ಹೊಸ ವೋಟರ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ | New Voter Id Card Apply Online Karnataka 2024

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕೂಡ ಹೊಸ ವೋಟರ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬೇಕಾ? ಈ ಲೇಖನವನ್ನು ಓದಿ. ಇಲ್ಲಿ New Voter Id Card ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಇನ್ನಿತರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಹೌದು ಸ್ನೇಹಿತರೇ, ಈಗಾಗಲೇ 2024ರ ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ನಿಮ್ಮ ಹತ್ತಿರ ಮತದಾರ ಚೀಟಿ ಇಲ್ಲವಾದರೇ ಈಗಲೇ ಆನ್‌ಲೈನ್‌ ಅರ್ಜಿ ಸಲ್ಲಿಸಿ ವೋಟರ್‌ ಕಾರ್ಡ್‌ ಪಡೆಯಬಹುದು.

New Voter Id Card ಬೇಕಾಗುವ ದಾಖಲೆಗಳು:

  • ಪಾಸ್‌ಪೋರ್ಟ್‌ ಅಳತೆಯ ಕಲರ್ ಭಾವಚಿತ್ರ
  • ಗುರುತು ಪುರಾವೆ
  • ವಿಳಾಸ ಪುರಾವೆ
  • ವಯಸ್ಸಿನ ಪುರಾವೆ

ಗುರುತು ಮತ್ತು ವಯಸ್ಸಿನ ಪುರಾವೆ:

  1. ಆಧಾರ್ ಕಾರ್ಡ್
  2. ಚಾಲನಾ ಪರವಾನಿಗೆ
  3. Passport
  4. Pan Card
  5. ಜನನ ಪ್ರಮಾಣಪತ್ರ
  6. ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ
  7. ಇವುಗಳಲ್ಲಿ ಯಾವುದಾದರು ಒಂದು ಗುರುತು ಮತ್ತು ವಯಸ್ಸಿನ ಪುರಾವೆ ಬೇಕು.

ವಿಳಾಸ ಪುರಾವೆ:

  1. ಆಧಾರ್ ಕಾರ್ಡ್
  2. ಚಾಲನಾ ಪರವಾನಿಗೆ
  3. ಪಾಸ್ಪೋರ್ಟ್ (Passport)
  4. ಪಡಿತರ ಚೀಟಿ
  5. ಬ್ಯಾಂಕ್ ಪಾಸ್ಬುಕ್
  6. ನೀರು/ಅನಿಲ ಸಂಪರ್ಕ/ವಿದ್ಯುತ್ ಬಿಲ್
  7. ಇವುಗಳಲ್ಲಿ ಯಾವುದಾದರು ಒಂದು ವಿಳಾಸ ಪುರಾವೆ ಬೇಕು.

ಮತದಾರರ ಗುರುತಿನ ಚೀಟಿ ಅರ್ಹತೆ

ಮತದಾರರ ಗುರುತಿನ ಚೀಟಿ ಪಡೆಯಲು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • ಭಾರತೀಯ ಪ್ರಜೆ
  • 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು
  • ಶಾಶ್ವತ ವಿಳಾಸವನ್ನು ಹೊಂದಿರಬೇಕು
  • ಕೆಲವೆ ತಿಂಗಳಲ್ಲಿ 18 ವರ್ಷ ಪೂರೈಸುವವರು ಕೂಡ ಅರ್ಜಿ ಸಲ್ಲಿಬಹುದು.

How To Apply For New Voter Id Card?:

New Voter Id Card ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕೇಳಗಿನ ವಿಧಾನವನ್ನು ಅನುಸರಿಸಬಹುದು.

  • Step-1: ಮೊದಲಿಗೆ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ʼಗೆ ಭೇಟಿ ನೀಡಿ. (ಕೇಳಗೆ ನೀಡಲಾಗಿದೆ).
  • Step-2: Home Page ನಲ್ಲಿ ಬಲ ಮೂಲೆಯಲ್ಲಿರುವ ‘ಸೈನ್-ಅಪ್’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
New Voter Id Card Apply Online Step-1
  • Step-3: ಮುಂದಿನ ಪುಟದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ‘Continue’ ಬಟನ್‌ ಮೇಲೆ ಕ್ಲಿಕ್ ಮಾಡಿ.
  • Step-4: ನಿಮ್ಮ ‘ಮೊದಲ ಹೆಸರು’, ‘ಕೊನೆಯ ಹೆಸರು’, ‘ಪಾಸ್‌ವರ್ಡ್’, ‘ Confirm ಪಾಸ್‌ವರ್ಡ್’ ಅನ್ನು ನಮೂದಿಸಿ ಮತ್ತು ‘Request OTP’ ಬಟನ್ ಕ್ಲಿಕ್ ಮಾಡಿ.
  • Step-5: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಬಂದಿರುವ OTP ಅನ್ನು ನಮೂದಿಸಿ ಮತ್ತು ‘Verify’ ಬಟನ್‌ ಮೇಲೆ ಕ್ಲಿಕ್ ಮಾಡಿ.
  • Step-6: ‘ಲಾಗಿನ್’ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಮತ್ತು ‘ಓಟಿಪಿ ವಿನಂತಿ’ ಬಟನ್ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಮತ್ತು ‘ಪರಿಶೀಲಿಸಿ ಮತ್ತು ಲಾಗಿನ್’ ಬಟನ್ ಕ್ಲಿಕ್ ಮಾಡಿ.
  • Step-7: Forms ವಿಭಾಗದಲ್ಲಿ  ‘New registration for general electors‘ ಅಡಿಯಲ್ಲಿ ‘Fill Form 6’ ಬಟನ್ ಮೇಲೆ ಕ್ಲಿಕ್ ಮಾಡಿ.
New Voter Id Card
  • Step-8: ರಾಜ್ಯ, ನಿಮ್ಮ ಜಿಲ್ಲೆಯ ಹೆಸರು, ನಿಮ್ಮ ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ ನಂತರ ಅಲ್ಲಿಯೇ ಕೇಳಗೆ ಇರುವ Next ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-9: ನಿಮ್ಮ ಮೊದಲ ಹೆಸರು ನಂತರ ಮಧ್ಯದ ಹೆಸರು ಮತ್ತು ನಿಮ್ಮ Surname ಅನ್ನು ನಮೂದಿಸಿ. ಹಾಗೂ ನಿಮ್ಮ ಕಲರ್‌ ಪೋಟೊ ಅಪ್‌ಲೋಡ್‌ ಮಾಡಿ. Next ಬಟನ್‌ ಕ್ಲಿಕ್‌ ಮಾಡಿ.
  • Step-10: ನಿಮ್ಮ ಕುಟುಂಬದ ಸದಸ್ಯರ ಸಂಬಂಧವನ್ನು ಆಯ್ಕೆ ಮಾಡಿ ಹಾಗೂ ಅವರ ಹೆಸರು ಮತ್ತು Surname ನಮೂದಿಸಿ, Next ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-11: Contact Details ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಮತ್ತು ಇ-ಮೈಲ್‌ ಐಡಿ ಎಂಟರ್‌ ಮಾಡಿ ಅಥವಾ ನಿಮ್ಮ ಸಂಬಂಧಿಯ ಮೊಬೈಲ್‌ ನಂಬರ್‌ ಮತ್ತು ಇ-ಮೈಲ್‌ ಐಡಿ ನಮೂದಿಸಿ. Next ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-12: ನಿಮ್ಮ ಆಧಾರ ವಿವರಗಳನ್ನು ಎಂಟರ್‌ ಮಾಡಿ, Next ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-13: ನಿಮ್ಮ Gender ಆಯ್ಕೆ ಮಾಡಿ. Next ಬಟನ್‌ ಕ್ಲಿಕ್‌ ಮಾಡಿ
  • Step-14: ನಿಮ್ಮ ಜನ್ಮ ದಿನಾಂಕದ ವಿವರ ಎಂಟರ್‌ ಮಾಡಿ. ಹಾಗೂ ಅದಕ್ಕೆ ಸಂಬಂಧ ಪಟ್ಟ Document ಅನ್ನು ಆಯ್ಕೆ ಮಾಡಿ, ಅಪ್‌ಲೋಡ್‌ ಮಾಡಿ. Next ಬಟನ್‌ ಕ್ಲಿಕ್‌ ಮಾಡಿ.
  • Step-15: ನಿಮ್ಮ ಸಂಪೂರ್ಣ ವಿಳಾಸವನ್ನು Fill ಮಾಡಿ ಹಾಗೂ ಅದಕ್ಕೆ ಸಂಬಂಧಿಸಿದ ಪುರಾವೆ Next ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-16: ವಿಕಲಚೇತನರಾಗಿದಲ್ಲಿ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ. Next ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-17: ನೀವು ಭರ್ತಿ ಮಾಡಿರುವ ವಿಳಾಸದಲ್ಲಿ ವಾಸಿಸುತ್ತಿರುವ ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ನಮೂದಿಸಿ, ಸಂಬಂಧವನ್ನು ಆಯ್ಕೆ ಮಾಡಿ, ಹಾಗೂ ಅವರ ವೋಟರ್‌ ನಂಬರ್‌ಅನ್ನು ಎಂಟರ್‌ ಮಾಡಿ. Next ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-18: ನೀವು ಭರ್ತಿ ಮಾಡಿರುವ ಎಲ್ಲ ಮಾಹಿತಿ ಸತ್ಯವಿದೆ ಹಾಗೂ ನಾನು ಯಾವುದೇ ತಪ್ಪು ಮಾಹಿತಿ ನೀಡಿಲ್ಲವೆಂದು ಧೃಡೀಕರಣ ಮಾಡಿ. Next ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-19: ಅಂತಿಮವಾಗಿ ಎಲ್ಲ ವಿವರ ಭರ್ತಿ ಮಾಡಿದ ನಂತರ Captcha ಎಂಟರ್‌ ಮಾಡಿ. ಎಲ್ಲ ವಿವರಗಳನ್ನು Save ಮಾಡಿ. ಹಾಗೂ Preview and Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.

ನೀವು ಸಲ್ಲಿಸಿರುವ ಅರ್ಜಿಯನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ನಿಮ್ಮನ್ನು ಮತದಾರ ಪಟ್ಟಿಯಲ್ಲಿ ಸೇರಿಸುತ್ತಾರೆ. ಹಾಗೂ ನಿಮಗೆ ಹೊಸ ವೋಟರ್‌ ಕಾರ್ಡ್‌ ನೀಡುತ್ತಾರೆ.

New Voter Id Card ಪ್ರಮುಖ ಲಿಂಕ್‌ಗಳು:

ಅರ್ಜಿ ಸಲ್ಲಿಸುವ ಲಿಂಕ್:‌ Apply ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: voters.eci.gov.in

ಇತರೆ ಮಾಹಿತಿಗಳನ್ನು ಓದಿ:

Voter ID Card Download Online 2024

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಕೃಷಿ ಭಾಗ್ಯ ಯೋಜನೆ: ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ

Ration Card Status Karnataka Online 2024

Telegram Group Join Now
WhatsApp Group Join Now

Leave a Comment