Cooking Gas Price Hiked: ಗ್ರಾಹಕರಿಗೆ ಕಹಿ ಸುದ್ದಿ, ಅಡುಗೆ ಅನಿಲದ ದರ ಏರಿಕೆ. ಗ್ರಾಹಕರಿಗೆ ಗಾಯದ ಮೇಲೆ ಬೆಲೆ ಏರಿಕೆ ಬರೆ. ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗೆ ₹50 ಹೆಚ್ಚಳ ಮಾಡಲಾಗಿದೆ.
ಅಡುಗೆ ಅನಿಲ ಪೂರೈಕೆ ಮಾಡುವ ಕಂಪನಿಗಳು ಪ್ರತಿ ಸಿಲಿಂಡರ್ಗೆ 50 ರೂ. ದರ ಹೆಚ್ಚಳ ಮಾಡಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.
ಈ ಬೆಲೆ ಏರಿಕೆಯಿಂದ 14.2 ಕಿಲೋಗ್ರಾಂ ಎಲ್ಪಿಜಿ ಸಿಲಿಂಡರ್ನ ದರ ₹803 ರಿಂದ ₹853 ಹೆಚ್ಚಳ ಆಗಲಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್ನ ದರ ₹500 ರಿಂದ ₹550 ಏರಿಕೆಯಾಗಲಿದೆ.
ಕಳೆದ ವಾರ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 41 ರೂಪಾಯಿ ಇಳಿಕೆ ಮಾಡಲಾಗಿತ್ತು, ಆದರೆ ಇಂದು ಗೃಹ ಬಳಕೆ ಸಿಲಿಂಡರ್ ಬೆಲೆ 50 ರೂ.ಏರಿಕೆ ಮಾಡಲಾಗಿದೆ.
ಇತರೆ ಮಾಹಿತಿ ಓದಿ:

