ವಾಹನ ಖರೀದಿಸಲು 4 ಲಕ್ಷ ಸಹಾಯಧನ, ಅರ್ಜಿ ಆಹ್ವಾನ | Vehicle Subsidy Scheme In Karnataka Apply Online

ಎಲ್ಲರಿಗೂ ನಮಸ್ಕಾರ, ನೀವು ವಾಹನ ಚಾಲಕರಾ..? ಆಟೋ ರಿಕ್ಷಾ, ಟ್ಯಾಕ್ಸಿ, ಸರಕು ವಾಹನ ಖರೀದಿಸಲು ನಿಮಗೆ ಸರ್ಕಾರದ ಸಬ್ಸಿಡಿ (Vehicle Subsidy Scheme In Karnataka) ಹಣ ಪಡೆಯಬೇಕೆ? ಹಾಗಿದ್ದರೆ ನಿಮಗೆ ನಾವು ಇಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಈ ಲೇಖನವನ್ನು ಓದಿ ಹಾಗೂ ಸರ್ಕಾರದ ಸಹಾಯಧನ ಪಡೆದು ನಿಮ್ಮ ವೃತ್ತಿ ಜೀವನನ್ನು ಯಶಸ್ವಿಯಾಗಿಸಿ.

ಆಟೋ ರಿಕ್ಷಾ, ಟ್ಯಾಕ್ಸಿ, ಸರಕು ವಾಹನಗಳನ್ನು ಖರೀದಿಸಲು Swavalambi Sarathi Yojana Karnataka ಅಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಅರ್ಹ ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ.75 ರಷ್ಟು ಸಹಾಯಧನ ಗರಿಷ್ಟ ರೂ.4 ಲಕ್ಷ ರ ವರೆಗೆ ಸಹಾಯಧನಯನ್ನು ನೀಡುತ್ತಾರೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

Vehicle Subsidy Scheme In Karnataka

ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ (Swawalambi Sarathi)
ಸಹಾಯಧನ ಮೊತ್ತ: ವಾಹನದ ಮೌಲ್ಯದ ಶೇ.75 ರಷ್ಟು ಅಥವಾ ಗರಿಷ್ಠ ರೂ. 4 ಲಕ್ಷದ ವರೆಗೆ
ಅರ್ಜಿದಾರರ ವಯಸ್ಸು: 18 ರಿಂದ 55 ವರ್ಷ

Swavalambi Sarathi Yojana Karnataka ದಾಖಲೆಗಳು:

  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ (Caste Certificate)
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ (Income Certificate)
  • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
  • ವಾಹನ ಚಾಲನಾ ಪರವಾನಗಿ (Driving Licence) ಪ್ರತಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ವಾಹನದ ಅಂದಾಜು ದರಪಟ್ಟಿ
  • ಸ್ವಯಂ ಘೋಷಣೆ ಪತ್ರ
  • ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ
  • ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ
  • ಅರ್ಜಿದಾರರು ನಿರುದ್ಯೋಗಿ ಆಗಿರಬೇಕು. (ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು).

Taxi Subsidy Scheme Karnataka 2023: ಯಾರು ಅರ್ಜಿ ಸಲ್ಲಿಸಬಹುದು?
ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
  • ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
  • ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
  • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.
  • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ

2023-2024 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಸ್ವಾವಲಂಬಿ ಸಾರಥಿ ಯೋಜನೆಯ ಅರ್ಜಿ ಆಹ್ವಾನಿಸಲಾಗುತ್ತಿದೆ.

Swavalambi Sarathi Karnataka ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.

Swavalambi Sarathi Yojana Karnataka Application Link:
ಆನ್‌ಲೈನ್‌ ಅರ್ಜಿ ಲಿಂಕ್‌:
ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ sevasindhu.karnataka.gov.in

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-12-2023

ವಿಷೇಶ ಸೂಚನೆಗಳು:

  • ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೊರ್ಟಲ್ ಮೂಲಕವೇ ಸಲ್ಲಿಸುವುದು.
  • ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
  • ಫಲಾಪೇಕ್ಷಿಗಳು ‘ಗ್ರಾಮ ಒನ್ʼ, ʼಬೆಂಗಳೂರು ಒನ್ʼ, ʼಕರ್ನಾಟಕ ಒನ್ʼ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ನಿಯಮಗಳು: ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಆಯ್ಕೆ ಸಮಿತಿ:

  1. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು- ಅಧ್ಯಕ್ಷರು
  2. ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ- ಉಪಾಧ್ಯಕ್ಷರು
  3. ಸಂಬಂಧಪಟ್ಟ ಜಿಲ್ಲೆಯ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು – ಸದಸ್ಯರು
  4. ಸಂಬಂಧಪಟ್ಟ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ -ಸದಸ್ಯರು
  5. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿ
  6. ನಿಗಮದ ಜಿಲ್ಲಾ ವ್ಯವಸ್ಥಾಪಕರು

ಇತರೆ ಮಾಹಿತಿಗಳನ್ನು ಓದಿ

SC ST ಸಬ್ಸಿಡಿ ಯೋಜನೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

KSRTC: ಡ್ರೈವರ್, ಕಂಡಕ್ಟರ್ ಹುದ್ದೆಗಳ ನೇಮಕಾತಿ 2023

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment