KSRTC: ಡ್ರೈವರ್, ಕಂಡಕ್ಟರ್ ಹುದ್ದೆಗಳ ನೇಮಕಾತಿ 2023 | KSRTC Recruitment 2023 Notification For Driver, Conductor Soon

Telegram Group Join Now
WhatsApp Group Join Now

KSRTC Recruitment 2023: ನಮಸ್ಕಾರ ಎಲ್ಲರಿಗೂ.. KSRTC, NWKRTC, BMTC, KKRTC ಸಾರಿಗೆ ಸಂಸ್ಥೆಗಳಲ್ಲಿ ಉದ್ಯೋಗ ಮಾಡಬಯಸುವ ಅಭ್ಯರ್ಥಿಗಳಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದ್ದು. ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರಿಗಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೊರತೆ ಇರುವುದನ್ನು ಮನಗಂಡು ಸರ್ಕಾರ ಡ್ರೈವರ್ ಕಮ್ ಕಂಡಕ್ಟರ್, ಕಂಡಕ್ಟರ್ ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ತಯಾರಾಗಿದೆ.

KSRTC Recruitment 2023

ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ 13000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ಕೇಳಲಾಗಿತ್ತು, ಅದರಂತೆ ಸರ್ಕಾರ ಅನುಮತಿ ನೀಡಲಾಗಿದ್ದು, ಈ ಕೇಳಗಿಂತೆ ಸಂಸ್ಥೆವಾರು ನೇಮಕಾತಿ ವಿವರ ನೀಡಲಾಗಿದೆ.

ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರುಷಗಳಿಂದ ಅಂದರೆ 2016 ರ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ. 2016 ರಿಂದ ಇಲ್ಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669 ಖಾಲಿ ಹುದ್ದೆಗಳಿದ್ದವು. 13000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು, ಅದರಂತೆ ಮೊದಲನೇ ಹಂತದಲ್ಲಿ 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರಕಿದೆ.

ಸಂಸ್ಥೆವಾರು ನೇಮಕಾತಿ ವಿವರ

KSRTC Vacancy: ಡ್ರೈವರ್ ಕಮ್ ಕಂಡಕ್ಟರ್: 2000 ಮತ್ತು ತಾಂತ್ರಿಕ ಸಿಬ್ಬಂದಿ: 300
NWKRTC Vacancy: ಡ್ರೈವರ್ ಕಮ್ ಕಂಡಕ್ಟರ್ – 2000
BMTC Vacancy: ಕಂಡಕ್ಟರ್ – 2500
KKRTC Vacancy: ಈ ಸಂಸ್ಥೆಯಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಚಾಲನಾ ಪರೀಕ್ಷೆ ನಡೆಯುತ್ತಿದ್ದು, ಜನವರಿ 2024 ರ ಕೊನೆಯಲ್ಲಿ ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಹಾಗೂ KKRTC ಯಲ್ಲಿ 300 ಕಂಡಕ್ಟರ್ ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ.

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟಾರೆ 8719 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರಕಿದೆ. ಇನ್ನೇನು ಆನ್‌ಲೈನ್‌ ಅರ್ಜಿ ಆರಂಭವಾಗಲಿದೆ.

KSRTC Recruitment 2023 ನೇಮಕಾತಿಯ ಮುಂಬರುವ Updates ಪಡೆಯಲು ನಮ್ಮ ವಾಟ್ಸ್‌ಆಫ್‌ ಮತ್ತು ಟೇಲಿಗ್ರಾಮ್‌ ಗ್ರುಪ್‌ಗೆ Join ಆಗಿ ಮತ್ತು ದಿನ ನಿತ್ಯ ನೋಟಿಫಿಕೇಸ್‌ ಪಡೆಯಲು ನಮ್ಮ ವೆಬ್‌ಸೈಟ್‌ಅನ್ನು Subscribe ಮಾಡಿ.

ಇತರೆ ಮಾಹಿತಿಗಳನ್ನು ಓದಿ

ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ 2023

ಸ್ವಂತ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment