ಎಲ್ಲರಿಗೂ ನಮಸ್ಕಾರ, ರೈತರಿಗೆ ಗುಡ್ ನ್ಯೂಸ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan DBT) 19ನೇ ಕಂತಿನ 2,000 ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.
ಫೆಬ್ರವರಿ 24 ರಂದು ಬಿಹಾರದ ಭಾಗಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 19 ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ.
ದೇಶದ ಅರ್ಹ 9.8 ಕೋಟಿ ರೈತರಿಗೆ 2,000 ರೂ. ರಂತೆ ಒಟ್ಟು 22 ಸಾವಿರ ಕೋಟಿ ರೂ. ಹಣವನ್ನು ನೇರವಾಗಿ ಅನ್ನದಾತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
PM Kisan ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರತಿ 4 ತಿಂಗಳಿಗೊಮ್ಮೆ 2,000 ರೂ. ಅಂತೆ ವಾರ್ಷಿಕ 6,000 ರೂ. ಹಣವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ರೈತರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶವನ್ನು ಈ ಯೋಜನೆಯಿಂದ ಹೊಂದಿದೆ.

ಅರ್ಹ ರೈತರು ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ಬಳಸಿಕೊಂಡು OTP ಆಧಾರಿತ e-KYC ಮಾಡಬಹುದು ಹಾಗೂ ಬಯೋಮೆಟ್ರಿಕ್ ಆಧಾರಿತ e-KYC ಅನ್ನು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಮಾಡಬಹುದು. ಕೆವೈಸಿ ಯಾಗದ ರೈತರ ಖಾತೆಗೆ PM ಕಿಸಾನ್ ಯೋಜನೆಯ ಹಣವು ಸಂಮದಾಯವಾಗುವುದಿಲ್ಲ.
ಫಲಾನುಭವಿಗಳು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಅಥವಾ ಇಲ್ಲವೆ ಎಂಬುದನ್ನು ಚೆಕ್ ಮಾಡಿಸಿಕೊಳ್ಳಿ. ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ಲಿಂಕ್ ಮಾಡಿಸಿಕೊಳ್ಳಬೇಕು.
ಸರ್ಕಾರ ಇತರೆ ಯೋಜನೆಗಳು:

