Cooking Gas Price Hiked: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ; ಗ್ರಾಹಕರಿಗೆ ಗಾಯದ ಮೇಲೆ ಬೆಲೆ ಏರಿಕೆ ಬರೆ

Cooking Gas Price Hiked: ಗ್ರಾಹಕರಿಗೆ ಕಹಿ ಸುದ್ದಿ, ಅಡುಗೆ ಅನಿಲದ ದರ ಏರಿಕೆ. ಗ್ರಾಹಕರಿಗೆ ಗಾಯದ ಮೇಲೆ ಬೆಲೆ ಏರಿಕೆ ಬರೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗೆ ₹50 ಹೆಚ್ಚಳ ಮಾಡಲಾಗಿದೆ.

ಅಡುಗೆ ಅನಿಲ ಪೂರೈಕೆ ಮಾಡುವ ಕಂಪನಿಗಳು ಪ್ರತಿ ಸಿಲಿಂಡರ್‌ಗೆ 50 ರೂ. ದರ ಹೆಚ್ಚಳ ಮಾಡಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.

ಈ ಬೆಲೆ ಏರಿಕೆಯಿಂದ 14.2 ಕಿಲೋಗ್ರಾಂ ಎಲ್‌ಪಿಜಿ ಸಿಲಿಂಡರ್‌ನ ದರ ₹803 ರಿಂದ ₹853 ಹೆಚ್ಚಳ ಆಗಲಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್‌ನ ದರ ₹500 ರಿಂದ ₹550 ಏರಿಕೆಯಾಗಲಿದೆ. ​

ಕಳೆದ ವಾರ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 41 ರೂಪಾಯಿ ಇಳಿಕೆ ಮಾಡಲಾಗಿತ್ತು, ಆದರೆ ಇಂದು ಗೃಹ ಬಳಕೆ ಸಿಲಿಂಡರ್‌ ಬೆಲೆ 50 ರೂ.ಏರಿಕೆ ಮಾಡಲಾಗಿದೆ.

ಇತರೆ ಮಾಹಿತಿ ಓದಿ:

KCET Admit Card 2025 Download

ಗೃಹಲಕ್ಷ್ಮೀ ಯೋಜನೆಯ ಮತ್ತೊಂದು ಕಂತಿನ 2,000 ರೂ. ಹಣ ಜಮಾ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment