SSP ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | SSP Post Matric Scholarship 2023-24 Apply Online @ssp.karnataka.gov.in

Telegram Group Join Now
WhatsApp Group Join Now

ನಮಸ್ಕಾರ ಎಲ್ಲರಿಗೂ. ಮೆಟ್ರಿಕ್ ನಂತರದ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿಲು ನೀವು ಕಾಯುತ್ತಿದ್ದೀರಿ. ಇದೀಗ ಸರ್ಕಾರ ನಿಮ್ಮ ಕಾಯುವಿಕೆಯನ್ನು ದೂರ ಮಾಡಿದೆ. SSP Post Matric Scholarship 2023 ಕ್ಕಾಗಿ ಸರ್ಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯನ್ನು ರೂಪಿಸಲಾಗಿದೆ. ಹಾಗಾಗಿ ಸರ್ಕಾರ ನೀಡುತ್ತೀರುವ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಉನ್ನತ ಶಿಕ್ಷಣ ಪೂರೈಸಿಕೊಳ್ಳಬಹುದು.

SSP Post Matric Scholarship 2023 ವಿವರ:

  • ಯೋಜನೆ ಹೆಸರು: ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ
  • ವಾರ್ಷಿಕ ಆದಾಯ ಮಿತಿ: ರೂ. 2.50 ಲಕ್ಷದ ಮೀರಿರಬಾರದು

Freeship Card 2023 For SC Students:

ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ವಾರ್ಷಿಕ ಆದಾಯ ಮಿತಿ ರೂ. 2.50 ಲಕ್ಷದ ಒಳಗಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ Freeship Card ಮಂಜೂರು ಮಾಡುತ್ತಾರೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ:

ಎಲ್ಲಾ ಅರ್ಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಾಗಿ ಅರ್ಜಿ ಕರೆಯಲಾಗಿದ್ದು, ಪದವಿ ಪೂರ್ವ, ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಪ್ರವೇಶ ನೀಡಲಾಗುತ್ತದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Freeship Card ಪ್ರಯೋಜನಗಳು:

  1. ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷದ ಒಳಗಿರುವ ಪರಿಶಿಷ್ಟ ಜಾತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲಾ ಮೆಟ್ರಿಕ್ ನಂತರದ ಕೋರ್ಸುಗಳಿಗೆ ಉಚಿತ ಪ್ರವೇಶ
  1. ಸರ್ಕಾರವು ಆಯಾಯ ಕೋರ್ಸಿಗೆ ನಿಗದಿಪಡಿಸಿದ ದರಗಳಲ್ಲಿ ಶುಲ್ಕವನ್ನು ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಾಗುವುದು.
  2. ಯಾವುದೇ ಶಿಕ್ಷಣ ಸಂಸ್ಥೆ ಸದರಿ ಪರಿಶಿಷ್ಟ ಜಾತಿ ವಿದ್ಯಾರ್ಥಿಯಿಂದ ಮರುಪಾವತಿ ಮಾಡಲಾಗುವ ಶುಲ್ಕಗಳನ್ನು ಹೊರತುಪಡಿಸಿ ಇತರೆ ಕಡ್ಡಾಯ ಶುಲ್ಕಗಳನ್ನು ಆರಂಭದಲ್ಲಿಯೇ ಪಾವತಿ ಮಾಡುವಂತೆ ಒತ್ತಾಯ ಮಾಡತಕ್ಕದ್ದಲ್ಲ.

SSP Post Matric Scholarship 2023 Documents:

  1. ಆಧಾರ್ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವ ಹಾಗೆ ಹೆಸರು
  2. ಮೊಬೈಲ್‌ ಸಂಖ್ಯೆ
  3. ಇ-ಮೇಲ್ ಐ.ಡಿ.
  4. ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ
  5. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ
  6. ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ
  7. ವಿದ್ಯಾರ್ಥಿಯು ವಾಸವಿರುವ ಜಿಲ್ಲೆ , ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
  8. ವಿದ್ಯಾರ್ಥಿಯ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ
  9. ಸಂಬಂದಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ)
  10. ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ)

SSP Scholarship 2023 Links:
Post Matric Scholarship Application Link: Apply Online
ಅಧಿಕೃತ ವೆಬ್‌ಸೈಟ್:‌ ssp.postmatric.karnataka.gov.in, ssp.karnataka.gov.in

ಇತರೆ ಮಾಹಿತಿಗಳನ್ನು ಓದಿ

OBC Scholarship ಯೋಜನೆ, ಅರ್ಜಿ ಆಹ್ವಾನ

Karnataka SSP Scholarship 2023 For Pre Matric Students

IAS KAS Free Coaching ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

1 thought on “SSP ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | SSP Post Matric Scholarship 2023-24 Apply Online @ssp.karnataka.gov.in”

Leave a Comment