ಎಲ್ಲರಿಗೂ ನಮಸ್ಕಾರ, ನೀವು ಕೂಡ PM ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19 ನೇ ಕಂತಿಹ ಹಣ (PM Kisan 19th Installment) ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕ 6,000 ರೂ. ಅನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ವಾರ್ಷಿಕ 3 ಕಂತುಗಳಲ್ಲಿ ತಲಾ 2,000 ರೂ. ವನ್ನು ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಾರೆ.
PM Kisan 19th Installment Date 2025:
PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18 ನೇ ಕಂತಿನ ಹಣವನ್ನು 05-10-2024 ರಂದು ಅರ್ಹ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಇನ್ನು 19 ನೇ ಕಂತಿನ 2,000 ರೂ. ಹಣವನ್ನು ನಾಳೆ (24-02-2025) ಮಧ್ಯಾಹ್ನ 2 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ.
ಇನ್ನೂವರೆಗೆ ಯಾರು PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ eKYC ಮಾಡಿಸಿಕೊಂಡಿರುವುದಿಲ್ಲ ಅಂತಹ ರೈತರು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಿ. ಹಾಗೆಯೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಎಂಬುದನ್ನು ಚೆಕ್ ಮಾಡಿಸಿಕೊಳ್ಳಿ. ಒಂದು ವೇಳೆ ಆಧಾರ್ ಲಿಂಕ್ ಆಗದಿದ್ದರೆ ಕೂಡಲೇ ಲಿಂಕ್ ಮಾಡಿಸಿಕೊಳ್ಳಿ.
PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ eKYC ಅನ್ನು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ನಲ್ಲಿ ಕೆವೈಸಿ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಗಳಿಗೆ ಭೇಟಿ ನೀಡಿ eKYC ಮಾಡಿಸಿಕೊಳ್ಳಬಹುದು. eKYC ಆಗದ ರೈತರ ಖಾತೆಗೆ 19 ನೇ ಕಂತಿನ ಹಣವು ವರ್ಗಾವಣೆಯಾಗುವುದಿಲ್ಲ.
ಸರ್ಕಾರ ಇತರೆ ಯೋಜನೆಗಳು: