KAS, UPSC ಉಚಿತ ತರಬೇತಿ 2023, ಅರ್ಜಿ ಆಹ್ವಾನ | Free Coaching Karnataka 2023 For SC ST Apply @sw.kar.nic.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ (Free Coaching Karnataka 2023) ನೀಡಲು ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

UPSC, KAS, BANKING, GROUP- C, RRB, SSC, JUDICIARY Services ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ವಸತಿಯುತ ಸಂಯೋಜಿತ ಪದವಿಯೊಂದಿಗೆ UPSC/KAS ತರಬೇತಿಗೆ ನಿಯೋಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Free Coaching Karnataka 2023 ವಿವರ:

ಪರೀಕ್ಷೆ ಹೆಸರುFree Coaching 2023
ತರಬೇತಿ ವಿವರUPSC, KAS, BANKING, GROUP- C, RRB, SSC, JUDICIARY Services
ವಯಸ್ಸು18 ರಿಂದ 40 ವರ್ಷ
ಕೊನೆಯ ದಿನಾಂಕ 29-11-2023

2023-24ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರೀಕ್ಷಾ ಪೂರ್ವಭಾವಿ ತರಬೇತಿಗಾಗಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಕರೆಯಲಾಗಿದೆ.

ತರಬೇತಿ ಅವಧಿ:

 • UPSC ತರಬೇತಿ: ಪ್ರಿಲಿಮ್ಸ್‌ ಪರೀಕ್ಷೆಗೆ 6 ತಿಂಗಳ ಹಾಗೂ Mains ಪರೀಕ್ಷೆಗೆ 3 ತಿಂಗಳ ತರಬೇತಿ ನೀಡುತ್ತಾರೆ. (ಪ್ರಿಲಿಮ್ಸ್‌ ಪಾಸಾದವರು Mains ಉಚಿತ ತರಬೇತಿಗೆ ಅರ್ಹರಾಗಿರುತ್ತಾರೆ.).
 • KAS ತರಬೇತಿ: ಕೆಎಎಸ್‌ ಕೋರ್ಸ್‌ಗೆ 7 ತಿಂಗಳ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ.
 • ಬ್ಯಾಂಕಿಂಗ್/ಗ್ರೂಪ್ -ಸಿ/ ಎಸ್.ಎಸ್.ಸಿ ಮತ್ತು ಆರ್.ಆರ್.ಬಿ/ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ – 3 ತಿಂಗಳ ತರಬೇತಿ ಇರುತ್ತದೆ.

ಅರ್ಹತೆಗಳು:

ಶೈಕ್ಷಣಿಕ ಅರ್ಹತೆ: ಈ ತರಬೇತಿಗಳಿಗೆ ಪದವಿ ಉತ್ತೀರ್ಣರಾದವರು ಮತ್ತು ಪದವಿ ಅಂತಿಮ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಹಂತದಲ್ಲಿ ಪದವಿ ವ್ಯಾಸಂಗ ಪೂರ್ಣಗೊಳಿಸಿರುವ ಬಗ್ಗೆ ಅಧಿಕೃತ ದಾಖಲೆಗಳನ್ನು ನೀಡಬೇಕು.

ಅಭ್ಯರ್ಥಿಯ ಸಾಮಾನ್ಯ ಅರ್ಹತೆಗಳು:

 1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
 3. ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ, ನಿಗಧಿತ ಪ್ರಾಧಿಕಾರದಿಂದ ನಿಗಧಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪುಮಾಣ ಪತ್ರ ಪಡೆದಿರಬೇಕು.
 4. ವಿದ್ಯಾರ್ಥಿನಿಲಯ / ಕ್ರೈಸ್ ವಿದ್ಯಾರ್ಥಿನಿಲಯ / ಸಫಾಯಿ ಕರ್ಮಚಾರಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ನಿಗಧಿತ ನಮೂನೆಯಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.

ವಾರ್ಷಿಕ ಆದಾಯ: ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 5 ಲಕ್ಷ ಮೀರಿರಬಾರದು.

ಆಯ್ಕೆ ವಿಧಾನ:

 • ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
 • ಅಂಕಗಳ ಮೆರಿಟ್ ಆಧಾರದ ಮೇಲೆ ಆನ್-ಲೈನ್ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳನ್ನು ತರಬೇತಿ ಸಂಸ್ಥೆಗೆ ನಿಯೋಜಿಸಲಾಗುತ್ತದೆ.

ಶಿಷ್ಯವೇತನ (ಮಾಸಿಕ):

 • UPSC ತರಬೇತಿ: 1) ದೆಹಲಿ-10,000 ರೂ., 2) ಹೈದರಾಬಾದ್-8,000 ರೂ., 3) ಬೆಂಗಳೂರು-5,000 ರೂ.
 • KAS ತರಬೇತಿ: 5,000 ರೂ.
 • ಬ್ಯಾಂಕಿಂಗ್/ಗ್ರೂಪ್ -ಸಿ/ ಎಸ್.ಎಸ್.ಸಿ ಮತ್ತು ಆರ್.ಆರ್.ಬಿ/ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ: 5,000 ರೂ.

ಅಗತ್ಯ ದಾಖಲೆಗಳು:

 • ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
 • ಆಧಾರ ಕಾರ್ಡ್‌
 • SSLC ಮಾರ್ಕ್ಸ್ ಕಾರ್ಡ್
 • ಜಾತಿ ಮತ್ತು ಆದಾಯ ಪ್ರಮಾಣಪತ್ರ
 • ಪದವಿ ಅಂಕಪಟ್ಟಿ
 • ಬ್ಯಾಂಕ್ ಖಾತೆ ವಿವರ

www.sw.kar.nic.in 2023 free coaching ಪ್ರಮುಖ ದಿನಾಂಕಗಳು:
ಪ್ರಕಟಣೆ ಹೊರಡಿಸಿದ ದಿನಾಂಕ: 02-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-11-2023

SC ST Free Coaching Karnataka 2023 Application Link:
ಪ್ರಕಟಣೆ: ಡೌನ್’ಲೋಡ್
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: sw.kar.nic.in, https://swdservices.karnataka.gov.in/petccoaching/
ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಇತರೆ ಮಾಹಿತಿಗಳನ್ನು ಓದಿ

Prize Money Scholarship 2023 Apply Online

Labour Department Scholarship 2023

SSP Scholarship 2023, ಆನ್‌ಲೈನ್‌ ಅರ್ಜಿ ಆಹ್ವಾನ

SBI ನಿಂದ 10,000 ರೂ. ವಿದ್ಯಾರ್ಥಿವೇತನ, ಅರ್ಜಿ ಆಹ್ವಾನ

KPSC ಗ್ರುಪ್-ಸಿ ಪರೀಕ್ಷೆ ಅಧಿಕೃತ ಕೀ ಉತ್ತರ ಪ್ರಕಟ

Telegram Group Join Now
WhatsApp Group Join Now

Leave a Comment