದ ನ್ಯಾಯ ಬೇಲೆ ಅಂಗಡಿಯನ್ನು ಆಯ್ಕೆ ಮಾಡಿ.
  • Step 16: ಅಲ್ಲಿಯೇ ಮುಂದೆ ನಗರ ಅಥವಾ ಗ್ರಾಮೀಣ ಎಂಬ ಆಯ್ಕೆಗಳಿರುತ್ತವೆ. ನಿಮಗೆ ಯಾವುದು ಅನ್ವಯವಾಗುತ್ತದೆ ಅದನ್ನು ಆಯ್ಕೆ ಮಾಡಿ. ನಂತರ ನಿಮ್ಮ ನಗರ ಅಥವಾ ಊರನ್ನು ಮತ್ತು ವಾರ್ಡನ್ನು ಆಯ್ಕೆ ಮಾಡಿ. ಅಲ್ಲಿಯೇ ಇರುವ Next Stage ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step 17: ನೀವು Add ಮಾಡಿರುವ ಸದಸ್ಯರಲ್ಲಿ ಯಾರನ್ನು ಕುಟುಂಬದ ಮುಖ್ಯಸರನ್ನಾಗಿ ಮಾಡಬೇಕು ಅವರ ಹೆಸರನ್ನು ಆಯ್ಕೆ ಮಾಡಿ.
  • Step 18: ಕುಟುಂಬದ ಮುಖ್ಯಸರನ್ನು ಆಯ್ಕೆ ಮಾಡಿ Save ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step 19: ನಂತರ ನೀವು ಅರ್ಜಿ ಸಲ್ಲಿಸಿದ ಪಡಿತರ ಚೀಟಿಯ ಸ್ವೀಕೃತಿ ಸಿಗುತ್ತದೆ ಅದನ್ನು PDF file ರೂಪದಲ್ಲಿ ಸೇವ ಮಾಡಿಕೊಳ್ಳಿ ಅಥವಾ Print ತೆಗೆದುಕೊಳ್ಳಿ.
  • Step 20: ಹೆಚ್ಚಿನ ಮಾಹಿತಿಗಾಗಿ ಹತ್ತಿರದ ನ್ಯಾಯ ಬೇಲೆ ಅಂಗಡಿಗೆ ಭೇಟಿ ನೀಡಿ.
  • Step 21: ನಿಮಗೆ ಸಿಕ್ಕಿರುವ ಸ್ವೀಕೃತಿ ನಂಬರ್‌ ಮೂಲಕ Ration Card Status (ರೇಷನ್ ಕಾರ್ಡಿನ ಸ್ಥಿತಿ) ಯನ್ನು ತಿಳಿದುಕೊಳ್ಳಬಹುದು.

ಪಡಿತರ ಚೀಟಿಯನ್ನು ಪಡೆಯಲು‌ ಕೇಳಗೆ ನೀಡಿರುವ www.ahara.kar.nic.in Ration Card Application ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು:
Karnataka New Ration Card Apply Online Link: Check Out
ಆಹಾರ ಇಲಾಖೆ ವೆಬ್‌ಸೈಟ್:‌ ahara.kar.nic.in, ahara.kar.nic.in/public_new_rc/
Ration Card Status Karnataka Link: ahara.kar.nic.in/lpg

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳಿಗೆ ಭೇಟಿ ನೀಡಿ ಗಮನಿಸಿ.

ಯೋಜನೆಗಳ Updates ಪಡೆಯಲು ವಾಟ್ಸ್ ಆಪ್ ಗ್ರುಪ್’ಗೆ Join ಆಗಿ ಮತ್ತು Subscribe ಮಾಡಿಕೊಳ್ಳಿ.

ಸರ್ಕಾರ ಇತರೆ ಯೋಜನೆಗಳು

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಬೆಳೆ ಪರಿಹಾರ ಹಣ ಜಮಾ, ನಿಮ್ಮ ಖಾತೆಗೆ ಬಂತಾ ನೋಡಿ

Ration Card Amount Check Karnataka

ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ


Telegram Group Join Now
WhatsApp Group Join Now

Leave a Comment