✅ರೇಷನ್‌ ಕಾರ್ಡ್‌ ತಿದ್ದುಪಡಿ ಮತ್ತೆ ಆರಂಭ | Ration Card Correction, Member Add Online Karnataka 2023 @ ahara.kar.nic.in

Telegram Group Join Now
WhatsApp Group Join Now

Ration Card Correction Karnataka: ಎಲ್ಲರಿಗೂ ನಮಸ್ಕಾರ.. ನೀವು ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಬೇಕಾ..? ಅಥವಾ ನಿಮ್ಮ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಬೇಕಾ? ಹಾಗಿದ್ದರೆ ನಿಮಗೆ ಗುಡ್‌ ನ್ಯೂಸ್‌ ಇದೆ.

ಅನ್ನಭಾಗ್ಯ ಮತ್ತು ಸರ್ಕಾರದ ಇತರೆ ಯೋಜನೆಗಳ ಪ್ರಯೋಜನ ಪಡೆಯಲು ನೀವು ಪ್ರಯತ್ನ ಮಾಡುತ್ತಿದ್ದೀರಾ.. ಹಾಗಿದ್ದರೆ ಪಡಿರತ ಚೀಟಿ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆ ಪ್ರಕ್ರೀಯೆ ಮತ್ತೆ ಆರಂಭವಾಗಿದೆ.

Ration Card Correction, Member Add in Ration Card Karnataka

ಕುಟುಂದ ಸದಸ್ಯರ ಹೆಸರು ಸೇರ್ಪಡೆ (Ration Card Update Karnataka) ಆಗದ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಆರೋಗ್ಯ ಸೌಲಭ್ಯದಿಂದ ವಂಚಿತರಾಗಿದ್ದರು. ಇದನ್ನು ಅರಿತು ಸರ್ಕಾರ ತಿದ್ದುಪಡಿ ಹಾಗೂ ಹೆಚ್ಚುವರಿ ಸದಸ್ಯರ ಹೆಸರು ಸೇರ್ಪಡೆಗೆ ಅನುಮೊದನೆ ನೀಡಿದೆ.

“ಪ್ರಸ್ತುತ ಪಡಿತರ ಚೀಟಿಯಲ್ಲಿ ಫಲಾನುಭವಿಗಳ ಮಾಹಿತಿಯ ತಿಮ್ಮಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ.”

ಅಗತ್ಯ ದಾಖಲೆಗಳೊಂದಿಗೆ ರೇಷನ್‌ ಕಾರ್ಡ್‌ತಿದ್ದುಪಡಿ ಮತ್ತು ಸದಸ್ಯರನ್ನು ಸೇರ್ಪಡೆ ಮಾಡಬಹುದು. ಹಾಗೂ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹುದು.

ರೇಷನ್‌ ಕಾರ್ಡ್‌ನಲ್ಲಿ ಈ ತಿದ್ದುಪಡಿ ಮಾಡಬಹುದು

  • ಹೊಸ ಸದ್ಯಸರ ಸೇರ್ಪಡೆ ಹಾಗೂ ತೆಗೆದು ಹಾಕುವುದು
  • ಹೆಸರು ಮತ್ತು ಇತರೆ ಮಾಹಿತಿ ತಿದ್ದುಪಡಿ
  • ಕುಟುಂಬ ಮುಖ್ಯಸ್ಥರ ಬದಲಾವಣೆ

ರೇಷನ್‌ ಕಾರ್ಡ್‌ತಿದ್ದುಪಡಿ ಹಾಗೂ ಸೇರ್ಪಡೆಗೆ ಮತ್ತೆ ಅವಕಾಶ :
ರೇಷನ್‌ ಕಾರ್ಡ್‌ತಿದ್ದುಪಡಿ (Ration Card Correction) ಹಾಗೂ ಸೇರ್ಪಡೆ ಮಾಡಲು ಇತ್ತಿಚೇಗೆ ಅವಕಾಶ ನೀಡಲಾಗಿತ್ತು, ಆಹಾರ ಇಲಾಖೆಯ ಸರ್ವರ್‌ ಸಮಸ್ಯೆಯಿಂದಾಗಿ ಬಹಳಷ್ಟು ಜನರಿಗೆ ಪಡಿತರ ಚೀಟಿ ತಿದ್ದುಪಡಿ ಮಾಡಲು ಸಾಧ್ಯವಾಗದ ಕಾರಣ ಈಗ ಮತ್ತೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 5 ರಿಂದ ಅಕ್ಟೋಬರ್ 13 ರವರೆಗೆ ಹೊಸ ಸದ್ಯಸರ ಸೇರ್ಪಡೆ, ಹೆಸರು ಮತ್ತು ಇತರೆ ಮಾಹಿತಿ ತಿದ್ದುಪಡಿ, ಕುಟುಂಬ ಮುಖ್ಯಸ್ಥರ ಬದಲಾವಣೆ ಮಾಡುವುದಕ್ಕಾಗಿ ಅವಕಾಶ ಕಲ್ಪಿಸಲಾಗಿದೆ.

1) ಅಕ್ಟೋಬರ್ 5 ರಿಂದ 7 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ಪಡಿತರ ಚೀಟಿ ತಿದ್ದುಪಡಿ ಮತ್ತು ಸೇರ್ಪಡೆಗೆ ಅವಕಾಶ ನೀಡಲಾಗಿದೆ.

2) ಅಕ್ಟೋಬರ್ 8 ರಿಂದ 10 ರವರೆಗೆ ಬಾಗಲಕೋಟೆ, ಚಾಮರಾಜನಗರ, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಗದಗ, ಕಾವೇರಿ, ಕೊಡಗು , ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯಲ್ಲಿ ಅವಕಾಶ ನೀಡಲಾಗುತ್ತಿದೆ.

3) ಅಕ್ಟೋಬರ್ 11 ರಿಂದ 13 ರವರೆಗೆ ಬಳ್ಳಾರಿ, ಕಲಬುರಗಿ, ಚಿಕ್ಕಬಳ್ಳಾಪುರ, ಬೀದರ್, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ.

Ration Card Correction ಮಾಡುವುದು ಹೇಗೆ?
ನಿಮ್ಮ ಹತ್ತಿರದ ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌, CSC ಕೇಂದ್ರ ಅಥವಾ ಸರ್ಕಾರ ಅನುಮೊದಿಸಿರುವ ಆನ್‌ಲೈನ್‌ ಕೇಂದ್ರಗಳಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಬಹುದು.

ಇತರೆ ಮಾಹಿತಿಗಳನ್ನು ಓದಿ

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

ವಾಹನ ಖರೀದಿಸಲು 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ ಯೋಜನೆಯ Status Check ಮಾಡಿ

ರೇಷನ್ ಕಾರ್ಡ್ Status ಅನ್ನು ಮೊಬೈಲ್‌ನಲ್ಲೇ ಚೆಕ್‌ ಮಾಡಿ

Telegram Group Join Now
WhatsApp Group Join Now

Leave a Comment