ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ (SSLC Supplementary Result 2023) ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಪೂರಕ ಪರೀಕ್ಷೆಯ ಫಲಿತಾಂಶವನ್ನು ನಾಳೆ ಬೆಳಗ್ಗೆ 11 ಗಂಟೆಯ ನಂತರ ಪ್ರಕಟಿಸಲಿದ್ದಾರೆ.
ಈ ಕುರಿತು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ. ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 12 ರಿಂದ ಜೂನ್ 19 ರ ವರೆಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಪರೀಕ್ಷೆ ಬರೆ ವಿದ್ಯಾರ್ಥಿಗಳು ಫಲಿತಾಂಶ ನೋಡಲು ಇಲಾಖೆಯ ಅಧಿಕೃತ ವೆಬ್’ಸೈಟ್ karresults.nic.in ನಲ್ಲಿ ಬೆಳಗ್ಗೆ 11 ಗಂಟೆಯ ನಂತರ ಲಾಗ್ ಇನ್ ಮಾಡಿ ಫಲಿತಾಂಶವನ್ನು ನೋಡಬಹುದು.
SSLC Supplementary Result 2023 ನೋಡುವುದು ಹೇಗೆ?
- ಮೊದಲಿಗೆ ಇಲಾಖೆಯ ಅಧಿಕೃತ ವೆಬ್’ಸೈಟ್ karresults.nic.in ಭೇಟಿ ನೀಡಿ.
- ನಂತರ ಅಲ್ಲಿ SSLC ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಎಂದಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- ತದನಂತರ ‘Enter Reg No.’ ಎಂಬಲ್ಲಿ ನಿಮ್ಮ ನೋಂದಣಿ ಸಂಖ್ಯೆ ಎಂಟರ್ ಮಾಡಿ, ಅದರ ಕೇಳಗೆ ‘DOB’ ಎಂಬ ಆಯ್ಕೆ ಇರುತ್ತದೆ. ನಿಮ್ಮ ಜನ್ಮ ದಿನಾಂಕ ಎಂಟರ್ ಮಾಡಿ.
- ಕೊನೆಯದಾಗಿ ಅಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ನೋಡಿ.
ಸರ್ಕಾರ ಇತರೆ ಯೋಜನೆಗಳು