Motorola Edge 60 Fusion: ಮಾರುಕಟ್ಟೆಗೆ ಬರಲಿದೆ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಸ್ಮಾರ್ಟ್’ಫೋನ್

ಎಲ್ಲರಿಗೂ ನಮಸ್ಕಾರ, ಮೊಟೊರೊಲಾ ಕಂಪನಿಯು ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಮೊಟೊರೊಲಾ ಎಡ್ಜ್ ಸರಣಿಯ ಮತ್ತೊಂದು ಹೊಸ ಸ್ಮಾರ್ಟ್’ಫೋನ್ ಅನ್ನು ಬಿಡುಗಡೆ ಮಾಡಲಿದ್ದು, Motorola Edge 60 Fusion ಪೋನ್‌ನಲ್ಲಿ ಯಾವೇಲ್ಲಾ ಹೊಸ ಪೀಚರ್ಸ್’ಗಳನ್ನು ಕಂಪನಿಯು ನೀಡಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

Motorola Edge 60 Fusion ವಿಶೇಷತೆಗಳು:

ಮೊಟೊರೊಲಾ ಎಡ್ಜ್ 60 ಫ್ಯೂಷನ್ ಸ್ಮಾರ್ಟ್’ಫೋನ್ ಸೋರಿಕೆಯಾದ ವರದಿಗಳ‌ ಪ್ರಕಾರ ಏಪ್ರಿಲ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಅದರ ಮೊದಲ ಮಾರಾಟ ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ. ಈ ಪೋನ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಹಾಗೂ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ಕ್ಯಾಮೆರಾ ಮಾಹಿತಿ:
Motorola Edge 60 Fusion ಪೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರವ ಸಾಧ್ಯತೆಗಳಿವೆ, ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT700 ಪ್ರಾಥಮಿಕ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಬಣ್ಣಗಳ‌ ಮಾಹಿತಿ:
ಈ ಸ್ಮಾರ್ಟ್ ಫೋನ್ ಮೂರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ. light blue, salmon (light pink), and lavender (light purple).

Edge 60 Fusion ಮೊಬೈಲ್ ನ ಬೆಲೆ ಸೊರೀಕೆಯಾದ ವರದಿಗಳ ಪ್ರಕಾರ 33,100 ರೂ. ಇರುವ ಸಾಧ್ಯತೆಗಳಿವೆ. ಹೆಚ್ಚಿನ ಮಾಹಿತಿಯು ಈ ಸ್ಮಾರ್ಟ್’ಫೋನ್ ಬಿಡುಗಡೆಯಾದ ನಂತರವೆ ತಿಳಿಯಲಿದೆ.

ಇತರೆ ಮಾಹಿತಿ ಓದಿ:

iQOO Neo 10R ಸ್ಮಾರ್ಟ್’ಫೋನ್ ಬಿಡುಗಡೆ

Lenovo Idea Tab Pro: ಲೆನೊವೊ ಕಂಪನಿ ಟ್ಯಾಬ್ ಬಿಡುಗಡೆ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment